For Quick Alerts
ALLOW NOTIFICATIONS  
For Daily Alerts

ಒಮ್ಮೆ ‘ಪನ್ನೀರ್ ಟಿಕ್ಕಾ ರೋಲ್, ಟ್ರೈ ಮಾಡಿ ಸೂಪರ್ ಇರುತ್ತೆ!

By Jaya subramanya
|

ನಿಮ್ಮ ಮನೆಯವರು ಬೋರಿಂಗ್ ಅಡುಗೆಯಿಂದ ಬೇಸರಗೊಂಡಿದ್ದಾರೆಯೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಪನ್ನೀರ್ ಟಿಕ್ಕಾ ರೋಲ್ ಅವರನ್ನು ಸಂತಸಗೊಳಿಸುವುದು ಖಂಡಿತ. ಪನ್ನೀರ್ ಎಲ್ಲರೂ ಇಷ್ಟಪಡುವ ಖಾದ್ಯವಾಗಿದೆ. ಅಂತೆಯೇ ಇದು ಎಲ್ಲಾ ಬಗೆಯ ಆಹಾರದಲ್ಲೂ ಸರಿಹೊಂದುತ್ತದೆ.

ಅನ್ನ, ಚಪಾತಿ, ಪೂರಿ, ಪರೋಟಾ, ನಾನ್ ಹೀಗೆ ವೈವಿಧ್ಯಮಯ ಆಹಾರ ಪದಾರ್ಥಗಳಲ್ಲಿ ಪನ್ನೀರ್ ಅನ್ನು ಉತ್ತಮ ಕಾಂಬಿನೇಶನ್ ಅಂತೆ ಬಳಸಿಕೊಳ್ಳಬಹುದಾಗಿದೆ. ಹೆಚ್ಚುವರಿ ಪ್ರೋಟೀನ್ ಮತ್ತು ವಿಟಮಿನ್ ಅಂಶಗಳನ್ನು ಪನ್ನೀರ್ ಒಳಗೊಂಡಿದ್ದು ಈ ಟಿಕ್ಕಾ ರೋಲ್ ಅನ್ನು ನಿಮಗೆ ಹೆಚ್ಚುವೇಗವಾಗಿ ಸರಳವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ.

Paneer Tikka Roll

ಹೆಚ್ಚಿನ ಸಾಮಾಗ್ರಿಗಳನ್ನು ಈ ಟಿಕ್ಕಾ ರೋಲ್‌ನಲ್ಲಿ ಬಳಸಲಾಗುವುದರಿಂದ ಇದಕ್ಕಾಗಿ ಹೆಚ್ಚುವರಿ ಸಮಯ ಬೇಕಾಗಬಹುದು ಎಂಬುದಾಗಿ ಯೋಚಿಸಬೇಡಿ. ನಿಮ್ಮ ಮಕ್ಕಳು ಹೆಚ್ಚು ಇಷ್ಟಪಡುವ ಈ ಖಾದ್ಯವನ್ನು ನಿಮಗೆ ಲಭ್ಯವಿರುವ ಸಾಮಾಗ್ರಿಗಳನ್ನು ಬಳಸಿಕೊಂಡು ಸಿದ್ಧಪಡಿಸಿಕೊಳ್ಳಬಹುದು. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಟಿಕ್ಕಾ ರೋಲ್‌ನ ತಯಾರಿ ವಿಧಾನ ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಹೊಸ ರುಚಿ-'ಪನ್ನೀರ್ ರೋಲ್' ಅದೇನು ರುಚಿ ಅಂತೀರಾ...

ಸಾಮಾಗ್ರಿಗಳು
*ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ- 1/2 ಇಂಚಿದ್ದು
*ಈರುಳ್ಳಿ - 1
*ಮೆಣಸಿನ ಹುಡಿ - 1/4 ಚಮಚ
*ಜೀರಿಗೆ ಹುಡಿ - 1/4 ಚಮಚ
*ಕೊತ್ತಂಬರಿ ಹುಡಿ - 1/4 ಚಮಚ
*ಅರಿಶಿನ ಹುಡಿ - ಚಿಟಿಕೆಯಷ್ಟು
*ಅಜ್ವಾನಿ - 2ಚಿಟಿಕೆ
*ಕಡಲೆಹಿಟ್ಟು - 1/2 ಚಮಚ
*ಪನ್ನೀರ್ - 100 ಗ್ರಾಮ್ಸ್
*ಮೊಸರು - 1/2 ಚಮಚ
*ಆಲೀವ್ ಎಣ್ಣೆ - 2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಚಪಾತಿ - 1

ಮಾಡುವ ವಿಧಾನ
* ದೊಣ್ಣೆಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. ಪನ್ನೀರ್ ಅನ್ನು ತುಂಡುಗಳನ್ನಾಗಿ ಮಾಡಿ. ನಿಮ್ಮ ಆಯ್ಕೆಯ ವಿಧಾನದಲ್ಲಿ ಕೂಡ ಪನ್ನೀರ್ ಅನ್ನು ನಿಮಗೆ ಕತ್ತರಿಸಿಕೊಳ್ಳಬಹುದಾಗಿದೆ.


