For Quick Alerts
ALLOW NOTIFICATIONS  
For Daily Alerts

ಕಚೇರಿಯಲ್ಲಿ ಪುರುಷ ಸ್ನೇಹಿತರು: ಒಳಿತು-ಕೆಡುಕು

By Hemanth Amin
|

ಸ್ನೇಹ ಅನ್ನುವುದು ಜೀವನದ ಅಮೂಲ್ಯ ಗಳಿಕೆ. ಬಾಲ್ಯದಿಂದ ಹಿಡಿದು, ಶಾಲೆ, ಕಾಲೇಜು, ಕಚೇರಿಯಲ್ಲಿ ನಾವು ಹಲವಾರು ಸ್ನೇಹಿತರನ್ನು ಸಂಪಾದಿಸುತ್ತೇವೆ. ಸ್ನೇಹದ ವಿಷಯಕ್ಕೆ ಬಂದಾಗ ಅದು ಗಂಡು ಅಥವಾ ಹೆಣ್ಣು ಎಂಬ ಭೇದ ಮಾಡುವುದಿಲ್ಲ. ನಿಮಗೆ ಗೆಳೆಯ ಅಥವಾ ಗೆಳತಿಯಿರಬಹುದು ಮತ್ತು ಅವರು ತಮ್ಮದೇ ಆದ ಪ್ರಾಮುಖ್ಯತೆ ಹೊಂದಿರುತ್ತಾರೆ.

ನಾವು ಕೆಲವರನ್ನು ಪರಿಚಯಸ್ಥರು ಮತ್ತು ಮತ್ತೆ ಕೆಲವರನ್ನು ಸ್ನೇಹಿತರೆಂದು ಪರಿಗಣಿಸುತ್ತೇವೆ. ಯಾಕೆ? ಸ್ನೇಹಿತರೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿರುತ್ತೇವೆ ಮತ್ತು ಅವರೊಂದಿಗೆ ತುಂಬಾ ಸಲುಗೆಯಿಂದ ಇರುತ್ತೇವೆ. ನಮ್ಮ ಯಾವುದೇ ಯೋಚನೆಗಳು ಮತ್ತು ಸಮಸ್ಯೆಗಳನ್ನು ನಾವು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಸ್ನೇಹಿತರು ಹುಡುಗ ಅಥವಾ ಹುಡುಗಿಯಾಗಿರಲಿ ಅದು ನಮಗೆ ದೊಡ್ಡ ಆಸ್ತಿ ಮತ್ತು ಯಾವುದೇ ಸಂದರ್ಭದಲ್ಲಿ ಅವರು ನಮಗೆ ನೆರವಾಗುತ್ತಾರೆ. ಕಚೇರಿಯಲ್ಲಿ ಪುರುಷ ಸ್ನೇಹಿತರು ತುಂಬಾ ಭಿನ್ನವಾಗಿ ಕೆಲಸ ಮಾಡುತ್ತಾರೆ.

Male friends at work: Pros and Cons

ಕೆಲಸ ಮಾಡುವ ಜಾಗವು ವೃತ್ತಿಪರ ಮತ್ತು ವೈಯಕ್ತಿಕವಾಗಿ ಬೇರೆ ಮಾರ್ಗವನ್ನು ಕೋರುತ್ತದೆ. ಕೆಲವು ಸಲ ಪುರುಷ ಸ್ನೇಹಿತರು ಹೆಚ್ಚಿನ ನೆರವು ನೀಡಬಲ್ಲರು. ಕೆಲಸದ ಜಾಗದಲ್ಲಿ ಕೆಲವೊಂದು ಸಲ ಸಮಸ್ಯೆಯಾಗಬಹುದು ಮತ್ತು ಇದನ್ನು ಪುರುಷ ಸ್ನೇಹಿತರು ಚೆನ್ನಾಗಿ ನಿಭಾಯಿಸಬಹುದು. ಪುರುಷ ಮತ್ತು ಮಹಿಳೆಯರ ಸ್ನೇಹವು ಧನಾತ್ಮಕ ಮತ್ತು ಋಣಾತ್ಮಕವಾಗಿ ಕೆಲಸ ಮಾಡಬಹುದು. ಅವುಗಳಿಗೆ ತಮ್ಮದೇ ಸಾಧಕ-ಬಾಧಕಗಳಿರಬಹುದು. ಕಚೇರಿಯಲ್ಲಿ ಪುರುಷ ಸ್ನೇಹಿತರೊಂದಿಗಿನ ಸಾಧಕ-ಬಾಧಕಗಳನ್ನು ಪಟ್ಟಿ ಮಾಡಲಾಗಿದೆ.

