For Quick Alerts
ALLOW NOTIFICATIONS  
For Daily Alerts

ಬಾಯಿ ರುಚಿ ಹೆಚ್ಚಿಸುವ ಬಗೆ ಬಗೆಯ ಅನಾನಸ್ ರೆಸಿಪಿ

By Jaya subramanya
|

ಹೊಟ್ಟೆಯ ಹಸಿವನ್ನು ನಿಯಂತ್ರಿಸಲು ನಾವು ತರೇಹವಾರೀ ಖಾದ್ಯಗಳ ತಯಾರಿಯನ್ನು ಸಿದ್ಧಪಡಿಸಬೇಕಾಗುತ್ತದೆ. ಎಂದಿಗೂ ಒಂದೇ ಬಗೆಯ ಆಹಾರಗಳನ್ನು ತಿನ್ನುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ ಆದರೆ ನಾಲಗೆಯ ರುಚಿ ತಣಿಯುವುದಿಲ್ಲ. ಮನೆಯಲ್ಲೇ ಇರುವ ಮಹಿಳೆಯರು ತಮ್ಮ ಚಟುವಟಿಕಯ ಭಾಗವೆಂಬಂತೆ ಬಗೆ ಬಗೆಯ ಖಾದ್ಯಗಳನ್ನು ಟಿವಿಯಲ್ಲೋ ಇಲ್ಲಾ ಆನ್‌ಲೈನ್‌ನಲ್ಲೋ ನೋಡಿ ಕಲಿಯುತ್ತಿರುತ್ತಾರೆ ಮತ್ತು

ಅದನ್ನು ಮನೆಯಲ್ಲಿ ಪ್ರಯೋಗಿಸುತ್ತಿರುತ್ತಾರೆ. ಆದರೆ ಕಚೇರಿಗೆ ಹೋಗುವ ಮಹಿಳೆಯರಿಗೆ ನಿತ್ಯವೂ ವಿಧ ವಿಧದ ಅಡುಗೆಯನ್ನು ಮಾಡುವುದು ತುಸು ಕಷ್ಟದ ಕೆಲಸವೇ. ಆದರೂ ತಮಗೆ ಸಿಗುವ ಕಡಿಮೆ ಸಮಯದಲ್ಲೇ ಅನ್ನದ ಖಾದ್ಯಗಳನ್ನು ಬೇರೆ ಹಣ್ಣು ಇಲ್ಲವೇ ತರಕಾರಿಗಳೊಂದಿಗೆ ತಯಾರಿಸಿ ಮನೆಮಂದಿಗೆ ಬಡಿಸಬಹುದಾಗಿದೆ. ನೆಂಟರಿಷ್ಟರು ಮನೆಗೆ ಬಂದಂತಹ ಸಂದರ್ಭದಲ್ಲಿ ಇಲ್ಲವೇ ಹಬ್ಬ ಹರಿದಿನಗಳ ಸಮಯದಲ್ಲಿ ಕೂಡ ಈ ಡಿಫರೆಂಟ್ ಅನ್ನದ ಖಾದ್ಯ ನಿಮ್ಮನ್ನು ಹೊಗಳುವಂತೆ ಮಾಡುವುದು ಖಂಡಿತ.ಅಂತಹುದೇ ಮಾಡಲು ಸರಳವಾಗಿರುವ ಖಾದ್ಯ ತಯಾರಿಯಾಗಿದೆ ಪೈನಾಪಲ್

ರೆಸಿಪಿ. ತಾಜಾ ಪೈನಾಪಲ್ ಹಣ್ಣನ್ನು ಜೇನು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವಾಗಲೇ ಇದರ ರುಚಿ ಆಹಾ ಎಂದೆನಿಸುತ್ತದೆ ಇನ್ನ ಇದಕ್ಕೆ ವಿಧ ವಿಧದ ಮಸಾಲೆಗಳನ್ನು ಬೆರಸಿ ಸಿದ್ಧಪಡಿಸಿದ ಆಹಾರವನ್ನು ಸೇವಿಸುವುದು ಇನ್ನೆಷ್ಟು ರುಚಿಯನ್ನು ನೀಡಲಾರದು ಅಲ್ಲವೇ? ಹಾಗಿದ್ದರೆ ಮತ್ತೇಕೆ ತಡ ಪೌಷ್ಠಿಕ ಅಂಶಗಳನ್ನು ಭರ್ಜರಿಯಾಗಿ ಹೊಂದಿರುವ ಪೈನಾಪಲ್ ಆರೋಗ್ಯಕ್ಕೂ ಉತ್ತಮ ಅಂತೆಯೇ ಡಯೆಟ್‌ಗೂ ಹೇಳಿ ಮಾಡಿಸಿರುವಂಥದ್ದು...

