For Quick Alerts
ALLOW NOTIFICATIONS  
For Daily Alerts

ನವರಾತ್ರಿ ಸ್ಪೆಷಲ್-ಹೆಸರುಬೇಳೆ ಪಾಯಸ

|

ನವರಾತ್ರಿ ಹಬ್ಬ ಶುರುವಾಯಿತೆಂದರೆ ಸಿಹಿ ಪದಾರ್ಥಗಳ ಸುಗ್ಗಿಯ ಕಾಲ. ದಿನಾ ಒಂದೊಂದು ಬಗೆಯ ಪಾಯಸ ಮತ್ತು ಇತರ ಸಿಹಿ ತಿನಿಸುಗಳನ್ನು ಮಾಡಲಾಗುವುದು. ಮಕ್ಕಳಿಗಂತೂ ಈ ಸಮಯದಲ್ಲಿ ದಸರಾ ರಜೆ ಸಿಕ್ಕಿರುತ್ತದೆ, ಮನೆಯಲ್ಲೂ ವಿಶೇಷ ಅಡುಗೆಗಳನ್ನು ಮಾಡುತ್ತಾರೆ, ನೆಂಟರಿಷ್ಟರ ಮನೆಗೆ ಹೋಗುವುದು ಅಥವಾ ಮನೆಗೆ ಬಂದ ನೆಂಟರ ಮಕ್ಕಳ ಜೊತೆ ಆಡುತ್ತಾ ಹಾಯಾಗಿ ಕಾಲ ಕಳೆಯುತ್ತಿರುತ್ತಾರೆ.

ಈ ಸಮಯದಲ್ಲಿ ಮನೆಯ ಹೆಂಗಸರಿಗೆ ಸ್ವಲ್ಪ ಕೆಲಸ ಅಧಿಕವೇ ಇರುತ್ತದೆ. ಮನೆಗೆ ಬಂದ ನೆಂಟರನ್ನು ಸುಧಾರಿಸಬೇಕು, ಮಕ್ಕಳಿಗೆ ರಜೆ ಸಿಕ್ಕಿರುವುದರಿಂದ ಅವರನ್ನು ಸುಧಾರಿಸುವಷ್ಟರಲ್ಲಿ ಸಾಕು, ಸಾಕಾಗಿ ಹೋಗಿರುತ್ತದೆ. ಮನೆಗೆ ಬಂದ ನೆಂಟರಿಗೆ ಅಥಿತಿ ಸತ್ಕಾರ ಮಾಡಲು, ಮಕ್ಕಳನ್ನು ಸಂತೋಷಗೊಳಿಸಲು ಸುಲಭದಲ್ಲಿ ಮಾಡಬಹುದಾದ ಸಿಹಿ ಪದಾರ್ಥವೆಂದರೆ ಪಾಯಸ. ಆದ್ದರಿಂದಲೇ ನವರಾತ್ರಿಯಲ್ಲಿ ಪಾಯಸ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ ಏನೋ? ನವರಾತ್ರಿಯ ಮೊದಲ ದಿನವಾದ ಇಂದು ಮಾಡಲು ಸುಲಭವಾದ ಹೆಸರು ಬೇಳೆಯ ರೆಸಿಪಿ ನೀಡಿದ್ದೇವೆ ನೋಡಿ:

Moong Dal Payasa For Navaratri

ಬೇಕಾಗುವ ಸಾಮಾಗ್ರಿಗಳು
1 ಕಪ್ ಹೆಸರುಬೇಳೆ
3 ಕಪ್ ಹಾಲು ಅಥವಾ ತೆಂಗಿನ ಹಾಲು
1 ಕಪ್ ಸಕ್ಕರೆ
2 ಏಲಕ್ಕಿ (ಬೀಜಗಳನ್ನುಪುಡಿ ಮಾಡಿ ಹಾಕಿ)
ಸ್ವಲ್ಪ ಕೇಸರಿ( ಬೇಕಿದ್ದರೆ ಹಾಕಬಹುದು)
ಗೋಡಂಬಿ ಮತ್ತು ಒಣ ದ್ರಾಕ್ಷಿ ( ನಿಮಗೆ ಎಷ್ಟು ಬೇಕೆನಿಸುತ್ತದೆ ಅಷ್ಟು ಹಾಕಿ)
1 ಚಮಚ ತುಪ್ಪ
ಚಿಟಿಕೆಯಷ್ಟು ಉಪ್ಪು

ಮಾಡುವ ವಿಧಾನ:
* ಹಾಲನ್ನು ಕುದಿಸಿ ಇಡಿ. ತೆಂಗಿನ ಹಾಲು ಆದರೆ ಕುದಿಸುವ ಅವಶ್ಯಕತೆ ಇಲ್ಲ.
* ಹೆಸರುಬೇಳೆಯನ್ನು ತೊಳೆದು ಅದಕ್ಕೆ 3 ಕಪ್ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವವರೆಗೆ ಬೇಯಿಸಿ.
* 5 ನಿಮಿಷದ ಬಳಿಕ ನಂತರ ಕುಕ್ಕರ್ ನ ಮುಚ್ಚಳ ತೆಗೆದು, ನಂತರ ಕುಕ್ಕರ್ ಅನ್ನು ಮತ್ತೆ ಉರಿ ಮೇಲೆ ಇಟ್ಟು ಸಕ್ಕರೆ ಹಾಕಿ, ಸಕ್ಕರೆ ಸಂಪೂರ್ಣ ಕರಗುವವರೆಗೆ ಸೌಟ್ ನಿಂದ ತಿರುಗಿಸಿ, ಚಿಟಿಕೆಯಷ್ಟು ಉಪ್ಪು ಸೇರಿಸಿ.
* ಈಗ ಹಾಲು ಅಥವಾ ತೆಂಗಿನ ಹಾಲನ್ನು ಹಾಕಿ 5 ನಿಮಿಷ ಕುದಿಸಿ, ನಂತರ ಏಲಕ್ಕಿ ಮತ್ತು ಕೇಸರಿ ಹಾಕಿ 3 ನಿಮಿಷ ಬಿಸಿ ಮಾಡಿ ಉರಿಯಿಂದ ಇಳಿಸಿ.
* ಈಗ ಪ್ಯಾನ್ ಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಹಾಕಿ 2-3 ನಿಮಿಷ ಹುರಿದು ನಂತರ ಪಾಯಸಕ್ಕೆ ಹಾಕಿ.
* ರೆಡಿಯಾದ ಪಾಯಸವನ್ನು ಬಿಸಿ-ಬಿಸಿ ಇರುವಾಗಲೇ ಸರ್ವ್ ಮಾಡಿ.

English summary

Moong Dal Payasa For Navaratri

Payasa is one of the famous recipe will prepare during Navaratri. Each day will prepare one-one variety of payasam. Today is first day, if you are seeking for easiest payasa recipe to prepare,have a look at this moong dal payasa recipe.
X
Desktop Bottom Promotion