ಸಾಧಕಗಳು
* ಕಚೇರಿಯ ಜಾಗದಲ್ಲಿ ಸಮಸ್ಯೆಗಳು ಸಾಮಾನ್ಯ. ನೀವು ಸಮಸ್ಯೆಯಲ್ಲಿ ಸಿಲುಕಿದಾಗ ಪುರುಷ ಸಹೋದ್ಯೋಗಿಯು ಖಂಡಿತವಾಗಿಯೂ ನೆರವಾಗುತ್ತಾರೆ. ಪುರುಷ ಸ್ನೇಹಿತರು ಅನನ್ಯ ರೀತಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ವೃತ್ತಿಗೆ ಬಂದಾಗ ತಮ್ಮದೇ ಆದ ಶೈಲಿ ಮಾಡಿಕೊಂಡಿರುತ್ತಾರೆ. ಅವರ ತಲೆಯಲ್ಲಿ ಹಲವಾರು ಐಡಿಯಾಗಳಿರಬಹುದು. ಇದು ನಿಮ್ಮ ಸಮಸ್ಯೆಯನ್ನು ಒಳ್ಳೆಯ ರೀತಿಯಲ್ಲಿ ಬಗೆಹರಿಸಲು ನೆರವಾಗಬಹುದು.

* ಒಳ್ಳೆಯ ಕೆಲಸ ನಿಮಗೆ ತೃಪ್ತಿ ನೀಡಬಹುದು. ಒಂದು ಕೆಲಸವನ್ನು ಆಯ್ಕೆ ಮಾಡಿದ ಬಳಿಕ ಅದರಿಂದ ಸಿಗುವ ತೃಪ್ತಿ ತುಂಬಾ ಮುಖ್ಯವಾಗಿರುತ್ತದೆ. ಅಧ್ಯಯನಗಳ ಪ್ರಕಾರ ಪುರುಷ ಸ್ನೇಹಿತರಿಂದ ಕೆಲಸದ ತೃಪ್ತಿ ಹೆಚ್ಚುತ್ತದೆ.

* ಪುರುಷ ಸಹೋದ್ಯೋಗಿಗಳು ಕಚೇರಿಯಲ್ಲಿ ನಿಮ್ಮ ಒಳ್ಳೆಯ ಸ್ನೇಹಿತರಾಗಿರಬಹುದು. ಉತ್ತಮವಾಗಿ ಕೆಲಸ ಮಾಡುವಂತೆ ಮತ್ತು ನಿಮ್ಮ ವೃತ್ತಿಯಲ್ಲಿ ನೆರವಾಗಬಹುದು. ಆದರೂ ನೀವು ಅವರೊಂದಿಗೆ ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸಬೇಡಿ. ಕಚೇರಿಯ ಹೊರಗಡೆ ನೀವು ಅಪರಿಚಿತರಾಗಿ ಉಳಿಯಿರಿ. ಪುರುಷ ಸ್ನೇಹಿತರ ನೆರವು ಅಪಾರವಾಗಿರಬಹುದು ಮತ್ತು ನೀವು ಇದರಿಂದ ಪ್ರಶಂಸೆಗಳಿಸುವಂತೆ ಮಾಡಬಹುದು.

* ಉದ್ಯಮ ಎನ್ನುವುದು ಸ್ಪರ್ಧಾತ್ಮಕ ವಾತಾವರಣ ಹೊಂದಿರುತ್ತದೆ. ಇದು ಪುರುಷರ ಪ್ರಾಬಲ್ಯವಿರುವ ಪ್ರದೇಶ. ಮಹಿಳೆಯರು ಉದ್ಯಮದ ಉನ್ನತಿಗೇರಲು ಪುರುಷ ಸ್ನೇಹಿತರ ನೆರವು ತುಂಬಾ ಲಾಭದಾಯಕವಾಗಬಹುದು.

