Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಧ್ಯಯನ ವರದಿ: ಮೊದಲ ನೋಟದಲ್ಲೇ ಪ್ರೀತಿ ಹುಟ್ಟಲ್ಲ!
ಮೊದಲ ನೋಟದಲ್ಲೇ ಪ್ರೀತಿ ಮೊಳಕೆಯೊಡೆದು ಪರಸ್ಪರ ಪ್ರೀತಿಸಲು ಆರಂಭಿಸುತ್ತಾರೆ ಎನ್ನುವುದು ಸುಳ್ಳು. ಪರಸ್ಪರರಲ್ಲಿ ಪ್ರೀತಿ ಮೂಡಬೇಕಾದರೆ ಅವರು ನಾಲ್ಕು ಸಲವಾದರೂ ಭೇಟಿಯಾಗಬೇಕಾಗಿದೆ ಎಂದು ಅಧ್ಯಯನವೊಂದು ಹೇಳಿದೆ.
ಮೊದಲ ನೋಟದಲ್ಲಿ ಯಾವುದೇ ಆಕರ್ಷಣೆ ಇಲ್ಲದೆ ಇದ್ದರೂ ಮೂರ್ನಾಲ್ಕು ಭೇಟಿ ಬಳಿಕ ಅವರಿಬ್ಬರು ಪ್ರೀತಿಸಲು ಆರಂಭಿಸಬಹುದು ಎನ್ನುತ್ತದೆ ಅಧ್ಯಯನ. ಮೊದಲ ಭೇಟಿಯಲ್ಲೇ ಪ್ರಣಯದೇವತೆಯ ಬಾಣ ಹೃದಯವನ್ನು ಚುಚ್ಚಲ್ಲ. ಯಾಕೆಂದರೆ ಇದು ತುಂಬಾ ನಿಧಾನವಾಗಿ ಕೆಲಸ ಮಾಡುತ್ತದೆ. ಪ್ರೀತಿಯೂ ಕೂಡ ಮಾದಕ ದ್ರವ್ಯದಂತೆಯೇ, ಸ್ವಲ್ಪ ಹುಷಾರು!
ಇದರಿಂದಾಗಿಯೇ ಮೊದಲ ಭೇಟಿಯ ಬಳಿಕವೂ ಕೆಲವು ಸಲ ಭೇಟಿ ಮಾಡಬೇಕಾಗುತ್ತದೆ ಎಂದು ನ್ಯೂಯಾರ್ಕ್ ನ ಹ್ಯಾಮಿಲ್ಟನ್ ಕಾಲೇಜಿನ ಮನಶಾಸ್ತ್ರಜ್ಞ ರವಿ ಥಿರುಚಸೆಲ್ವಂ ಹೇಳಿರುವುದಾಗಿ ಡೈಲಿಸ್ಟಾರ್ ವೆಬ್ ಸೈಟ್ ಪ್ರಕಟಿಸಿದೆ.

ಇದರ ಬಗ್ಗೆ ಅಧ್ಯಯನ ಮಾಡಲು ಯುವಕರು ಹಾಗೂ ಯುವತಿಯರ ಗುಂಪಿಗೆ ಪರಸ್ಪರರ ಫೋಟೋ ತೋರಿಸಲಾಯಿತು. ಇದರಲ್ಲಿ ಭಾಗಿಯಾದವರ ಮೆದುಳನ್ನು ಪರಿಶೀಲನೆ ಮಾಡಿ ಪೋಟೊದಲ್ಲಿರುವವರ ಕಡೆಗಿರುವ ಆಕರ್ಷಣೆಯನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಹಣ vs ಪ್ರೀತಿ- ಒಂದೇ ನಾಣ್ಯದ ಎರಡು ಮುಖವಿದ್ದಂತೆ....
ಎರಡನೇ ಸಲ ಪರಸ್ಪರರಿಗೆ ಫೋಟೋವನ್ನು ತೋರಿಸಿದಾಗ ಅವರ ನಡುವಿನ ಆಕರ್ಷಣೆಯು ಹೆಚ್ಚಾಯಿತು. ಮೂರನೇ ಸಲ ಫೋಟೋ ತೋರಿಸಿದಾಗ ಆಕರ್ಷಣೆ ಮತ್ತಷ್ಟು ಹೆಚ್ಚಾಯಿತು. ನಾಲ್ಕನೇ ಸಲಕ್ಕೆ ಇದು ತೀವ್ರವಾಗಿತ್ತು. ನಾಲ್ಕನೇ ಸಲ ಫೋಟೊ ನೋಡಿದಾಗ ಭಾಗವಹಿಸಿದವರ ಮೆದುಳಿನಲ್ಲಿ ಅತಿಯಾದ ಆಸಕ್ತಿ ಹಾಗೂ ಸಂತೋಷ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ.



Click it and Unblock the Notifications
