For Quick Alerts
ALLOW NOTIFICATIONS  
For Daily Alerts

ವಾವ್...!ಅನಾನಸ್ -ಸೌತೆಕಾಯಿ ಸಲಾಡ್

By Arshad
|

ಗಿಡದ ಮೇಲೆ ಫಲ, ಫಲದ ಮೇಲೆ ಗಿಡ ಎಂಬ ಒಗಟಿಗೆ ಉತ್ತರವಾದ ಅನಾನಸ್ ಹಣ್ಣು ವಿಶ್ವದ ಒಂದು ಅತ್ಯಂತ ಆರೋಗ್ಯಕರವಾದ ಫಲವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ, ಮೆಗ್ನೀಶಿಯಂ ಆರೋಗ್ಯವನ್ನು ಕಾಪಾಡುವ ಜೊತೆಗೇ ವಿವಿಧ ಖಾದ್ಯಗಳ ಜೊತೆಗೆ ಮಿಶ್ರಣ ಮಾಡಿದಾಗ ಹುಳಿ ಸಿಹಿ ಮಿಶ್ರಿತ ರುಚಿಯನ್ನೂ ನೀಡುತ್ತದೆ.

ಇದು ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ತೂಕ ಇಳಿಸಲೂ ಫಲಪ್ರದವಾಗಿದೆ. ಇದರೊಂದಿಗೆ ಸೌತೆಕಾಯಿ ಸೇರಿದರೆ ತೂಕ ಇಳಿಸುತ್ತಿರುವವರಿಗೆ ಬಿಸಿಲಿನ ಝಳ ಸಹಿಸಲು ಮತ್ತು ಕೊಬ್ಬನ್ನು ಬಳಸಲು ನೆರವಾಗುತ್ತದೆ. ಇವೆರಡನ್ನು ಬಳಸಿ ತಯಾರಿಸಿದ ಸಾಲಾಡ್ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಲು ಸಾಧ್ಯವಿರುವುದರಿಂದ ಫ್ರಿಜ್ಜಿನಲ್ಲಿ ಸದಾ ಈ ಎರಡೂ ಫಲಗಳಿರುವಂತೆ ನೋಡಿಕೊಳ್ಳುವುದು ತೂಕವಿಳಿಸುವವರಿಗೆ ಉತ್ತಮ ಸಲಹೆಯಾಗಿದೆ. ನೀರು ಮತ್ತು ನಾರು ಎರಡೂ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಜೊತೆಗೇ ಕೊಬ್ಬನ್ನೂ ಕರಗಿಸುತ್ತದೆ. ಬನ್ನಿ, ಈ ಸಾಲಾಡ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ: ಟೊಮೇಟೊ-ಸೌತೆ ಸಲಾಡ್ ಹಸಿಯಾಗಿ ತಿನ್ನಿ

Weight Loss Recipe: Pineapple Cucumber Salad

ಅಗತ್ಯವಿರುವ ಸಾಮಾಗ್ರಿಗಳು:
*ಅನಾನಸ್: ಒಂದು (ಸಿಪ್ಪೆ ಮತ್ತು ನಡುವಿನ ದಂಟು ನಿವಾರಿಸಿ ಚಿಕ್ಕ ತುಂಡುಗಳಾಗಿಸಿದ್ದು)
*ಸೌತೆ: ಎರಡು (ಸಿಪ್ಪೆ ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳಾಗಿಸಿದ್ದು, ಎಳೆಯ ಬೀಜ ನಿವಾರಿಸುವ ಅಗತ್ಯವಿಲ್ಲ)
*ಟೊಮೇಟೊ: ಒಂದು - ಚಿಕ್ಕದಾಗಿ ಹೆಚ್ಚಿದ್ದು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು - ದಂಟು ನಿವಾರಿಸಿ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿದ್ದು

ಸಾಲಾಡ್ ಅಲಂಕಾರಕ್ಕಾಗಿ:
*ಲಿಂಬೆಹಣ್ಣಿನ ರಸ: ಒಂದು ದೊಡ್ಡ ಚಮಚ
*ಉಪ್ಪು: ರುಚಿಗನುಸಾರ
*ಕಾಳುಮೆಣಸಿನ ಪುಡಿ: ಒಂದು ಚಿಕ್ಕ ಚಮಚ
*ಜೇನು: ಮೂರು ದೊಡ್ಡ ಚಮಚ

