For Quick Alerts
ALLOW NOTIFICATIONS  
For Daily Alerts

ಅಮ್ಮನೊಂದಿಗೂ ಸಮಯ ಕಳೆಯಿರಿ, ಆಕೆಗೂ ಖುಷಿ, ನಿಮಗೂ ನೆಮ್ಮದಿ

By Deepak M
|

ನಮ್ಮ ಪೋಷಕರ ಜೊತೆಗೆ ನಾವು ಸ್ನೇಹಿತರ ರೀತಿ ಇರಬೇಕು ಎಂದು ಭಾವಿಸುತ್ತೇವೆಯಾದರೂ ಅದು ಸಾಧ್ಯವಾಗದ ಪರಿತಪಿಸುತ್ತೇವೆ. ಪೋಷಕರು ವಯಸ್ಸು ಮತ್ತು ಪೋಷಕರ ಜವಾಬ್ದಾರಿ ಎನ್ನುವ ಮಾನದಂಡಗಳ ಪೂರ್ವಗ್ರಹದ ಜೊತೆಗೆ ನಮ್ಮನ್ನು ನೋಡುತ್ತಿರುತ್ತಾರೆ ಮತ್ತು ನಮ್ಮೊಂದಿಗೆ ಇದೇ ಮಾನದಂಡದ ಜೊತೆಗೆ ವ್ಯವಹಾರ ಮಾಡುತ್ತಿರುತ್ತಾರೆ. ಹೀಗಾಗಿ ನೀವು ನಿಮ್ಮ ಅಮ್ಮನನ್ನು ಅಮ್ಮನಂತೆ ಮಾತ್ರ ನೋಡುತ್ತಿರುತ್ತೀರಿಯೇ ಹೊರತು ನೀವು ಸ್ನೇಹದಿಂದ ಇರುವ ಇನ್ನಿತರ ವ್ಯಕ್ತಿಗಳಂತೆ ನೋಡುವುದಿಲ್ಲ.

ನಮ್ಮ ತಾಯಿಯು ನಮಗೆ ಒಬ್ಬ ಪೋಷಕರಾಗಿ ನಮ್ಮೊಂದಿಗೆ ತುಂಬಾ ವರ್ಷದಿಂದ ಆರೈಕೆ ಮಾಡಿರುತ್ತಾರೆ. ಆದರೆ ನಾವು ದೊಡ್ಡವರಾದ ಮೇಲೆ ಆಕೆಯೊಂದಿಗೆ ಕಾಲ ಕಳೆಯುವುದನ್ನು ಕಡಿಮೆ ಮಾಡಿರುತ್ತೇವೆ. ಈ ತಾಯಂದಿರ ದಿನದ ಸಂದರ್ಭದಲ್ಲಿ ನಿಮ್ಮ ತಾಯಿಗಾಗಿ ಕೇವಲ ಉಡುಗೊರೆಗಳನ್ನು ಮಾತ್ರ ಖರೀದಿಸಲು ಹೋಗಬೇಡಿ.

ಆಕೆಗೆ ನಿಜವಾಗಿ ಏನು ಬೇಕು ಎಂಬುದನ್ನು ಗಮನಿಸಿ. ಸಾಧ್ಯವಾದರೆ ನಿಮ್ಮ ತಾಯಿಯ ಉತ್ತಮ ಸ್ನೇಹಿತರಾಗಿ. ಅದೇ ಆಕೆಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆಯಾಗಿರುತ್ತದೆ. ನೀವು ಇದುವರೆಗೂ ಮಾಡದ ಒಂದು ಕೆಲಸವನ್ನು ಮಾಡಿ ಆಕೆಗೆ ಸಂತೋಷವನ್ನು ನೀಡಿ. ಅಮ್ಮಾ ಊರು ಏನೇ ಅಂದರೂ ನೀನು ನನ್ನ ದೇವರು...

