For Quick Alerts
ALLOW NOTIFICATIONS  
For Daily Alerts

ಗಣೇಶ ಮತ್ತೆ ಬರುವನು, ರುಚಿಯಾದ ಮೋದಕ ಮಾಡಿ

|
Fried modakas
ಗಣೇಶ ಚತುರ್ಥಿ ಹಬ್ಬ ಇನ್ನೇನು ಹತ್ತಿರ ಬರ್ತಿದೆ (ಸೆ.1). ಗಣೇಶ ಹಬ್ಬಕ್ಕೆಂದೇ ವಿಶೇಷ ಸಿಹಿ ತಿಂಡಿಗಳ ತಯಾರಿ ವಾರದ ಮುಂಚಿತವಾಗಿಯೇ ಆರಂಭಗೊಂಡಿರುತ್ತೆ.

ಮೋದಕ ಪ್ರಿಯ ಗಣಪನಿಗೆ ರುಚಿಯಾದ ಮೋದಕವಿಲ್ಲದಿದ್ದರೆ ಹೇಗೆ? ಮೋದಕಗಳಲ್ಲಿ ಎರಡು ರೀತಿ ಇದೆ. ಬೇಯಿಸುವುದು ಮತ್ತು ಎಣ್ಣೆಯಲ್ಲಿ ಕರಿಯುವುದು. ಇದೀಗ ಎಣ್ಣೆಯಲ್ಲಿ ಕರಿಯುವ ಮೋದಕ ಮಾಡುವ ರೀತಿಯನ್ನು ತಿಳಿದುಕೊಳ್ಳಿ. ಹಬ್ಬದ ದಿನ ಕೇವಲ ಅರ್ಧ ಗಂಟೆಯಲ್ಲಿ ಈ ಮೋದಕ ತಯಾರಿಸಬಹುದು.

ಮೋದಕಕ್ಕೆ ಬೇಕಾದ ಪದಾರ್ಥಗಳು:
* 2 ಕಪ್ ಮೈದಾ
* 2 ಚಮಚ ಚಿರೋಟಿ ರವೆ
* ಎಣ್ಣೆ, ಉಪ್ಪು, ನೀರು
* ಪುಡಿ ಮಾಡಿದ ಬೆಲ್ಲ
* ಒಂದು ಕಪ್ ತುರಿದಿಟ್ಟ ತೆಂಗಿನ ಕಾಯಿ
* 1/2 ಚಮಚ ಏಲಕ್ಕಿ ಪುಡಿ
* 1 1/2 ಚಮಚ ತುಪ್ಪ

ಮೋದಕ ಮಾಡುವ ಬಗೆ ಹೇಗೆ?
ಸ್ಟೆಪ್ 1: ಮೈದಾ, ಚಿರೋಟಿ ರವೆ, ಉಪ್ಪು, ಸ್ವಲ್ಪ ಎಣ್ಣೆ ಹಾಕಿಕೊಂಡು, ಅವಶ್ಯಕವಿದ್ದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ಚೆನ್ನಾಗಿ ಮಿದ್ದು ಒಂದೆಡೆ ಇಟ್ಟು ಕೊಳ್ಳಬೇಕು.
ಸ್ಟೆಪ್ 2: ಒಂದು ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ಬೆಲ್ಲ, ತೆಂಗಿನ ತುರಿ ಮತ್ತು ಏಲಕ್ಕಿ ಪುಡಿ ಹಾಕಿ 10 ನಿಮಿಷ ಚೆನ್ನಾಗಿ ಹುರಿದು ತಣ್ಣಗಾಗಲು ಬಿಡಬೇಕು.
ಸ್ಟೆಪ್ 3: ಈಗ ಕಲೆಸಿಟ್ಟಿಕೊಂಡಿದ್ದ ಮೈದಾ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ವೃತ್ತಾಕಾರದಲ್ಲಿ ತೆಳುವಾಗಿ ಒತ್ತಿಕೊಳ್ಳಬೇಕು.
ಸ್ಟೆಪ್ 4: ಒತ್ತಿಟ್ಟುಕೊಂಡ ಹಿಟ್ಟಿಗೆ ಒಂದೊಂದು ಚಮಚ ಬೆಲ್ಲದ ಮಿಶ್ರಣವನ್ನು ತುಂಬಿ ಅಂಚುಗಳನ್ನು ಒಪ್ಪವಾಗಿ ಮುಚ್ಚಿ ಕಾದಿರುವ ಎಣ್ಣೆಗೆ ಬಿಡಬೇಕು.
ಸ್ಟೆಪ್ 5: ಎಣ್ಣೆಯಲ್ಲಿ ಮೋದಕಗಳು ಚಿನ್ನದ ಬಣ್ಣಕ್ಕೆ ತಿರುಗುತ್ತಿರುವಂತೆ ಅದನ್ನು ಮೇಲೆತ್ತಿ ತಟ್ಟೆಗೆ ಹಾಕಿಕೊಳ್ಳಬೇಕು.

ಈಗ ಈ ಮೋದಕಗಳು ನೈವೇದ್ಯಕ್ಕೆ ತಯಾರಾಗಿವೆ. ನೈವೇದ್ಯದ ನಂತರ ಮೋದಕಗಳನ್ನು ತುಪ್ಪದ ಜೊತೆ ತಿಂದರೆ ಇನ್ನೂ ಚೆಂದ. ಹಬ್ಬದ ದಿನ ಕೇವಲ ಅರ್ಧ ಗಂಟೆ ಅವಧಿಯಲ್ಲಿ ಬೇಗನೆ ಈ ಮೋದಕವನ್ನು ತಯಾರಿಸಬಹುದು. ಕಡುಬನ್ನೂ ಕೂಡ ಇದೇ ರೀತಿ ಮಾಡಬಹುದು. ಆಕಾರ ಮಾತ್ರ ಬೇರೆ ಅಷ್ಟೆ.

English summary

Fried Modak for Ganesh Chaturthi | How to prepare Modaka | ಗಣೇಶ ಚತುರ್ಥಿಗೆ ಕರಿದ ಮೋದಕ | ಮೋದಕ ತಯಾರಿಸುವ ವಿಧಾನ

Ganesh Chaturthi is celebrated this thursday (sep:1). So all special recipes need to be prepared for the pooja. Modakas is a favorite sweet dish of the lord Ganesha and can be made in two ways, steaming and frying. Fried modakas can be preserved long than steamed. See how to do it with this simple procedure.
Story first published: Friday, August 26, 2011, 17:15 [IST]
X
Desktop Bottom Promotion