ಬಾಧಕಗಳು

ಪ್ರತೀ ನಾಣ್ಯಕ್ಕೂ ಎರಡು ಮುಖಗಳಿರುತ್ತದೆ ಮತ್ತು ಅದೇ ರೀತಿ ನಿಮ್ಮ ವಿರುದ್ಧ ಲಿಂಗದವರೊಂದಿಗಿನ ಸ್ನೇಹ ಕೂಡ. ಪುರುಷ ಮತ್ತು ಮಹಿಳೆಯ ಸ್ನೇಹದ ಬಗ್ಗೆ ಯಾವಾಗಲೂ ಕಲ್ಪನೆಗಳು ಆವರಿಸಿರುತ್ತದೆ. ಮಹಿಳೆ ಮತ್ತು ಪುರುಷರು ಕೇವಲ ಸ್ನೇಹಿತರಾಗಿಯೇ ಇರುತ್ತಾರೆಯಾ ಎನ್ನುವ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಕಚೇರಿಯಲ್ಲಿ ಪುರುಷ ಸ್ನೇಹಿತನನ್ನು ಹೊಂದುವುದು ಒಂದು ಒಳ್ಳೆಯ ಲಾಭವಿದ್ದರೂ ಇದರಲ್ಲಿ ಹಲವಾರು ಅನನುಕೂಲವಿದೆ.

* ದೈಹಿಕ ಆಕರ್ಷಣೆಯಿಂದ ಪುರುಷ ಮತ್ತು ಮಹಿಳೆ ಮಧ್ಯೆ ಸ್ನೇಹವಾಗಿರಬಹುದು. ಹೀಗೆ ಆಗಿದ್ದರೆ ಆಗ ಸ್ನೇಹದ ಬಂಧನದಲ್ಲಿ ದೀರ್ಘ ಕಾಲ ಉಳಿದುಕೊಳ್ಳಲು ಸಾಧ್ಯವಿಲ್ಲ.

* ವಿರುದ್ಧ ಲಿಂಗದವರೊಂದಿಗೆ ಆಕರ್ಷಣೆ ನೈಸರ್ಗಿಕ. ಪುರುಷ ಸಹೋದ್ಯೋಗಿಯೊಂದಿಗೆ ನಿಮಗೆ ಆ ರೀತಿಯ ಭಾವನೆಯಾದರೆ ಆಗ ಇದು ಮುಂದುವರಿಯಲು ಸಾಧ್ಯವಿಲ್ಲ. ಇದು ನಿಮ್ಮ ಒಳ್ಳೆಯ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

* ನೀವಿಬ್ಬರು ಅವಿವಾಹಿತರಾಗಿದ್ದರೆ ಆಗ ಪುರುಷ ಸಹೋದ್ಯೋಗಿಯೊಂದಿಗೆ ನಿಮ್ಮ ಸ್ನೇಹಕ್ಕೆ ಯಾವುದೇ ತೊಂದರೆಯಿಲ್ಲ. ಅವಿವಾಹಿತರಾಗಿರುವ ಕಾರಣ ಪರಸ್ಪರದೊಂಗಿಗೆ ನಿಮಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ. ಆದರೆ ನಿಮಗೆ ಮದುವೆಯಾಗಿದ್ದರೆ ಅದು ಕಷ್ಟ. ನಿಮ್ಮ ಜೀವನದಲ್ಲಿ ಮತ್ತೊಬ್ಬರು ಇದ್ದಾರೆ ಮತ್ತು ಅವರಿಗೆ ಮೋಸ ಮಾಡಬಾರದು ಎನ್ನುವುದನ್ನು ತಿಳಿದುಕೊಳ್ಳಿ.

* ಪುರುಷ ಸ್ನೇಹಿತನೊಂದಿಗೆನ ಕೆಲಸ ನಿಮ್ಮ ಸಂಗಾತಿ ಜತೆಗಿನ ಸಂಬಂಧವನ್ನು ಕದಡಬಹುದು. ಇದರಿಂದ ನಿಮ್ಮ ಪತಿಗೆ ಹೊಟ್ಟೆಕಿಚ್ಚು ಆಗಬಹುದು ಮತ್ತು ಅಸುರಕ್ಷತೆ ಭಾವ ಬರಬಹುದು. ನಿಮ್ಮ ಸಂಬಂಧ ಹಾಳಾಗದಂತೆ ನೋಡಿಕೊಳ್ಳಿ.

English summary

Male friends at work: Pros and Cons

We all would have had friends right from our childhood, in school, college, and now at the work place too. Gender is not a subject when it comes to friendship. You may have both male and female friends and definitely both have their own importance.
Story first published: Saturday, November 30, 2013, 16:18 [IST]
X
Desktop Bottom Promotion