For Quick Alerts
ALLOW NOTIFICATIONS  
For Daily Alerts

ಪ್ರೀತಿಯೂ ಕೂಡ ಮಾದಕ ದ್ರವ್ಯದಂತೆಯೇ, ಸ್ವಲ್ಪ ಹುಷಾರು!

By Deepu
|

ಪ್ರೀತಿ ಮಾಡದವರು ಈ ಭೂಮಿ ಮೇಲಿರಲು ಸಾಧ್ಯವಿಲ್ಲ. ಪ್ರತಿಯೊಬ್ಬನೂ ಪ್ರೀತಿಸಿಯೇ ಇರುತ್ತಾನೆ. ಪ್ರೀತಿ ಮಾಯೆ ಹುಷಾರು ಎನ್ನುವ ಹಾಡು ಕೇಳಿದ್ದೇವೆ. ಪ್ರೀತಿಯ ಬಗ್ಗೆ ಹೀಗೆ ಹಲವಾರು ಹಾಡುಗಳನ್ನು ನಾವು ಕೇಳಿದ್ದೇವೆ. ಆದರೆ ಪ್ರೀತಿ ಅಮಲಿಗೆ ಸಮ ಎಂದರೆ ತಪ್ಪಾಗಲಾರದು. ಪ್ರೀತಿ ಕೂಡ ಮಾದಕದ್ರವ್ಯಗಳಷ್ಟೇ ಅಮಲನ್ನು ಉಂಟುಮಾಡುತ್ತದೆ. ಹೀಗೆ ಯಾಕೆ ಹೇಳುತ್ತಾ ಇದ್ದೇವೆಂದರೆ ಮಾದಕದ್ರವ್ಯ ತೆಗೆದುಕೊಳ್ಳುವವರಿಗೆ ಮತ್ತು ಪ್ರೀತಿಯಲ್ಲಿ ಬಿದ್ದವರಿಗೆ ತಾವು ಏನು ಮಾಡುತ್ತಿರುತ್ತೇವೆ ಎನ್ನುವ ಪರಿವೆಯೇ ಇರುವುದಿಲ್ಲ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

ಪ್ರೀತಿ ಎನ್ನುವುದು ಒಂದು ಚಟದಂತೆ. ಇದು ಒಳ್ಳೆಯ ಅಥವಾ ಕೆಟ್ಟದಾಗಿರಬಹುದು. ಅದು ನೀವು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಒಳ್ಳೆಯ ಸಂಬಂಧವು ನಿಮ್ಮ ಜೀವನವನ್ನು ಸುಗಮವಾಗಿಸಬಹುದು ಮತ್ತು ಕೆಟ್ಟ ಸಂಬಂಧವು ನಿಮ್ಮನ್ನು ದೇವದಾಸನನ್ನಾಗಿ ಮಾಡಬಹುದು. ಪ್ರೀತಿ ಎನ್ನುವುದು ಸಮಾಜದಲ್ಲಿ ಮಾದಕದ್ರವ್ಯದಂತೆ ಯಾಕೆ ಕೆಲಸ ಮಾಡುತ್ತದೆ ಎಂದು ವಿಜ್ಞಾನಿ ಮತ್ತು ಕಲಾವಿದರಿಗೂ ಅಚ್ಚರಿಯಾಗಿದೆ. ಅದರ ಬಗ್ಗೆ ನೀವು ತಿಳಿದುಕೊಳ್ಳಿ....

ವಾಸ್ತವಾಂಶ #1

ವಾಸ್ತವಾಂಶ #1

ಮೆದುಳಿಗೆ ಭಾಗಲಬ್ದ ಮತ್ತು ಅಭಾಗಲಬ್ದ ಎನ್ನುವ ಎರಡು ಭಾಗವಿದೆ. ಪ್ರೀತಿಯೂ ಅಭಾಗಲಬ್ದ ಭಾಗದಿಂದ ಮೂಡಿದಾಗ ಅದು ಹೃದಯಕ್ಕೆ ಸಂಪರ್ಕವನ್ನು ಒದಗಿಸುತ್ತದೆ. ಪ್ರೀತಿಯಲ್ಲಿ ಬಿದ್ದಾಗ ಎರಡನೇ ಸಲ ಯೋಚಿಸುವುದೇ ಇಲ್ಲ. ಹೌದು, ಪ್ರೀತಿ ಕುರುಡು!