mother

ಆಕೆಯ ಮಾತನ್ನು ಕೇಳಿ
ಬಹುತೇಕ ಪೋಷಕರು ತಮ್ಮ ಮಕ್ಕಳು ತಮ್ಮ ಮಾತನ್ನು ಕೇಳುವುದೇ ಇಲ್ಲ ಎಂಬ ಆರೋಪವನ್ನು ಹೊರಿಸುತ್ತಾರೆ. ಒಂದು ವೇಳೆ ನಿಮಗೆ ಯಾವುದೇ ಕೆಲಸ ಕಾರ್ಯದ ಒತ್ತಡ ಇದ್ದಲ್ಲಿ, ನಿಮ್ಮ ಅಮ್ಮನಿಗೂ ಸಹ ತನ್ನದೇ ಆದ ಸಮಸ್ಯೆಗಳು ಇರುತ್ತವೆ. ಆಕೆಗೂ ಸಹ ನಿಮ್ಮ ಸಮಯವನ್ನು ನೀಡಿ. ಪ್ರೀತಿಯ ಅಮ್ಮನಿಗಾಗಿ ಆರೋಗ್ಯ ಕಾಳಜಿ

ನಿಮ್ಮ ಮೊದಲ ಗರ್ಲ್ ಫ್ರೆಂಡ್
ಬಹುತೇಕ ಹುಡುಗರಿಗೆ ತಮ್ಮ ತಾಯಿಯೇ ಮೊದಲ ಗರ್ಲ್ ಫ್ರೆಂಡ್ ಆಗಿರುತ್ತಾರೆ. ಪ್ರತಿಯೊಬ್ಬ ಪುರುಷನು ತನ್ನನ್ನು ತನ್ನ ತಾಯಿಯಂತೆಯೇ ನೋಡಿಕೊಳ್ಳುವ ಹೆಣ್ಣನ್ನು ಇಷ್ಟಪಡುತ್ತಾನೆ. ನೀವು ನಿಮ್ಮ ತಾಯಿಯಿಂದ ಮಹಿಳೆಯರ ಕುರಿತಾಗಿ ಹೆಚ್ಚಿಗೆ ತಿಳಿದುಕೊಳ್ಳಬಹುದು.

ಶಾಪಿಂಗ್ ಜೊತೆಗಾತಿ
ತಾಯಿ ಮತ್ತು ಮಗಳು ಶಾಪಿಂಗ್ ಮಾಡಲು ಹೋದರೆ ಹೇಗಿರುತ್ತದೆ. ಅವರಿಬ್ಬರೂ ಶಾಪಿಂಗ್ ಆರಂಭಿಸುತ್ತಾರೆ ಅಷ್ಟೇ. ಮುಗಿಸುವುದು ಯಾವಾಗ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅಮ್ಮನ ಜೊತೆಗೆ ಶಾಪಿಂಗ್ ಮಾಡುವ ಮಜವೇ ಬೇರೆ ಎಂಬುದು ಹುಡುಗಿಯರ ಮಾತು. ನೀವು ಈಗಲೂ ಸಹ ನಿಮ್ಮ ಅಮ್ಮನ ಜೊತೆಗೆ ಶಾಪಿಂಗ್ ಮಾಡಬಹುದು.

ಉತ್ತಮ ಸಲಹಾಗಾರ್ತಿ
ಅಮ್ಮ ಯಾವಾಗಲು ಉತ್ತಮ ಸಲಹೆಗಳನ್ನು ನೀಡುತ್ತಾರೆ. ಅದರಲ್ಲಿಯೂ ಮಹಿಳಾಪರವಾದ ಸಲಹೆ ನೀಡುವುದರಲ್ಲಿ ಅಮ್ಮನನ್ನು ಮೀರಿಸಿದವರು ಯಾರೂ ಇಲ್ಲ. ಅಮ್ಮ-ಮಗಳ ಸಂಬಂಧ, ಮಗಳು ಗಂಡನ ಜೊತೆಗೆ ಹೇಗಿರಬೇಕು, ಮಗನಿಗೂ ಸಹ ಹೆಂಡತಿಯನ್ನು ನೋಡಿಕೊಳ್ಳುವುದರ ಕುರಿತು ಒಳ್ಳೆಯ ಸಲಹೆಗಳನ್ನು ಸಹ ಇವರು ನೀಡುತ್ತಾರೆ!. ಹೆತ್ತು, ಸಲಹಿ ಸಾಕಿದ 'ತಾಯಿ'ಯ ಆರೋಗ್ಯದ ಕಡೆಗೂ ಕಾಳಜಿ ಇರಲಿ!

