For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿ ಸ್ತ್ರೀ ಸುರಕ್ಷಿತವಾಗಿರುವುದು 10 ಸ್ಥಳಗಳಲ್ಲಿ ಮಾತ್ರ!

|

ದಿನಾ ಬೆಳಗಾದರೆ ಸಾಕು ಅಲ್ಲಿ ಅತ್ಯಾಚಾರಗಳ ಸುದ್ಧಿಯೇ ಕಿವಿಯನ್ನು ಅಪ್ಪಳಿಸುತ್ತದೆ. ಹಸುಳೆಯ ಮೇಲೆ ಕೂಡ ಗ್ಯಾಂಗ್ ರೇಪ್ ಮಾಡುತ್ತಾರೆ. ಎಂಥ ಘೋರ! ಅನೇಕ ಅತ್ಯಾಚಾರಗಳು ನಡೆಯುತ್ತವೆ, ಕೆಲವಷ್ಟೇ ಹೊರಗೆ ತಿಳಿಯುತ್ತದೆ. ಮತ್ತೆ ಕೆಲವು ಅತ್ಯಾಚಾರಗಳು ಭಯದಿಂದ, ಮರ್ಯಾದೆಗೆ ಅಂಜಿ ಹೊರಗೆ ಬರುವುದೇ ಇಲ್ಲ. ಅದರಲ್ಲೂ ಮೊನ್ನೆ ದೆಹಲಿಯಲ್ಲಿ ನಡೆದ ಅತ್ಯಾಚಾರವಂತೂ ಇಡೀ ಭಾತರವನ್ನೇ ಬೆಚ್ಚಿ ಬೀಳಿಸಿತು. ಅದನ್ನು ನೋಡುತ್ತಾ ನಮ್ಮಮ್ಮ "ನನ್ನ ಹೆಣ್ಣು ಮಕ್ಕಳು ಹೊರಗಡೆ ಹೋದರೆ ಮನೆಗೆ ಬರುವವರೆಗೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡು ನಿಂತಂತೆ ತೋರುತ್ತದೆ" ಎಂದರು. ಇದು ಬಹಶಃ ನಮ್ಮ ಅಮ್ಮನ್ನಲ್ಲಿರುವ ಭಯ ಮಾತ್ರವಲ್ಲ, ಹೆಣ್ಣು ಮಕ್ಕಳಿರುವ ಪ್ರತೀಯೊಬ್ಬ ಪೋಷಕರ ಭಯವಾಗಿದೆ.

ಅತ್ಯಾಚಾರಿಗಳನ್ನು ಸರ್ವನಾಶ ಮಾಡಲು ಯಾವುದೇ ಮಾರ್ಗವಿಲ್ಲವೇ? ನಮ್ಮ ರಾಜಧಾನಿ ದೆಹಲಿಯಂತೂ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳವಲ್ಲವೆಂದು ಸಾಬೀತಾಗಿ ಬಿಟ್ಟಿದೆ. ಇನ್ನು ಬೆಂಗಳೂರಿನಲ್ಲಿ ಸಾಕಷ್ಟು ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ ದೆಹಲಿಗೆ ಹೋಲಿಸಿದರೆ ಬೆಂಗಳೂರು ಹೆಣ್ಣು ಮಕ್ಕಳಿಗೆ ಸ್ವಲ್ಪ ಮಟ್ಟಿಗಿನ ಸುರಕ್ಷಿತ ಸಿಟಿಯಾಗಿದೆ.

ಅತ್ಯಾಚಾರ ತಡೆಯಲು ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ಹಾಕಬೇಕೆಂದು ಹೇಳುತ್ತಾರೆ, ಮೈ ತುಂಬಾ ಬಟ್ಟೆ ಹಾಕಿದ್ದ ಎಷ್ಟೋ ಹೆಣ್ಣು ಮಕ್ಕಳ ಮೆಲೆ ಅತ್ಯಾಚಾರ ನಡೆದಿಲ್ಲವೇ? 6 ತಿಂಗಳ ಮಗು ಸೆಕ್ಸಿಯಾಗಿ ಕಾಣುವುದೇ? ಅತ್ಯಾಚಾರಕ್ಕೆ ಕಾರಣ ವಿಕೃತ ಮನಸ್ಸು. ಮುಖ್ಯವಾಗಿ ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲ, ಜೈಲಿಗೆ ಹೋದರೆ ಕೆಲವೇ ದಿನಗಳಲ್ಲಿ ಹಿಂತಿರುಗಿ ಬರಬಹುದಲ್ಲವೇ?

