For Quick Alerts
ALLOW NOTIFICATIONS  
For Daily Alerts

ತಿನ್ನಲು ಸಜ್ಜಾಗಿ ಅನಾನಸ್ ಗೊಜ್ಜು

By Prasad
|
Pineapple
ಹಬ್ಬದ ಮೃಷ್ಟಾನ್ನದಲ್ಲಿ, ಮದುವೆಮನೆ ಭೋಜನಗಳಲ್ಲಿ ಬಾಳೆಎಲೆಯ ಊಟ ಮಾಡುವಾಗ ಬಲತುದಿಯಲ್ಲಿ ಅನಾನಸ್ ಗೊಜ್ಜು ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಮನಸು ಚಟಪಡಿಸುತ್ತದೆ. ಚಮಚದ ಹಿಂದಿನ ತುದಿಯಿಂದ ಇಳಿಬಿಟ್ಟ ತುಪ್ಪದೊಂದಿಗೆ ಬಿಸಿಬಿಸಿ ಅನ್ನ ಮತ್ತು ಅನಾನಸ್ ಗೊಜ್ಜು ಕಲಿಸಿ ತಿಂದರೆ... ಆಹಾ ಏನು ಕೇಳ್ತೀರಾ!

* ಗಾಯತ್ರಿ ಶೇಷಾಚಲ

ಬೇಕಾಗುವ ಸಾಮಾಗ್ರಿಗಳು :

ಅನಾನಸ್‌ - 1
ಉದ್ದಿನ ಬೇಳೆ - 4 ಚಮಚ
ಜೀರಿಗೆ - 1 ಚಮಚ
ಮೆಂತ್ಯ - 1/2 ಚಮಚ
ಬಿಳಿ ಎಳ್ಳು - 2 ಚಮಚ
ಹುಣಸೆ ಹಣ್ಣು - ನಿಂಬೆಗಾತ್ರದಷ್ಟು
ಇಂಗು - ಎರಡು ಚಿಟಿಕೆ
ಖಾರದ ಪುಡಿ - 3 ಚಮಚ
ಒಣ ಕೊಬ್ಬರಿ - 1ಚಮಚ
ಉಪ್ಪು ಹಾಗೂ ಬೆಲ್ಲ - ರುಚಿಗೆ ತಕ್ಕಷ್ಟು
ಎಣ್ಣೆ - 1ಸಣ್ಣ ಚಮಚ
ಸಾಸಿವೆ -1 ಸಣ್ಣ ಚಮಚ

ಮಾಡುವ ವಿಧಾನ :

ಅನಾನಸ್‌ ಹಣ್ಣನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಹುಣಸೆಹಣ್ಣನ್ನು ನೆನೆಸಿ, ಹಿಂಡಿ ರಸ ತೆಗೆದಿಟ್ಟುಕೊಳ್ಳಿ. ಮಸಾಲೆ ಪದಾರ್ಥಗಳನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ಪುಡಿಮಾಡಿ. ಕೊನೆಯಲ್ಲಿ ಅದಕ್ಕೆ ಕೊಬ್ಬರಿ ಹಾಕಿ, ಮತ್ತೆ ಗಿರಿಗಿರಿ ಅನ್ನಿಸಿ.

ಒಂದು ಕಡಾಯಿಯಲ್ಲಿ ಹೆಚ್ಚಿದ ಹಣ್ಣುಗಳನ್ನು ಹಾಕಿ 3-4 ನಿಮಿಷ ಹುರಿಯಿರಿ. ನಂತರ ಅದಕ್ಕೆ ಹುಳಿ ರಸವನ್ನು ಮತ್ತು ಎರಡು ಲೋಟ ನೀರನ್ನು ಹಾಕಿ. ಪುಡಿ ಮಾಡಿದ ಮಸಾಲೆ, ಬೆಲ್ಲ, ಇಂಗು ಮತ್ತು ಉಪ್ಪನ್ನು ಹಾಕಿ. 5 ನಿಮಿಷ ಚೆನ್ನಾಗಿ ಕುದಿಸಿ ಕೆಳಗಿಳಿಸಿ.

ಚಪಾತಿ ಮತ್ತು ಪೂರಿ ಜೊತೆ ನೆಚ್ಚಿಕೊಳ್ಳಲು ಚೆನ್ನಾಗಿರುತ್ತದೆ. ಅನ್ನದ ಜೊತೆ ಕೂಡ ನೆಂಜಿಕೊಂಡು ತಿನ್ನಬಹುದು.

Story first published: Wednesday, February 24, 2010, 17:44 [IST]
X
Desktop Bottom Promotion