For Quick Alerts
ALLOW NOTIFICATIONS  
For Daily Alerts

ಗಣೇಶ ಹಬ್ಬಕ್ಕೆ ಸಿಹಿ ಸಿಹಿ ಹೂರಣದ ಹೋಳಿಗೆ!

By Jaya subramanya
|

ಮೋದಕ ಪ್ರಿಯನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ವಿಘ್ನ ವಿನಾಶಕನೆಂದೇ ಚಿರಪರಿಚಿತನಾಗಿರುವ ಗಣಪ ಬೇಗನೇ ಒಲಿದು ಬರುವ ದೇವರಾಗಿದ್ದಾರೆ. ಸರಳ ಪೂಜೆಯಲ್ಲೇ ಸಂತೃಪ್ತಿ ಹೊಂದುವ ವಿನಾಯಕನಿಗೆ ದೇಶದೆಲ್ಲೆಡೆ ಸಂಭ್ರಮದ ಪೂಜೆ ಪುನಸ್ಕಾರ ನಡೆಯುತ್ತದೆ.

ಗಣೇಶನ ಮೂರ್ತಿ ರಸ್ತೆಯ ಇಕ್ಕೆಲಗಳಲ್ಲೂ ನಮ್ಮನ್ನು ಆಕರ್ಷಿಸಲು ಸಿದ್ಧವಾಗಿದ್ದು ಮನೆಮನೆಗಳಲ್ಲಿ ಗಣಪ ದಯಪಾಲಿಸಿ ಪೂಜೆಯನ್ನು ಮಾಡಿಸಿಕೊಳ್ಳಲಿದ್ದಾರೆ. ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ನಮ್ಮ ವಾಡಿಕೆಯಾಗಿದ್ದು ಸಿಹಿ ಇಲ್ಲಿ ಬೇಕೇ ಬೇಕು. ಚತುರ್ಥಿಯಂದು ಹೂರಣ ಹೋಳಿಗೆಯನ್ನು ಅತಿ ವಿಶೇಷವಾಗಿ ತಯಾರಿಸುತ್ತಾರೆ. ಗಣೇಶ ಮತ್ತೆ ಬರುವನು, ರುಚಿಯಾದ ಮೋದಕ ಮಾಡಿ

ದಕ್ಷಿಣ ಭಾರತದಲ್ಲಿ ಸಕ್ಕರೆ ಹೋಳಿಗೆ (ಸಕ್ಕರೆ ಬಳಸಿ ಮಾಡುವ ಹೂರಣದ ಹೋಳಿಗೆ) ಎಂದೇ ಕರೆಯಿಸಿಕೊಂಡಿರುವ ಈ ಸಿಹಿಯನ್ನು ಅತಿ ವಿಶೇಷವಾಗಿ ತಯಾರಿಸಲಾಗುತ್ತದೆ. ಹಾಲು ಮತ್ತು ತುಪ್ಪದಲ್ಲಿ ಈ ಹೋಳಿಗೆಯನ್ನು ಸವಿದರೆ ಆಹಾ ಆ ಅನುಭವವೇ ಬೇರೆ. ಹಾಗಿದ್ದರೆ ತಡ ಮಾಡದೇ ಹೂರಣದ ಹೋಳಿಗೆ ರೆಸಿಪಿಯ ವಿಧಾನವನ್ನು ಇಲ್ಲಿ ತಿಳಿಸಿಕೊಡುತ್ತಿದ್ದು ಮಾಡಲು ನೀವು ಸಿದ್ಧರಾಗಿ...

Tasty Sugar Puran Poli Recipe For Ganesh Chaturthi

*ಪ್ರಮಾಣ - 8
*ಅಡುಗೆಗೆ ಬೇಕಾದ ಸಮಯ - 1/2 ಗಂಟೆ
*ಸಿದ್ಧತಾ ಸಮಯ - 1/2 ಗಂಟೆ

ಸಾಮಾಗ್ರಿಗಳು
*ಸಕ್ಕರೆ - 3 ಕಪ್
*ಸಣ್ಣ ರವೆ (ಸೋಜಿ ರವೆ) - 2 ಮತ್ತು 1/2 ಕಪ್
*ತುರಿದ ತೆಂಗಿನಕಾಯಿ - 5 ರಿಂದ 6 ಕಪ್ಸ್
ಮೈದಾ - 1 ಮತ್ತು 1/2 ಕಪ್
*ಪೋಪ್ಪಿ ಸೀಡ್ಸ್ - 2 ಚಮಚ
*ಏಲಕ್ಕಿ ಹುಡಿ - 1 ಚಮಚ
*ಎಣ್ಣೆ
*ತುಪ್ಪ ಗಣಪನಿಗೆ ಬಲು ಇಷ್ಟ ರುಚಿಯಾದ ರವೆ ಲಾಡು

