Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!
ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗದೇ ಹೋದಾಗ ಹುಲುಮಾನವರಾದ ನಮಗೆ ತಿಳಿಯುವುದು ಅಸಾಧ್ಯವಾದ ಮಾತು. ಆದರೆ ಸೋಲೊಪ್ಪಿಕೊಳ್ಳದ ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ. ಹೆಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಹೇಳಲಾಗಿದೆ. ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ. ಅದಕ್ಕೆ ಅಲ್ಲವೇ, ಹಿರಿಯರು ಹೇಳಿದ್ದು, ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲವೆಂದು.
ಆದರೆ ಇಂದು ಹೆಣ್ಣಿನ ಚಲನವಲನದ ಬಗ್ಗೆ ಹಿಂದಿನ ಶತಮಾನಕ್ಕಿಂತಲೂ ಕೊಂಚ ಹೆಚ್ಚು ನಮಗೆ ಅರಿವಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಹಿಂದಿಗಿಂತಲೂ ದೊರೆತ ಸ್ವಾತಂತ್ಯ, ಮತ್ತು ಗಂಡಿಗೆ ಸಮನಾಗಿ ಸಮಾಜದಲ್ಲಿ ದುಡಿದು ಬಾಳುವ ಅವಕಾಶ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಲು, ಯಾವುದೇ ಕಡ್ಡಾಯ ಬಂಧನಕ್ಕೆ ಒಳಗಾಗದೇ ಇರಲು ಕಾನೂನು ನೀಡಿರುವ ರಕ್ಷಣೆ ಮತ್ತು ಹಕ್ಕುಗಳು. ರಹಸ್ಯದ ವಿಷಯವನ್ನು ಮಹಿಳೆಯರ ಬಳಿ ಮಾತ್ರ ಹೇಳಬೇಡಿ!
ಇವುಗಳ ಕಾರಣ ಹಿಂದಿನ ಶತಮಾನದ ಮಹಿಳೆಯರಿಂಗಲೂ ಇಂದಿನ ಮಹಿಳೆಯರು ತಮ್ಮ ಮನಸ್ಸಿನ ಭಾವನೆಗಳನ್ನು, ತಮಗೇನು ಬೇಕು, ಬೇಡ ಎಂಬುದನ್ನು ತಮ್ಮ ಪತಿ ಹಾಗೂ ಇತರ ಹತ್ತಿರದ ಸದಸ್ಯರಿಗೆ ಮನಬಿಚ್ಚಿ ಹೇಳಬಲ್ಲವರಾಗಿದ್ದಾರೆ. ಅಂತೆಯೇ ವರ್ಷಗಳೆದಂತೆ ಗಂಡಿನಂತೆ ಹೆಣ್ಣು ಸಹಾ ಹೆಚ್ಚು ಪ್ರೌಢಳಾಗುತ್ತಾ ಹೋದಂತೆ ತಮ್ಮ ಬಗ್ಗೆ ಹಲವಾರು ಗುಟ್ಟುಗಳ ಕಟ್ಟೆಗಳನ್ನು ಕಟ್ಟಿಕೊಂಡಿದ್ದು ಈ ಬಗ್ಗೆ ತಮಗೆ ಆತ್ಮೀಯರೆನಿಸಿದವರ ಬಳಿ ಹೇಳಿಕೊಂಡು ನಿರಾಳವಾಗುವುದನ್ನು ಸಹಾ ಕಾಣಬಹುದು. ಆದರೆ ಇಲ್ಲೊಂದು ಸ್ವಾರಸ್ಯವಿದೆ. ಇಂತಹ ಗುಟ್ಟುಗಳನ್ನು ಮಹಿಳೆಯರು ತಮ್ಮ ಪತಿಗೆ ಹೇಳದೇ ಮೂರನೆಯ ವ್ಯಕ್ತಿಯ ಬಳಿ ತೆರೆದಿಡುತ್ತಾರೆ. ಇಂತಹ ಇನ್ನೂ ಹಲವಾರು ರೋಚಕ ಸಂಗತಿಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡಿ, ಚಕಿತರಾಗಿ:

