For Quick Alerts
ALLOW NOTIFICATIONS  
For Daily Alerts

ಗಣಪನಿಗೆ ಬಲು ಇಷ್ಟ ರುಚಿಯಾದ ರವೆ ಲಾಡು

|
Rava Laddoo recipe
ಗಣೇಶನಿಗೆ ಸಿಹಿ ತಿಂಡಿಗಳೆಂದರೆ ತುಂಬಾ ಇಷ್ಟ. ಆದ್ದರಿಂದ ಈ ಬಾರಿ ಗಣೇಶನ ಹಬ್ಬಕ್ಕೆ ಇನ್ನಷ್ಟು ಸಿಹಿತಿಂಡಿಗಳು ಗಣೇಶನ ಮುಂದೆ ನೈವೇದ್ಯಕ್ಕೆ ತಯಾರಾಗಲಿ. ಸಿಹಿತಿಂಡಿಗಳ ಪಟ್ಟಿಯಲ್ಲಿ ಗಣಪನಿಗೆ ಅಚ್ಚುಮೆಚ್ಚಿನ ರವೆ ಉಂಡೆ ಅಥವಾ ರವೆ ಲಾಡು ಇಲ್ಲದಿದ್ದರೆ ವಿಶೇಷವೆಲ್ಲಿದೆ? ರವೆ ಉಂಡೆಯನ್ನು ತಯಾರಿಸುವ ವಿಧಾನ ಇಲ್ಲಿದೆ. ತಿಳಿದುಕೊಂಡು ನೀವೂ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
* 100 ಗ್ರಾಂ ಸಣ್ಣ ರವೆ
* 250 ಮಿಲಿ ಹಾಲು, (ಕಾಯಿಸಿ ಕೆನೆ ತೆಗೆದಿರಬೇಕು)
* 1/4 ಕಪ್ ತುಪ್ಪ
* 1/2 ಕಪ್ ಸಕ್ಕರೆ (ಪುಡಿ ಮಾಡಿರಬೇಕು)
* ಏಲಕ್ಕಿ ಪುಡಿ
* ಒಣದ್ರಾಕ್ಷಿ, ಕೊಬ್ಬರಿ ತುರಿ

ರವೆ ಉಂಡೆ ತಯಾರಿಸುವುದು ಹೇಗೆ?

* ತಳ ಗಟ್ಟಿಯಿರುವ ಬಾಣಲೆಯಲ್ಲಿ ರವೆಯನ್ನು ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಬೇಕು.
* ಇದಕ್ಕೆ ತುಪ್ಪ ಮತ್ತು ಹಾಲು ಬೆರೆಸಿ ಈ ಮಿಶ್ರಣ ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು.
* ಏಲಕ್ಕಿ ಪುಡಿ, ಸಕ್ಕರೆ ಬೆರೆಸಿ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಬೇಕು.
* ನಂತರ ಒಣದ್ರಾಕ್ಷಿ ಮತ್ತು ಕೊಬ್ಬರಿ ತುರಿಯನ್ನು ಈ ಮಿಶ್ರಣಕ್ಕೆ ಬೆರೆಸಿ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಬೇಕು.

ಈಗ ಗಣಪನಿಗೆ ರುಚಿರುಚಿಯಾದ ರವೆ ಉಂಡೆ ರೆಡಿಯಾಗಿದೆ. ಮಾಡಲು ಸುಲಭ ಮತ್ತು ನಾಲಿಗೆಗೆ ಹಿತವೆನಿಸುವ ಈ ರವೆ ಉಂಡೆಯನ್ನು ನೀವೂ ಹಬ್ಬದ ದಿನದಂದು ಮಾಡಿ ಮನೆಯವರ ಮನ ಗೆಲ್ಲಿರಿ!

English summary

Rava Laddoo for Ganesh Chaturthi | Special Rave Unde | ಗಣೇಶ ಚತುರ್ಥಿಗೆ ರವೆ ಲಾಡು ರೆಸಿಪಿ | ವಿಶೇಷ ರೆವೆ ಉಂಡೆ ತಯಾರಿಸುವ ವಿಧಾನ

This Ganesh Chaturthi, try making some simple but different laddoos other than moti choors or boondi laddoos. Take a look to know how to make the delicious rava laddoo recipe.
Story first published: Tuesday, August 30, 2011, 19:48 [IST]
X
Desktop Bottom Promotion