ವಾಸ್ತವಾಂಶ #2

ವಾಸ್ತವಾಂಶ #2

ಆಳವಾಗಿ ಪ್ರೀತಿಯಲ್ಲಿ ಬಿದ್ದಿರುವ ವ್ಯಕ್ತಿಯೊಬ್ಬನ ಮೆದುಳಿನ ಚಟುವಟಿಕೆಗಳನ್ನು ಪರಿಶೀಲಿಸಿದಾಗ ಪ್ರೀತಿಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ಸಂತೋಷವು ಹಿಂದಕ್ಕೆ ದೂಡುತ್ತದೆ ಎಂದು ತಿಳಿದುಬಂದಿದೆ. ಪ್ರೀತಿಪಾತ್ರರ ನಿಷ್ಠುರತೆ ಮತ್ತು ಚಿಂತನೆಯು ನಿಮ್ಮ ಭಾವವನ್ನು ಕೆಡಿಸಬಹುದು.

ವಾಸ್ತವಾಂಶ #3

ವಾಸ್ತವಾಂಶ #3

ಪ್ರೀತಿಸುವವರು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಯಾಕೆ ಸಾಧ್ಯವಿಲ್ಲ? ಪ್ರೀತಿಯಲ್ಲಿ ಬಿದ್ದಿರುವವರ ಮೆದುಳಿನ ಹೊರಪದರವು ಸರಿಯಾಗಿ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಹೊರಪದರವು ಭಾಗಲಬ್ದ ಚಿಂತನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕ್ರಿಯೆಗೆ ಕಾರಣವಾಗಿದೆ.

ವಾಸ್ತವಾಂಶ #4

ವಾಸ್ತವಾಂಶ #4

ಪ್ರೀತಿಸುವವರ ಫೋಟೋಗಳನ್ನು ನೋಡಿದರೆ ಎಲ್ಲಾ ಸಂಶಯ, ಟೀಕೆ ಮತ್ತು ಕೋಪವು ಸಂಪೂರ್ಣವಾಗಿ ನಿರ್ನಾಮವಾಗುತ್ತದೆ. ಹೃದಯದೊಳಗೆ ಪ್ರೀತಿ ಮೂಡಿದಾಗ ಮೆದುಳಿನ ಕೆಲವೊಂದು ಭಾಗಗಳು ಸ್ತಬ್ಧವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಾಸ್ತವಾಂಶ #5

ವಾಸ್ತವಾಂಶ #5

ನೀವು ಪ್ರೀತಿಸುವ ಆತ/ಆಕೆಯಲ್ಲಿ ನಕಾರಾತ್ಮಕ ಅಂಶಗಳಿದ್ದರೂ ಯಾವಾಗಲೂ ಅವರನ್ನು ಹೊಗಳುವುದು ಯಾಕೆ? ಪ್ರೀತಿಯಲ್ಲಿ ಬಿದ್ದಾಗ ಮೆದುಳಿನ ಭಾಗಲಬ್ದಗೆ ಮೋಡ ಕವಿದಿರುತ್ತದೆ. ನೀವು ಯಾವಾಗಲೂ ಸಂತೋಷದ ಮತ್ತು ಇದರ ಇನ್ನೊಂದು ಬದಿಯ ಬಗ್ಗೆ ನಿಮಗೆ ತಿಳಿದಿರುವುದಿಲ್ಲ.

ವಾಸ್ತವಾಂಶ #6

ವಾಸ್ತವಾಂಶ #6

ಯಾರೊಂದಿಗಾದರೂ ನೀವು ಆಳವಾಗಿ ಪ್ರೀತಿಯಲ್ಲಿ ಬಿದ್ದಾಗ ಮೆದುಳಿನ ಭೀತಿಯನ್ನು ನಿಯಂತ್ರಿಸುವ ಭಾಗವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದರಿಂದಾಗಿಯೇ ಪ್ರೀತಿಯಲ್ಲಿ ಬಿದ್ದಿರುವವರು ಯಾವುದೇ ಹಂತಕ್ಕು ಹೋಗಿ ಪ್ರೀತಿ ಪಡೆಯಲು ಯಾರನ್ನು ಬೇಕಾದರೂ ಎದುರುಹಾಕಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ನಾವು ನೋಡುವ ಕಥೆಗಳು ಇದೇ ಆಗಿದೆ.

ವಾಸ್ತವಾಂಶ #7

ವಾಸ್ತವಾಂಶ #7

ಕೋಕೇನ್ ಮತ್ತು ಇತರ ಮಾದಕ ದ್ರವ್ಯಗಳು ಮೆದುಳಿನ ಮೇಲೆ ಇದೇ ರೀತಿಯ ಪರಿಣಾಮ ಬೀರುವ ಕಾರಣದಿಂದಾಗಿ ಪ್ರೀತಿಯನ್ನು ವಿಜ್ಞಾನಿಗಳು ಮಾದಕ ದ್ರವ್ಯಕ್ಕೆ ಹೋಲಿಸಿದ್ದಾರೆ

English summary

Why Love Acts Like A Drug

Yes, love is a drug and it turns into an addiction. ... Scientists and artists have always wondered why love acts like a drug on the system.
X
Desktop Bottom Promotion