ಸಂಸ್ಕೃತಿಗೆ ಅನುಗುಣವಾದ ವಿಷಯಾಸಕ್ತಿ
ಮಹಿಳೆಯರು ನೋಡುವ ದೃಷ್ಟಿ, ಅದರಲ್ಲೂ ಪ್ರೀತಿ ಪ್ರಣಯ ಕುರಿತ ವಿಷಯಗಳು ಅವರು ಬೆಳೆದುಬಂದ ಸಂಸ್ಕೃತಿಯ ಪ್ರಭಾವವನ್ನೊಳಗೊಂಡಿರುತ್ತದೆ.ಅಂತೆಯೇ ಮನೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಪಡೆದುಬಂದ ಮಹಿಳೆಯರು ಪ್ರೀತಿಯನ್ನು ನೋಡುವ ಬಗೆಗೂ ಕಟ್ಟುನಿಟ್ಟಿನ ಸಂಸ್ಕೃತಿಯ ಮನೆಯಿಂದ ಬಂದ ಮಹಿಳೆಯರು ನೋಡುವ ಬಗೆಗೂ ವ್ಯತ್ಯಾಸವಿರುತ್ತದೆ. ಅದರಲ್ಲೂ ಧಾರ್ಮಿಕ ಕಟ್ಟುಪಾಡು ಹೆಚ್ಚಿರುವ ಕುಟುಂಬಗಳ ಮಹಿಳೆಯರಿಗೆ ಪ್ರೀತಿಯ ಬಗ್ಗೆ ಯೋಚಿಸುವುದೇ ಪಾಪವಾಗಿದೆ. ಇದು ಇವರ ಇತರ ಗುಣಗಳಲ್ಲಿಯೂ ಕಾಣಬಹುದು.

ಮಹಿಳೆಯರು ಸದಾ ಅಪೇಕ್ಷಣೀಯವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ
ಹೆಚ್ಚಿನ ಮಹಿಳೆಯರು ತಮ್ಮ ಅಪೇಕ್ಷೆಯನ್ನು ಪೂರೈಸಿಕೊಳ್ಳಲು ನೇರವಾಗಿ ಮುನ್ನುಗ್ಗುವ ಬದಲು ಹೆಚ್ಚು ಅಪೇಕ್ಷಣೀಯವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಏಕೆಂದರೆ ಸಮಾಜದಲ್ಲಿ ಮಹಿಳೆಯ ವರ್ಚಸ್ಸಿಗೆ ಹೆಚ್ಚು ಬೆಲೆ ನೀಡಲಾಗುತ್ತದೆ.ಜಾಹೀರಾತುಗಳಲ್ಲಿ ಮಹಿಳೆಯರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. 'ಸುಂದರ ಯುವತಿ' ಜಾಹೀರಾತಿನ ಮೂಲಕ ಉಪ್ಪನ್ನೇ ಮಾರಿದರೂ ಸಕ್ಕರೆಯಂತಹ ಪ್ರಸಾದ ಎಂದೇ ಪರಿಗಣಿಸಿ ಖರೀದಿಸುವ ಪುರುಷರಿರುವ ಸಮಾಜದಲ್ಲಿ ಈ ಪರಿಯನ್ನು ಮಹಿಳೆಯರು ಗಮನಿಸಿ ತಮ್ಮಲ್ಲೂ ಅಳವಡಿಸಿಕೊಳ್ಳಲು ಯತ್ನಿಸುತ್ತಾರೆ.

ಏಕಸಂಗಾತಿಯಾಗಿದ್ದರೂ ಮಾನಸಿಕವಾಗಿ ಬಹುಸಂಗಾತಿಗಳು
ದಾಂಪತ್ಯ ಬಂಧನಕ್ಕೆ ಅತಿ ಹೆಚ್ಚಿನ ಮಹತ್ವ ನೀಡುವ ಮಹಿಳೆಯರು ತಮ್ಮ ಕನಸಿನ ರಾಜಕುಮಾರನನ್ನು ತಮ್ಮ ಪತಿಯಲ್ಲಿ ನೋಡಲು ಇಚ್ಛಿಸುತ್ತಾರೆ. ಆದರೆ ಪ್ರತಿ ಮಾನವರಲ್ಲಿ ಇರುವ ದೌರ್ಬಲ್ಯಗಳನ್ನು ತಮ್ಮ ಪತಿಯಲ್ಲಿಯೂ ಕಂಡ ಬಳಿಕ ಈ ಗುಣಗಳಿರುವ ಇನ್ನೊಬ್ಬ ವ್ಯಕ್ತಿಯನ್ನು ಮನಸ್ಸಿನಲ್ಲಿಯೇ ಗುಟ್ಟಾಗಿ ಆರಾಧಿಸುತ್ತಿರುತ್ತಾರೆ.