ಇಲ್ಲಿ ನಾನು ಹೆಣ್ಣು ಸುರಕ್ಷಿತವಾಗಿರುವ ಕೆಲವೊಂದು ಸ್ಥಳಗಳ ಬಗ್ಗೆ ಹೇಳಿದ್ದೇನೆ. ಇಲ್ಲಿ ಹೆಣ್ಣು ಮಕ್ಕಳು ತಮಗೆ ಇಷ್ಟ ಬಂದ ಡ್ರೆಸ್ ಹಾಕುತ್ತಾರೆ. ಸ್ವತಂತ್ರವಾಗಿ ಓಡಾಡುತ್ತಾರೆ, ಆದರೆ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ. ಬನ್ನಿ ಆ ಸ್ಥಳಗಳಾವುವು ಎಂದು ನೋಡೋಣ ಬನ್ನಿ:

ಕೊಪನ್ ಹೆಗನ್ (ಡೆನ್ಮಾರ್ಕ್)

ಕೊಪನ್ ಹೆಗನ್ (ಡೆನ್ಮಾರ್ಕ್)

ಡೆನ್ಲಾರ್ಕ್ ಹೆಣ್ಣು ಮಕ್ಕಳಿಗೆ ಅತ್ಯಂತ ಸುರಕ್ಷಿತವಾದ ಸ್ಥಳವಾಗಿದೆ. ಇಲ್ಲಿ ಹೆಣ್ಣು ಮಕ್ಕಳು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಭಯವಿಲ್ಲದೆ ಓಡಾಡಬಹುದು.

ಆಂಸ್ಟರ್ಡ್ಯಾಮ್

ಆಂಸ್ಟರ್ಡ್ಯಾಮ್

ಇಲ್ಲಿ ವ್ಯಭಿಚಾರ ಕಾನೂನಿಗೆ ವಿರುದ್ಧವಾದ ಕೃತ್ಯವಲ್ಲ. ಮಹಿಳೆಯರಿಗೆ ಅತ್ಯಾಚಾರದ ಭಯವಿಲ್ಲ. ವ್ಯಭಿಚಾರಕ್ಕೆ ಇಲ್ಲಿಯ ಕಾನೂನು ಒಪ್ಪಿಗೆ ನೀಡಿದ್ದರ ಬಗ್ಗೆ ಚರ್ಚೆ ನಡೆಯುತ್ತಾ ಇರುತ್ತದೆ.

ಸ್ಟಾಕ್ ಹೋಮ್

ಸ್ಟಾಕ್ ಹೋಮ್

ಸ್ವೀಡನ್ ಮಹಿಳೆಯರಿಗೆ ಸುರಕ್ಷಿತವಾದ ಸ್ಥಳವಾಗಿದೆ. ಸ್ವೀಡನ್ ನಲ್ಲಿ ಮಹಿಳೆಯರಿಗೆ ಹೆರಿಗೆಯ ರಜೆಯನ್ನು ಇತರ ದೇಶಗಳಿಗಿಂತ ಹೆಚ್ಚು ಕೊಡಲಾಗುವುದು. ಇಲ್ಲಿಯ HR ಪಾಲಿಸಿ ಕೂಡ ಮಹಿಳೆಯರಿಗೆ ತುಂಬಾ ಉಪಕಾರವಾಗುವಂತಿದೆ.

ಜ್ಯೂರಿಚ್‌ (ಸ್ವಿಟ್ಜರ್ಲ್ಯಾಂಡ್)

ಜ್ಯೂರಿಚ್‌ (ಸ್ವಿಟ್ಜರ್ಲ್ಯಾಂಡ್)

ಇದು ತುಂಬಾ ಶಾಂತವಾದ ಪ್ರದೇಶವಾಗಿದೆ. ಇಲ್ಲಿ ಮಹಿಳೆಯರು ಪುರುಷರಷ್ಟೇ ಸ್ವತಂತ್ರವಾಗಿ ಓಡಾಡಬಹುದು.

