For Quick Alerts
ALLOW NOTIFICATIONS  
For Daily Alerts

ಸ್ನೇಹಿತರನ್ನು ಕಳೆದುಕೊಂಡಾಗ ಆಗುವ ನೋವು ಹೇಳಲು ಸಾಧ್ಯವೇ?

By Hemanth
|

ಪ್ರಾಣ ಸ್ನೇಹಿತರಂತೆ ಇದ್ದವರು ಈಗ ದೂರವಾಗಿದ್ದಾರೆ ಎನ್ನುವ ಮಾತು ನಮ್ಮ ನಡುವಿನಿಂದಲೇ ಬರುತ್ತದೆ. ಯಾಕೆಂದರೆ ಕೆಲವರ ಸ್ನೇಹ ಆ ರೀತಿಯಾಗಿರುತ್ತದೆ. ಅವರು ದೂರವಾಗಲು ಸಾಧ್ಯವೇ ಇಲ್ಲ ಎಂದು ನಾವು ಭಾವಿಸಿರುತ್ತೇವೆ. ಆದರೆ ಪರಿಸ್ಥಿತಿ ಅವರನ್ನು ದೂರ ಮಾಡಿರುತ್ತದೆ. ಜೀವಕ್ಕೆ ಜೀವ ಕೊಡುವ ಸ್ನೇಹಿತರು ಕೂಡ ದೂರವಾಗುತ್ತಾರೆ. ಕಚೇರಿಯಲ್ಲಿ ಪುರುಷ ಸ್ನೇಹಿತರು: ಒಳಿತು-ಕೆಡುಕು

ಆದರೆ ಸ್ನೇಹಿತರಿಂದ ದೂರವಾಗಲು ನೋವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತದೆ. ಯಾಕೆಂದರೆ ಅವರೊಂದಿಗೆ ಆ ರೀತಿಯ ಭಾಂದವ್ಯ ಬೆಸೆದಿರುತ್ತದೆ. ಪ್ರೀತಿಸಿದವರು ದೂರವಾಗುವಾಗ ಕಾಡುವ ನೋವಿಗಿಂತ ಸ್ನೇಹಿತರು ದೂರವಾದಾಗ ಕಾಡುವ ನೋವು ಹೆಚ್ಚು. ಇದನ್ನು ಕೆಲವೊಂದು ಅಧ್ಯಯನಗಳು ಕೂಡ ದೃಢಪಡಿಸಿಕೊಂಡಿವೆ. ಕೆಟ್ಟ ಗೆಳೆಯರನ್ನು ಗುರುತಿಸುವ ವಿಧಾನಗಳು

ಸಂಗಾತಿಗಳನ್ನು ಕಳಕೊಳ್ಳುವುದಕ್ಕಿಂತ ಸ್ನೇಹಿತರನ್ನು ಕಳಕೊಂಡಾಗ ವ್ಯಕ್ತಿಗೆ ಏನಾಗುತ್ತದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಸಂಗಾತಿಗಳಿಗಿಂತಲೂ ಹೆಚ್ಚಾಗಿ ವಿಶ್ವಾಸವಿರಿಸಿಕೊಂಡಿರುವ ಸ್ನೇಹಿತರನ್ನು ಕಳಕೊಂಡಾಗ ಅತಿಯಾದ ನೋವಾಗುವುದು. ಇದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ......

ಸ್ನೇಹಿತರೊಂದಿಗೆ ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ

ಸ್ನೇಹಿತರೊಂದಿಗೆ ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ

ಸ್ನೇಹಿತರನ್ನು ನಾವು ತುಂಬಾ ವಿಶ್ವಾಸಿಗಳೆಂದು ಭಾವಿಸಿರುತ್ತೇವೆ. ಎಷ್ಟೇ ಗೌಪ್ಯ ಅಥವಾ ವೈಯಕ್ತಿಕ ವಿಚಾರವಾದರೂ ಅವರೊಂದಿಗೆ ಏನನ್ನೂ ಮುಚ್ಚಿಡುವುದಿಲ್ಲ. ಇಂತಹ ವಿಷಯಗಳನ್ನು ನಾವು ಸಂಗಾತಿಗಳೊಂದಿಗೂ ಹಂಚಿಕೊಳ್ಳಲ್ಲ. ಆದರೆ ಸ್ನೇಹಿತ ವಿಶ್ವಾಸಘಾತ ಮಾಡಿದಾಗ ಭೂಮಿಯೇ ಬಿರುಕು ಬಿಟ್ಟಂತಹ ಭಾವನೆಯಾಗುತ್ತದೆ.