ಏಕಸಂಗಾತಿಯಾಗಿದ್ದರೂ ಮಾನಸಿಕವಾಗಿ ಬಹುಸಂಗಾತಿಗಳು
ಕೆಲವರಿಗೆ ಇಂತಹ ವ್ಯಕ್ತಿ ನಿಜಜೀವನದಲ್ಲಿ ಸಿಕ್ಕರೂ ಸಿಗಬಹುದು, ಉಳಿದವರು ಈ ಗುಣಗಳನ್ನು ತಮ್ಮ ಮಕ್ಕಳಲ್ಲಿ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರತಿ ಹೆಣ್ಣೂ ತನ್ನ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಈ ಆರಾಧನೆಗೆ ಒಳಗಾಗಿಯೇ ಇರುತ್ತಾರೆ.

ಕಡಿಮೆ ಕಾಮಾಸಕ್ತಿ ಒಂದು ತೊಂದರೆಯಲ್ಲ
ಕಾಮಾಸಕ್ತಿಯನ್ನು ಇಡಿಯ ಜೀವಮಾನ ಏಕಪ್ರಕಾರವಾಗಿ ಕಾಯ್ದುಕೊಳ್ಳಲು ಪುರುಷರಿಗೂ ಸಾಧ್ಯವಿಲ್ಲ, ಮಹಿಳೆಯರಿಗೂ ಸಾಧ್ಯವಿಲ್ಲ. ಏಕೆಂದರೆ ಜೀವನದಲ್ಲಿ ಹಲವಾರು ವಿಷಯಗಳು ಇದರ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ. ಆರ್ಧಿಕ, ಮಕ್ಕಳ ಕುರಿತಾದ ಮೊದಲಾದ ವಿಷಯಗಳು ಕಾಮಾಸಕ್ತಿಯನ್ನು ಕುಂಠಿತಗೊಳಿಸುತ್ತವೆ. ಆದರೆ ಮಹಿಳೆಯರು ಪ್ರೌಢರಾದಂತೆ ತಮ್ಮ ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಲು ಪುರುಷರಿಗಿಂತಲೂ ಹೆಚ್ಚು ಸಮರ್ಥರಾಗುತ್ತಾರೆ.

ಪ್ರೀತಿಯಿಲ್ಲದ ಮದುವೆಗಿಂತ ಕಾಮವಿಲ್ಲದ ಮದುವೆಯೇ ಲೇಸು
ಕೆಲವೊಮ್ಮೆ ಗಂಭೀರ ಕಾಯಿಲೆ ಅಥವಾ ಅಂಗವಿಕಲತೆ ಮೊದಲಾದ ಕಾರಣಗಳಿಂದ ದೈಹಿಕ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದಾಗಲೂ ಪ್ರೀತಿ ಉಳಿದಿದ್ದರೆ ಜೀವನ ಸುಖಕರವಾಗಿರುತ್ತದೆ. ತಜ್ಞರ ಪ್ರಕಾರ ಇಂತಹ ದಂಪತಿಗಳು ಪ್ರೀತಿಯೇ ಇಲ್ಲದೇ ನಿತ್ಯವೂ ಜಗಳವಾಡುವ, ಹೊಂದಾಣಿಕೆಯಿಲ್ಲದ ದಂಪತಿಗಳಿಗಿಂತ ಸಾವಿರ ಪಟ್ಟು ಮಿಗಿಲಾಗಿದ್ದಾರೆ.



Click it and Unblock the Notifications