 ವಿಯನ್ನಾ

ವಿಯನ್ನಾ

ವಿಯನ್ನಾ ನಗರದಲ್ಲಿ ಹೆಣ್ಣು ಮಕ್ಕಳು , ಕಾಮಾಂಧರ ಭಯ ಪಡುವಂತಹ ಪರಿಸ್ಥಿತಿಯಿಲ್ಲ. ಅಲ್ಲಿಯವರು ಅದೃಷ್ಟವಂತರಲ್ಲವೇ?

ಸಿಂಗಾಪುರ್

ಸಿಂಗಾಪುರ್

ಈ ಸುಂದರ ನಗರ ಸ್ವಚ್ಛತೆಗೆ ಮಾತ್ರವಲ್ಲ, ಅತ್ಯಾಚಾರ ಮುಕ್ತ ನಗರ ಅಂತಲೂ ಕರೆಯಬಹುದು. ಇಲ್ಲಿರುವ ಕಾನೂನು ಮಹಿಳೆಯರಿಗೆ ಹೆಚ್ಚಿನ ಸುರಕ್ಷಿತೆಯನ್ನು ನೀಡಿದೆ.

ಸಿಯೋಲ್

ಸಿಯೋಲ್

ಇಲ್ಲಿ ಮಹಿಳೆಯರು ಕೆಲಸಕ್ಕೆ ಹೋದರೆ ಅಷ್ಟೇ ಏಕೆ ನೈಟ್ ಪಾರ್ಟಿಗೆ ಹೋದರೂ ಸುರಕ್ಷಿತವಾಗಿ ಮನೆ ಸೇರಬಹುದು.

ಮ್ಯೂನಿಚ್, ಜರ್ಮನಿ

ಮ್ಯೂನಿಚ್, ಜರ್ಮನಿ

ಇಲ್ಲಿ ಸಾರಿಗೆ ವ್ಯವಸ್ಥೆಯೂ ತುಂಬಾ ಚೆನ್ನಾಗಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಎರಡು ಮಾತೇ ಇಲ್ಲ.

ಟೋಕಿಯೋ, ಜಪಾನ್

ಟೋಕಿಯೋ, ಜಪಾನ್

ಈ ಸ್ಥಳದಲ್ಲಿ ಮಹಿಳೆಯರು ಸುರಕ್ಷಿತವಾಗಿರಬಹುದು. ಇಲ್ಲಿ ಕೆಲಸದ ವಿಧಾನವೂ ಕೂಡ ಮಹಿಳೆಯರಿಗೆ ಅನುಕೂಲಕರವಾಗಿದೆ.

ದುಬೈ

ದುಬೈ

ಇಲ್ಲಿಯ ಗಲ್ಫ್ ಮಹಿಳೆಯರು ತುಂಬಾ ನಿರ್ಬಂಧವಿಲ್ಲದೆ, ಅತ್ಯಾಚಾರದ ಭಯವಿಲ್ಲದೆ ಓಡಾಡಬಹುದು. ಇಲ್ಲಿ ಅತ್ಯಾಚಾರ ಮಾಡಿದರೆ, ಆ ವ್ಯಕ್ತಿ ಮತ್ತೆ ಬದುಕಿರಲು ಸಾಧ್ಯವಿಲ್ಲ.

English summary

10 Women Friendly Cities In The World | Life And Women | ಮಹಿಳೆಯರು ಸುರಕ್ಷಿತವಾಗಿರುವ 10 ಸ್ಥಳಗಳು | ಜೀವನ ಮತ್ತು ಮಹಿಳೆ

It is rare to find a women-friendly city in this male dominated world. But women still do have their safe havens. Certain cities are perceived as women-friendly or rather safest cities for women. A city is women-friendly only if it gives a woman the freedom to travel late at night and wear whatever she wants to.
X
Desktop Bottom Promotion