ಅನಾನಸ್ ಅನ್ನದ ರೆಸಿಪಿ

ಅನಾನಸ್ ಅನ್ನದ ರೆಸಿಪಿ

ಉದ್ಯೋಗದಲ್ಲಿರುವ ಮಹಿಳೆಗೂ ಈ ಅನ್ನದ ರೆಸಿಪಿ ತಯಾರಿ ಸರಳವಾಗಿದೆ. ನಿಮಿಷಗಳಲ್ಲಿ ಇದನ್ನು ಸಿದ್ಧಪಡಿಸಬಹುದಾಗಿದ್ದು ನೀವು ಮಾಂಸಾಹಾರಿಗಳು ಎಂದಾದಲ್ಲಿ ಇದಕ್ಕೆ ಚಿಕನ್ ತುಂಡುಗಳನ್ನು ಕೂಡ ಸೇರಿಸಿ ಈ ಅನ್ನದ ರೆಸೆಪಿಯನ್ನು ಸಿದ್ಧಪಡಿಸಬಹುದಾಗಿದೆ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಪೈನಾಪಲ್ ರೈಸ್ ಟ್ರೈ ಮಾಡಿದ್ದೀರಾ?

ಅನಾನಸ್ ಜ್ಯೂಸ್

ಅನಾನಸ್ ಜ್ಯೂಸ್

ಸರಳವಾಗಿರುವ ಮತ್ತು ರುಚಿಕರವಾಗಿರುವ ಪೈನಾಪಲ್ ಜ್ಯೂಸ್ ಸಂಜೆಯ ವಿರಾಮದ ಪಾನೀಯವಾಗಿದೆ. ನೀವು ಡಯೆಟ್ ಪಾಲಿಸುವವರು ಎಂದಾದಲ್ಲಿ ಈ ಜ್ಯೂಸ್ ರೆಸಿಪಿ ನಿಮಗೆ ಸಹಕಾರಿಯಾಗಲಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪೈನಾಪಲ್ ಲೆಮನೆಡ್-ಅಂತಿಂಥ ಜ್ಯೂಸ್ ಇದಲ್ಲ

ಅನಾನಸ್ ಸಲಾಡ್

ಅನಾನಸ್ ಸಲಾಡ್

ಸೌತೆಕಾಯಿಯನ್ನು ಬಳಸಿ ಪೈನಾಪಲ್ ಸಲಾಡ್ ಅನ್ನು ಸಿದ್ಧಪಡಿಸಬಹುದಾಗಿದೆ. ನೀರಿನಂಶ ಇರುವ ಯಾವುದೇ ತರಕಾರಿಯನ್ನು ಪೈನಾಪಲ್‌ನೊಂದಿಗೆ ಸೇರಿಸಿ ಸಲಾಡ್ ಅನ್ನು ತಯಾರಿಸಿಕೊಳ್ಳಬಹುದಾಗಿದೆ. ಈ ಸಲಾಡ್ ಸಿದ್ಧಪಡಿಸುವಾಗ ಇದಕ್ಕೆ ಲಿಂಬೆ ರಸ, ಕಾಳುಮೆಣಸು ಹಾಗೂ ಉಪ್ಪನ್ನು ಹಾಕಿಕೊಳ್ಳಬಹುದಾಗಿದೆ. ಇದರಿಂದ ಸಲಾಡ್ ರುಚಿ ದ್ವಿಗುಣಗೊಳ್ಳುತ್ತದೆ. ಕಡಿಮೆ ಕ್ಯಾಲೊರಿಯನ್ನು ಹೊಂದಿರುವ ಸಲಾಡ್ ತೂಕ ಇಳಿಕೆಯಲ್ಲೂ ನಿಮಗೆ ಸಾಥ್ ನೀಡಲಿದೆ. ಹೆಚ್ಚು ಪೈನಾಪಲ್ ಬಳಸಿ ಈ ಸಲಾಡ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ವಾವ್...!ಅನಾನಸ್ -ಸೌತೆಕಾಯಿ ಸಲಾಡ್

ಅನಾನಸ್ ಗೊಜ್ಜು

ಅನಾನಸ್ ಗೊಜ್ಜು

ಹುಳಿ ಸಿಹಿ ಮಿಶ್ರಿತ ಈ ಅನಾನಸ್ ಗೊಜ್ಜಿನ ರುಚಿಯನ್ನು ಮರೆಯಲು ಸಾಧ್ಯವೇ? ಚಮಚದ ಹಿಂದಿನ ತುದಿಯಿಂದ ಇಳಿಬಿಟ್ಟ ತುಪ್ಪದೊಂದಿಗೆ ಬಿಸಿಬಿಸಿ ಅನ್ನ ಮತ್ತು ಅನಾನಸ್ ಗೊಜ್ಜು ಕಲಿಸಿ ತಿಂದರೆ... ಆಹಾ ಏನು ಕೇಳ್ತೀರಾ! ಬಾಯಲ್ಲಿ ನೀರೂರುತ್ತಿದೆಯೇ? ಬನ್ನಿ ಅನಾನಸ್ ಗೊಜ್ಜು ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ತಿನ್ನಲು ಸಜ್ಜಾಗಿ ಅನಾನಸ್ ಗೊಜ್ಜು

English summary

Quick And Easy Pineapple Recipes

Have you ever tried eating raw pineapple with some salt and pepper? Yes, doesn't it taste just awesome. Well, if you've not tried it yet, we request you to definitely try this lip-smacking piece of fruit. Most of us during our childhood days would have certainly had this wonderful fruit. But, as you grew up, little did you know that there are even more tastier recipes that you can prepare with this amazing fruit pineapple. So, let's take a look at the tasty pineapple recipes that you can prepare.
X
Desktop Bottom Promotion