*ಈಗ ತಳ ಆಳವಿರುವ ಬಾಣಲೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ ಅದರಲ್ಲಿ ಆಲೀವ್ ಎಣ್ಣೆ ಹಾಕಿ, ಎಣ್ಣೆ ಬಿಸಿಯಾಗುತ್ತಿದ್ದಂತೆ ಈರುಳ್ಳಿಯನ್ನು ಹಾಕಿಕೊಂಡು ಚೆನ್ನಾಗಿ ಹಾಕಿ ಹುರಿದುಕೊಳ್ಳಿ. ಈರುಳ್ಳಿಯನ್ನು ಜಾಸ್ತಿ ಬೇಯಿಸಲು ಹೋಗಬೇಡಿ. ಈಗ ದೊಣ್ಣೆಮೆಣಸಿನ ಕಾಯಿಯನ್ನು ಹಾಕಿಕೊಂಡು ಬೇಯಿಸಿ.
*ಹಸಿ ವಾಸನೆ ಹೋಗುತ್ತಿದ್ದಂತೆ, ಮೆಣಸಿನ ಹುಡಿಯನ್ನು ಈ ಮಿಶ್ರಣಕ್ಕೆ ಹಾಕಿ. ಅಂತೆಯೇ ಜೀರಿಗೆ, ಕೊತ್ತಂಬರಿ, ಅರಿಶಿನ ಮತ್ತು ಅಜ್ವಾನಿಯನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಕಲಸಿ. ಜಾಸ್ತಿ ಕಾಯಿಸಬೇಡಿ.
*ಈಗ ಬೌಲ್‌ನಲ್ಲಿ ಮೊಸರು ಮತ್ತು ಕಡಲೆಹಿಟ್ಟನ್ನು ಕಲಸಿಕೊಳ್ಳಿ.
*ಚೆನ್ನಾಗಿ ಕಲಸಿ ಪೇಸ್ಟ್ ಮಾಡಿಕೊಳ್ಳಿ.
*ಇನ್ನು ಇದನ್ನು ತರಕಾರಿ ಮಿಶ್ರಣದೊಂದಿಗೆ ಬೆರೆಸಿ.
*ಈಗ ಪನ್ನೀರ್ ತೆಗೆದುಕೊಂಡು ಮಸಾಲಾವನ್ನು ಪನ್ನೀರ್ ತುಂಡುಗಳು ಹೀರಿಕೊಳ್ಳುವಂತೆ ಮಾಡಿ. ಪನ್ನೀರ್ ಒಡೆಯದಂತೆ ನೋಡಿಕೊಳ್ಳಿ. ಈಗ ಪನ್ನೀರ್ ಮಸಾಲೆಯನ್ನು ಬೇಯಿಸಿಕೊಳ್ಳಿ.
*ಚಪಾತಿಯನ್ನು ತೆಗೆದುಕೊಂಡು ಅದರ ಎರಡೂ ಬದಿ ಚೆನ್ನಾಗಿ ಬಿಸಿ ಮಾಡಿ. ಹಿಂದಿನ ದಿನದ ಚಪಾತಿ ಕೂಡ ಪನ್ನೀರ್ ಟಿಕ್ಕಾಗಾಗಿ ನೀವು ಬಳಸಬಹುದಾಗಿದೆ.
*ಈಗ ಚಪಾತಿಯನ್ನು ತಟ್ಟೆಯಲ್ಲಿರಿಸಿ ಮತ್ತು ಬೇಕಾದಷ್ಟು ಪ್ರಮಾಣದಲ್ಲಿ ಪನ್ನೀರ್ ಮಸಾಲೆಯನ್ನು ಚಪಾತಿಯ ಮಧ್ಯಭಾಗದಲ್ಲಿ ಇರಿಸಿಕೊಳ್ಳಿ.
*ಜಾಸ್ತಿ ಮಸಾಲೆಯನ್ನು ತುಂಬಬೇಡಿ. ಇದರಿಂದ ನೀವು ಚಪಾತಿ ರೋಲ್ ಮಾಡುವಾಗ ಮಸಾಲೆ ಚೆಲ್ಲಿ ಹೋಗಬಹುದು. ಹಾಗಾಗಿ ಚಪಾತಿಯನ್ನು ರೋಲ್ ಮಾಡುವಾಗ ಮಸಾಲೆ ಹೊರಬರದಂತೆ ಗಮನಿಸಿಕೊಳ್ಳಿ.
*ಟಿಶ್ಯೂನಲ್ಲಿ ಚಪಾತಿ ರೋಲ್ ಅನ್ನು ಸುತ್ತಿಕೊಳ್ಳಿ.
*ನಿಮಗೆ ಇನ್ನಷ್ಟು ರೋಲ್ ಮಾಡಬೇಕಿದ್ದಲ್ಲಿ ಮಸಾಲೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ.
English summary

Easy And Quick Paneer Tikka Roll

This recipe of Paneer Tikka Roll is so easy to make that it is a child's play. Quite literally! You can delegate kids at your home to help you with this and it will be ready in a jiffy. The ingredients used are easily available and we bet that you probably have them all in your pantry.
Story first published: Friday, June 23, 2017, 20:21 [IST]
X
Desktop Bottom Promotion