ಯಾವಾಗಲೂ ಅವರು ಬೆಂಬಲಿಗರು

ಯಾವಾಗಲೂ ಅವರು ಬೆಂಬಲಿಗರು

ಪರಿಸ್ಥಿತಿ ಏನೇ ಆಗಿರಲಿ ಸ್ನೇಹಿತರು ಮಾತ್ರ ಯಾವಾಗಲೂ ನಮ್ಮ ಪರವಾಗಿ ನಿಲ್ಲುತ್ತಾರೆ. ಪ್ರಿಯತಮೆಯೊಂದಿಗಿನ ಪ್ರಥಮ ಚುಂಬನವಾಗಿರಲಿ ಅಥವಾ ಪ್ರಿಯತಮೆ ಕೈಕೊಟ್ಟ ಸಂದರ್ಭವಿರಲಿ, ಪ್ರತಿಯೊಂದನ್ನು ಹಂಚಿಕೊಳ್ಳುತ್ತೇವೆ. ಪ್ರತಿಯೊಂದು ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಸಂಬಂಧ ದೂರವಾದಾಗ ನಮಗೆ ಏನೋ ಕಳಕೊಂಡ ಭಾವನೆಯಾಗುತ್ತದೆ.

ವಿವರಿಸುವುದು ತುಂಬಾ ಕಠಿಣ

ವಿವರಿಸುವುದು ತುಂಬಾ ಕಠಿಣ

ಸ್ನೇಹಿತರನ್ನು ಕಳಕೊಂಡಾಗ ನಮಗೆ ತುಂಬಾ ಕೆಟ್ಟ ಭಾವನೆಯಾಗುತ್ತದೆ. ಇದರ ಬಗ್ಗೆ ಸುತ್ತಲಿನವರಿಗೆ ವಿವರಿಸುವುದು ತುಂಬಾ ಕಠಿಣ. ಇದು ತುಂಬಾ ಭಯಾನಕ ಮತ್ತು ಗೊಂದಲದಿಂದ ಕೂಡಿರುತ್ತದೆ.

ಕಳಕೊಂಡಿರುವುದನ್ನು ತುಂಬಲು ಅಸಾಧ್ಯ

ಕಳಕೊಂಡಿರುವುದನ್ನು ತುಂಬಲು ಅಸಾಧ್ಯ

ಪ್ರೇಮ ಸಂಬಂಧ ದೂರವಾದಾಗ ಬಳಿಗೆ ಬಂದು ನಿಂತು ಸಮಾಧಾನ ಹೇಳುವುದು ಸ್ನೇಹಿತರು. ಅವರು ಪ್ರತಿಯೊಂದು ಹಂತದಲ್ಲೂ ಸಮಾಧಾನ ಮಾಡುತ್ತಾರೆ. ಸ್ನೇಹಿತರನ್ನು ಕಳಕೊಂಡಾಗ ಪ್ರೇಮಿಗಳು ಹಲವಾರು ರೀತಿಯಿಂದ ಸಮಾಧಾನಿಸಲು ಪ್ರಯತ್ನಿಸಿದರೂ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ. ಅವರ ಜಾಗವನ್ನು ಮತ್ತೊಬ್ಬರಿಂದ ತುಂಬಲು ಸಾಧ್ಯವಿಲ್ಲ.

English summary

Why Is It So Painful When We Lose Friends?

Here, we are about to share the same as to what happens when a person loses her/his friend when compared to her/his partner. Losing a friend is more hurtful and depressing as they are the people whom we trust more than our partners at times. Well, nothing can beat the feeling of losing a friend in real.
X
Desktop Bottom Promotion