ನಿಮ್ಮ ಅಮ್ಮನಿಗೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ
ಒಂದು ವೇಳೆ ನೀವು ನಿಮ್ಮ ಅಮ್ಮನ ಉತ್ತಮ ಸ್ನೇಹಿತರಾಗಿದ್ದಲ್ಲಿ, ಆಕೆಗೆ ನಿಮ್ಮ ವಯಸ್ಸಿನ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿ. ಒಂದು ವೇಳೆ ಅವರು ನಿಮ್ಮ ಸ್ನೇಹಿತರನ್ನು ಇಷ್ಟಪಟ್ಟಲ್ಲಿ ಇನ್ನೂ ಒಳ್ಳೆಯದು. ಅವರು ಯುವ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಲ್ಲಿ, ಅದರಿಂದ ಅವರಿಗೆ ಬದಲಾವಣೆ ಲಭಿಸುತ್ತದೆ.

ಸಂಬಂಧದಲ್ಲಿರುವ ಸಮಸ್ಯೆಗಳನ್ನು ಚರ್ಚಿಸಿ
ನಿಮಗೆ ಬರುವ ಸಮಸ್ಯೆಗಳನ್ನು ನಿಮ್ಮ ಅಮ್ಮನಿಗಿಂತ ಚೆನ್ನಾಗಿ ಯಾರೂ ನಿಭಾಯಿಸಲಾರರು. ನಿಮ್ಮ ಸಂಬಂಧದಲ್ಲಿ ಏನಾದರೂ ಸಮಸ್ಯೆ ಬಂದಲ್ಲಿ, ಅದನ್ನು ನಿಮ್ಮ ತಾಯಿಯ ಬಳಿ ಎಂದಾದರೂ ಚರ್ಚಿಸಿದ್ದೀರಾ? ಇಲ್ಲವಾದಲ್ಲಿ ಅದನ್ನು ಮಾಡಿ ಇನ್ನು ಮುಂದೆ. ಆಕೆ ನಿಮ್ಮ ಸಮಸ್ಯೆಯನ್ನು ನಿಭಾಯಿಸಲು ಉತ್ತಮ ಸಲಹೆಗಳನ್ನು ನೀಡುತ್ತಾರೆ. ನೀವು ಖಿನ್ನರಾಗಿದ್ದಲ್ಲಿ, ಅದಕ್ಕೂ ಸಹ ಆಕೆ ಪರಿಹಾರ ಸೂಚಿಸುತ್ತಾರೆ. ತಾಯಿಯಂದಿರ ದಿನವು ವರ್ಷಕ್ಕೆ ಒಮ್ಮೆ ಬರುತ್ತದೆ. ಆದರೆ ನಿಮ್ಮ ತಾಯಿಯು ನಿಮ್ಮ ಜೀವನವು ಈಗ ಪ್ರಯೋಜನಕಾರಿಯಾಗಿರಲು ಬೇಕಾದ ಎಲ್ಲವನ್ನು ನೀಡಿದ್ದಾರೆ. ಅದಕ್ಕಾಗಿ ಆಕೆಗೆ ಉತ್ತಮ ಸ್ನೇಹಿತರಾಗಿರಿ, ಅದರಿಂದ ಆಕೆಗೆ ಸಿಕ್ಕುವ ಆನಂದವನ್ನು ನೋಡಿ.

English summary

Ways To Be Your Mother's Best Friend

This Mother's Day, don't just buy expensive gifts for your mother as she doesn't really want them. Try to become your mother's best friend. That will be the best Mother's Day gift for your mom. Make her feel special by doing things you never did before.
X
Desktop Bottom Promotion