ಮಾಡುವ ವಿಧಾನ
*ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಮೈದಾ, ರವೆ ಮತ್ತು ಎಣ್ಣೆಯನ್ನು ಹಾಕಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ.
*ಹಿಟ್ಟಿನ ಮಾದರಿಯಲ್ಲಿ ಇದನ್ನು ತಯಾರಿಸಿಕೊಳ್ಳಿ ಚಪಾತಿ ಮಾಡುವ ರೀತಿಯಲ್ಲಿ ಹಿಟ್ಟನ್ನು ನಾದಿ. 2 ಗಂಟೆಗಳ ಕಾಲ ಇದನ್ನು ಪಕ್ಕದಲ್ಲಿಡಿ. (ಹಿಟ್ಟನ್ನು ತಯಾರಿಸುವಾಗ ಚೆನ್ನಾಗಿ ಎಣ್ಣೆಯನ್ನು ಬಳಸಿಕೊಳ್ಳಿ)
*ಪೋಪ್ಪಿ ಬೀಜಗಳನ್ನು ಹುರಿದುಕೊಳ್ಳಿ ಮತ್ತು ಇದನ್ನು ಮಿಕ್ಸಿ ಜಾರಿಗೆ ವರ್ಗಾಯಿಸಿ ಇದಕ್ಕೆ ಸಕ್ಕರೆ, ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಬೆರೆಸಿ ಚೆನ್ನಾಗಿ ಹುಡಿ ಮಾಡಲು ಇದನ್ನು ಗ್ರೈಂಡ್ ಮಾಡಿ
*ಹುಡಿ ಮಾಡಿದ ಮಿಶ್ರಣವನ್ನು ತೆಗೆದುಕೊಂಡು ಅದರಿಂದ ಸಣ್ಣ ಉಂಡೆಗಳನ್ನು ತಯಾರಿಸಿ
*ಇನ್ನು ಹಿಟ್ಟಿನಿಂದ ಒಂದು ಭಾಗವನ್ನು ಇದೀಗ ತೆಗೆದುಕೊಳ್ಳಿ (ನೀವು ರೋಟಿ ಅಥವಾ ಚಪಾತಿ ತಯಾರಿಸಿದಂತೆ)
*ನಿಮ್ಮ ಮುಂಗೈನಲ್ಲಿ ಅದನ್ನು ಇರಿಸಿಕೊಳ್ಳಿ ಮತ್ತು ಸಣ್ಣ ಪ್ರಮಾಣದ ತೆಂಗಿನ ತುರಿ ಮಿಶ್ರಣವನ್ನು ಇದರ ಮೇಲಿರಿಸಿ ಹಾಗೂ ಹಿಟ್ಟನ್ನು ಎಲ್ಲಾ ಭಾಗದಿಂದ ಮುಚ್ಚಿ ಪ್ಲಾಸ್ಟಿಕ್ ಆವೃತವಾಗಿರುವ ಶೀಟ್ ಅನ್ನು ತೆಗೆದುಕೊಂಡು ಅದರ ಮೇಲೆ ಎಣ್ಣೆಯನ್ನು ಸವರಿ
*ಶೀಟ್ ಮೇಲೆ ಸ್ಟಫ್ ಮಾಡಿದ ಉಂಡೆಯನ್ನು ಇರಿಸಿ ಮತ್ತು ನಿಮ್ಮ ಅಂಗೈಯನ್ನು ಬಳಸಿಕೊಂಡು ಇದನ್ನು ತಟ್ಟಿ.
*ಇದೇ ಸಮಯದಲ್ಲಿ ಪ್ಯಾನ್ ಬಿಸಿ ಮಾಡಿಕೊಳ್ಳಿ, ಹೋಳಿಗೆಯನ್ನು ಪ್ಯಾನ್‎ಗೆ ಹಾಕಿ. ತುಪ್ಪ ಬಳಸಿಕೊಂಡು
*ಹೋಳಿಗೆಯ ಎರಡೂ ಬದಿಯನ್ನು ಬೇಯಿಸಿಕೊಳ್ಳಿ ಇದು ಕಂದು ಬಣ್ಣಕ್ಕೆ ಬರುವವರೆಗೆ ಬೇಯಿಸಿ.
*ಇದನ್ನು ತಟ್ಟೆಗೆ ವರ್ಗಾಯಿಸಿಕೊಂಡು ಬಿಸಿಬಿಸಿಯಾಗಿ ಸೇವಿಸಲು ನೀಡಿ. ಮೊದಲಿಗೆ ಈ ಸಿಹಿಯನ್ನು ಗಣಪನಿಗೆ ನೀಡಿ ನಂತರ ಪ್ರಸಾದ ರೂಪದಲ್ಲಿ ಸೇವಿಸಿ. ಇದನ್ನು ತಯಾರಿಸಿ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.

English summary

Tasty Sugar Puran Poli Recipe For Ganesh Chaturthi

The main attraction of the festival is the Ganesh idol and the sweets that are offered to the lord. Apart from the ladoo, one of the important sweet recipes that can be prepared for Ganesh Chathurti is puran poli. You may know how to prepare the puran poli sweet recipe. But here's an easy method to prepare the delicacy.
Story first published: Tuesday, August 30, 2016, 20:10 [IST]
X
Desktop Bottom Promotion