For Quick Alerts
ALLOW NOTIFICATIONS  
For Daily Alerts

ಆಕೆಯ ಮುಖದಲ್ಲೂ ನಗು ಅರಳಿಸಿ-ನೀವೂ ಸಂತಸಪಡಿ

By Jaya Subramanya
|

ಹೆಣ್ಣು ಸಮಾಜದ ಕಣ್ಣು ಎಂಬ ಮಾತಿನಂತೆ ಸಮಾಜದಲ್ಲಿ ಹೆಣ್ಣಿಗೆ ಅತ್ಯುನ್ನತ ಸ್ಥಾನ ಮಾನವನ್ನು ನೀಡಲಾಗಿದೆ ಮತ್ತು ಸರಕಾರವು ಹಲವಾರು ಸವಲತ್ತುಗಳನ್ನು ಈ ನಿಟ್ಟಿನಲ್ಲಿ ಮಹಿಳೆಯರಿಗೆ ನೀಡುತ್ತಿದೆ. ವಿಶೇಷವಾಗಿ ಹಲವಾರು ಆಚರಣೆಗಳ ಮೂಲಕ ಮಹಿಳೆಯರ ಕಾಳಜಿಯನ್ನು ಕಾಪಾಡುವ ನಿಟ್ಟಿನಲ್ಲಿ ಬದ್ಧವಾಗಿದೆ.

ಮಾರ್ಚ್‌ ತಿಂಗಳ 8 ರಂದು ನಡೆಸಲಾಗುವ ಮಹಿಳಾ ದಿನ ಕೂಡ ಇದಕ್ಕಾಗಿಯೇ ಪ್ರತ್ಯೇಕತೆಯನ್ನು ಪಡೆದುಕೊಂಡಿದೆ. ನಿಮ್ಮ ಜೀವನದಲ್ಲಿ ಬಂದಿರುವ ವಿಶೇಷ ಮಹಿಳೆಗೆ ನೀವು ವಿಶೇಷ ಉಡುಗೊರೆಯನ್ನು ನೀಡಿ ಅವರನ್ನು ಮೆಚ್ಚಿಸಬಹುದಾಗಿದೆ. ಹೌದು ಮಹಿಳಾ ದಿನವನ್ನು ನೀವು ಹೆಚ್ಚು ವೈಯಕ್ತಿಕವಾಗಿ ಆಚರಿಸಿದರೆ ಅದು ನಿಮ್ಮ ಜೀವನದಲ್ಲಿ ಮಹತ್ವತೆಯನ್ನು ಉಂಟು ಮಾಡುವುದಂತೂ ಖಂಡಿತ.

ಇಂದಿನ ಲೇಖನದಲ್ಲಿ ನೀವು ಪ್ರೀತಿಸುವ ವಿಶೇಷ ಮಹಿಳೆಗೆ ಯಾವ ರೀತಿಯ ಉಡುಗೊರೆಯನ್ನು ನೀಡಿ ಅವರ ಮುಖದಲ್ಲಿ ನಗುವನ್ನು ಉಂಟುಮಾಡಬಹುದು ಎಂಬುದನ್ನು ತಿಳಿಸಲಿದ್ದೇವೆ. "ಯತ್ರು ನಾರ್ಯಸ್ಯ ಪೂಜ್ಯಂತೇ ರಮಂತೆ ತತ್ರ ದೇವತಾ" ಎಂಬ ಉಕ್ತಿಯಂತೆ ನಾರಿಯರು ಎಲ್ಲಿ ಪೂಜನೀಯರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದನ್ನು ನಾವು ಮನನ ಮಾಡಿಕೊಳ್ಳಬೇಕು. ವಿಶ್ವದಲ್ಲಿ ಸ್ತ್ರೀ ಸುರಕ್ಷಿತವಾಗಿರುವುದು 10 ಸ್ಥಳಗಳಲ್ಲಿ ಮಾತ್ರ!

couples

ನಿಮ್ಮ ತಾಯಿ, ಪತ್ನಿ, ಗೆಳತಿ, ಸಹೋದರಿ, ಹೀಗೆ ನಿಮ್ಮ ಜೀವನದಲ್ಲಿರುವ ಅತ್ಯಂತ ಪ್ರೀತಿಪಾತ್ರ ನಾರಿಯರನ್ನು ಈ ದಿನ ವಿಶೇಷವಾಗಿ ಕಾಣಿರಿ. ಅವರನ್ನು ಹೊರಗಡೆ ಕರೆದುಕೊಂಡು ಹೋಗುವುದು. ಸಿನಿಮಾಗೆ ಕರೆದೊಯ್ಯುವುದು, ಅವರಿಗೆ ಅಚ್ಚುಮೆಚ್ಚಿನ ದಿರಿಸನ್ನು ಖರೀದಿಸಿ ಕೊಡುವುದು ಹೀಗೆ ಅವರು ಇಷ್ಟಪಡುವ ಕಾರ್ಯಗಳನ್ನು ಮಾಡಿ. ಅಂತೆಯೇ ಇಂದಿಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನಾವು ನಿಮಗೆ ತಿಳಿಸುತ್ತಿದ್ದು ನಿಮ್ಮ ಯೋಜನೆಗಳಲ್ಲಿ ಇದನ್ನೂ ಸೇರಿಸಿಕೊಳ್ಳಬಹುದಾಗಿದೆ.