ವಿಧಾನ:
1) ಲಿಂಬೆರಸ, ಉಪ್ಪು, ಕಾಳುಮೆಣಸಿನ ಪುಡಿ, ಜೇನು - ಇವೆಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಕಲಸಿ ನಯವಾದ ಲೇಪನವಾಗುವಂತೆ ಮಾಡಿ.
2) ಇನ್ನೊಂದು ಪಾತ್ರೆಯಲ್ಲಿ ಸೌತೆ, ಅನಾನಸ್, ಟೊಮೇಟೊ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ.
3) ತದನಂತರ ಈ ಪಾತ್ರೆಗೆ ಮೊದಲಿನ ಲೇಪನವನ್ನು ಹಾಕಿ ನಿಧಾನವಾಗಿ ಕಲಸಿ
4) ಎಲ್ಲಾ ತುಂಡುಗಳಿಗೆ ಈ ಲೇಪನ ಅಂಟಿದೆ ಎಂದು ಖಾತ್ರಿಯಾದ ಬಳಿಕ ಸುಮಾರು ಹತ್ತು ನಿಮಿಷಗಳವೆರೆಗೆ ಫ್ರಿಜ್ಜಿನಲ್ಲಿಡಿ.
5) ಈ ಸಾಲಾಡ್ ಅನ್ನು ನೇರವಾಗಿಯೂ, ಊಟದ ಬಳಿಕವೂ ಸೇವಿಸಬಹುದು.

ಪೌಷ್ಠಿಕಾಂಶದ ಮಾಹಿತಿ:
*ಅನಾನಸ್ ಆರೋಗ್ಯಕ್ಕೆ ಉತ್ತಮವಾಗಿರುವುದರ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ಧಿಸುತ್ತದೆ. ತೂಕ ಇಳಿಯಲು ನೆರವಾಗುತ್ತದೆ ಹಾಗೂ ವಿಶೇಷವಾಗಿ ಸಂಧಿವಾತದ ತೊಂದರೆ ಇರುವವರಿಗೆ ಉತ್ತಮವಾಗಿದೆ.

ಕಿವಿಮಾತು:
ಒಂದು ವೇಳೆ ಸಾಲಾಡ್ ಖಾಲಿಯಾದ ಮೇಲೆ ತಟ್ಟೆಯಲ್ಲಿ ನೀರು ಉಳಿದರೆ ಅದನ್ನು ಚೆಲ್ಲಬೇಡಿ. ಇದನ್ನು ಕುಡಿಯಲೂ ಬಹುದು. ಇದರಿಂದ ಪಾರಾಗಲು ಒಂದು ಸುಲಭ ವಿಧಾನವಿದೆ. ಸಲಾಡ್ ಸೇವಿಸುವ ಮುನ್ನವೇ ತಟ್ಟೆಯನ್ನು ಕೊಂಚ ಓರೆಯಾಗಿಸಿ ನೀರನ್ನು ಸಂಗ್ರಹಿಸಿ, ಈ ನೀರನ್ನು ಮತ್ತೆ ಸಾಲಾಡ್ ಮೇಲೆ ನಿಧಾನವಾಗಿ ಪ್ರೋಕ್ಷಿಸಿ. ಇದರಿಂದ ಸಲಾಡ್ ಇನ್ನಷ್ಟು ರುಚಿಕರವಾಗುತ್ತದೆ.

English summary

Weight Loss Recipe: Pineapple Cucumber Salad

Pineapples are considered as one of the world's healthiest fruits. It is rich in vitamin C and magnesium. This healthy fruit can be added to a lot of dishes to create a tangy and sweet taste. Traditionally, pineapples were used in sweet dishes, cakes and tarts. Today, using this nectarous fruit in a salad is the best way to enjoy it.
Story first published: Monday, November 2, 2015, 11:04 [IST]
X
Desktop Bottom Promotion