ವೈದ್ಯಕೀಯ ಪರೀಕ್ಷೆಗೆ ಆಕೆಯನ್ನು ಕರೆದೊಯ್ಯಿರಿ
ನಿಮ್ಮ ಪತ್ನಿ ಅಥವಾ ತಾಯಿ ತಮ್ಮ ದಿನನಿತ್ಯದ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ಅವರನ್ನು ಹೆಚ್ಚು ಮುತುವರ್ಜಿಯಿಂದ ನೀವು ನೋಡಿಕೊಳ್ಳಬೇಕು. ಮಹಿಳಾ ದಿನದಂದೇ ಅವರನ್ನು ವೈದ್ಯರ ಬಳಿ ಪರೀಕ್ಷೆಗೆ ಕರೆದೊಯ್ಯಿರಿ ಮತ್ತು ಅವರ ಬಗ್ಗೆ ನೀವು ಕಾಳಜಿಯನ್ನು ಹೊಂದಿದ್ದೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿ.

ನಿಮ್ಮ ಪತ್ನಿ 40 ರ ಹರೆಯದವಾಗಿದ್ದರೆ
ನಿಮ್ಮ ಪತ್ನಿ 40 ಕ್ಕಿಂತ ಹೆಚ್ಚಿನ ಹರೆಯದವರಾಗಿದ್ದರೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಿ. ತಮ್ಮ ಋತುಚಕ್ರ ನಿಂತ ಸಮಯದಲ್ಲಿ ಆಕೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಪುರುಷರು ನೀಡಬೇಕಾಗುತ್ತದೆ. ನಿಯಮಿತ ಪರೀಕ್ಷೆಗೆ ಅವರನ್ನು ಒಳಪಡಿಸಿ ಮತ್ತು ಅವರ ಬಗ್ಗೆ ಹೆಚ್ಚಿನ ಕಾಳಜಿ ಇರುವಂತೆ ನೋಡಿಕೊಳ್ಳಿ.

ಆಕೆ ಖಿನ್ನಳಾಗಿದ್ದರೆ?
ನಿಮ್ಮ ಪತ್ನಿ ಹೆಚ್ಚು ಖಿನ್ನತೆಯನ್ನು ಅನುಭವಿಸುತ್ತಿದ್ದರೆ ಆಕೆಯ ಆರೋಗ್ಯದ ಕುರಿತು ನೀವು ಹೆಚ್ಚುವರಿ ಗಮನವನ್ನು ಹರಿಸಬೇಕಾಗುತ್ತದೆ. ಮನೆಯ ಕೆಲಸದ ಒತ್ತಡ ಇಲ್ಲವೇ ಕಚೇರಿಯ ಕೆಲಸದಿಂದಾಗಿ ಆಕೆ ಖಿನ್ನತೆಯನ್ನು ಅನುಭವಿಸುತ್ತಿದ್ದರೆ ಅವರಿಗೆ ಹೆಚ್ಚಿನ ಅಸ್ಥೆಯನ್ನು ನೀವು ನೀಡಿ.

ಇನ್ಶೂರೆನ್ಸ್ ಅನ್ನು ಆಕೆ ಹೊಂದಿದ್ದಾರೆಯೇ?
ವೈದ್ಯಕೀಯ ಇನ್ಶೂರೆನ್ಸ್ ಅನ್ನು ಪ್ರತಿಯೊಬ್ಬ ಸ್ತ್ರೀ ಕೂಡ ಹೊಂದಿರುವುದು ಅತ್ಯವಶ್ಯಕ ಎಂದೆನಿಸಿದೆ. ಆದ್ದರಿಂದ ಮಹಿಳಾ ದಿನದಂದು ಆಕೆಗೆ ನೀವು ಹೆಲ್ತ್ ಇನ್‌ಶ್ಯೂರೆನ್ಸ್ ಅನ್ನು ಮಾಡಿಸಬಹುದಾಗಿದೆ.

ಆಕೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ
ನಿಮ್ಮೊಡನೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂಬುದು ಅವರ ಮನದಾಸೆಯಾಗಿದ್ದರೆ ಆಕೆಯೊಡನೆ ಆ ದಿನ ಕಳೆಯಿರಿ. ಪ್ರತಿಯೊಬ್ಬ ಹೆಣ್ಣು ಕೂಡ ತಮ್ಮೊಂದಿಗೆ ಪತಿ ಸಮಯ ಕಳೆಯಬೇಕೆಂದು ಬಯಸುತ್ತಾರೆ. ಆದ್ದರಿಂದ ಮಹಿಳಾ ದಿನದಂದು ವಿಶೇಷವಾಗಿ ಆಕೆಗೆ ಆದ್ಯತೆಯನ್ನು ನೀಡಿ.

English summary

Care For Your Wife This Women's Day 2017

Valentine's Day and anniversaries are there to surprise your wife with expensive gifts and exotic vacations. On Women's Day 2017 you should make a special gesture towards her if you really care for your wife. When we marry we promise to stay with each other forever but in the stress of your work life that important promise fades into oblivian.
Story first published: Friday, March 3, 2017, 18:50 [IST]
X
Desktop Bottom Promotion