ಅನಾನಸ್ ಕೇಕ್-ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

Posted By: Jaya subramanya
Subscribe to Boldsky

ಇನ್ನೇನು ಕ್ರಿಸ್‌ಮಸ್ ಹಬ್ಬಕ್ಕೆ ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇದೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಈಗಾಗಲೇ ಪೂರ್ವ ತಯಾರಿ ನಡೆದೇ ಇರುತ್ತದೆ. ದೇವ ಪುತ್ರ ಏಸುವಿನ ಜನನ ದಿನವನ್ನು ತುಸು ವಿಜೃಂಭಣೆಯಿಂದಲೇ ಆಚರಿಸುವ ಹುಮ್ಮಸ್ಸು ಕ್ರಿಶ್ಚಿಯನ್ ಬಾಂಧವರಲ್ಲಿರುತ್ತದೆ. ಕೇವಲ ಕ್ರಿಶ್ಚಿಯನ್ನರು ಮಾತ್ರವಲ್ಲದೆ ಹಿಂದುಗಳು ಮತ್ತು ಮುಸ್ಲೀಮರು ಕೂಡ ಹಬ್ಬವನ್ನು ಅವರೊಂದಿಗೆ ಆಚರಿಸುತ್ತಾರೆ. 

 

ಹೀಗೆ ಕ್ರಿಸ್‌ಮಸ್ ಎಂಬುದು ಪ್ರತ್ಯೇಕ ಧರ್ಮದ ಹಬ್ಬ ಮಾತ್ರವಲ್ಲದೆ ಇಡಿಯ ವಿಶ್ವ ಹಬ್ಬವಾಗಿದೆ. ಕ್ರಿಸ್‌ಮಸ್‌ನಲ್ಲಿ ಕ್ರಿಸ್‌ಮಸ್ ಮರ (ಕ್ರಿಸ್‌ಮಸ್ ಟ್ರೀ) ಅದರ ಅಲಂಕಾರ, ಸಿಹಿ ತಿನಿಸು, ಭೂರೀ ಭೋಜನ, ಪೇಯಗಳು ಇದರೊಂದಿಗೆ ಕೇಕ್‌ಗಳಿಗೂ ತಮ್ಮದೇ ಸ್ಥಾನವಿದೆ. ಕೇಕ್ ಇಲ್ಲದೆ ಕ್ರಿಸ್‌ಮಸ್ ತಯಾರಿ ಅಸಂಪೂರ್ಣವಾಗಿರುತ್ತದೆ. ಕ್ರಿಸ್ಮಸ್ ಹಬ್ಬದ ವಿಶೇಷ: ಮೊಟ್ಟೆ ರಹಿತ ರುಚಿಕರ ಕೇಕ್ ರೆಸಿಪಿ

ಬೇಕರಿಯಲ್ಲಿ ಕೇಕ್ ದೊರೆಯುತ್ತಿದ್ದರೂ ನೀವೇ ಮಾಡಿದ ಕೇಕ್ ಎಂದರೆ ಅದರ ಹಿರಿಮೆಯೇ ಬೇರೆ. ಅದಕ್ಕೆ ಸಿಗುವ ಹೊಗಳಿಕೆಯನ್ನು ನೀವು ಖಂಡಿತ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ನಮಗೆ ತಿಳಿದಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೇಕ್ ತಯಾರಿ ಟಿಪ್ಸ್‌ಗಳನ್ನು ಅರಿತುಕೊಂಡು ಸ್ವಾದಿಷ್ಟ ಕೇಕ್ ತಯಾರಿಯನ್ನು ಮಾಡಿ. ಕ್ರಿಸ್ಮಸ್ ಗೆ ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್   

 

 ಪ್ರಮಾಣ - 6 ತುಂಡುಗಳು

 ಸಿದ್ಧತಾ ಸಮಯ - 20 ನಿಮಿಷಗಳು

 ಅಡುಗೆಗೆ ಬೇಕಾದ ಸಮಯ - 10-15 ನಿಮಿಷಗಳು

ಸಾಮಾಗ್ರಿಗಳು

1. ಅನಾನಸ್ - 1/2 ಕಪ್ (ಕತ್ತರಿಸಿದ್ದು)

2. ಸಿಹಿ ಬಿಸ್ಕತ್ತು - 15-16

3. ಕಿತ್ತಳೆ ರಸ - 1/2 ಕಪ್

4. ಕೆನೆ ಹಾಲಿನ ಕ್ರೀಮ್ (ವೈಪ್ಡ್ ಕ್ರೀಮ್) - 2 ಕಪ್ಸ್

5. ಬಾದಾಮ್ ಚಿಕ್ಕಿ - 1/3 ಕಪ್ (ಸಣ್ಣಗೆ ಜಜ್ಜಿದ)

ಈ ಕೇಕ್ ತಯಾರಿಸಲು ನಿಮಗೆ ಕಡಿಮೆ ಸಾಮಾಗ್ರಿಗಳು ಸಾಕು ಮತ್ತು ಇದನ್ನು ತಯಾರಿಸುವುದೂ ಹೆಚ್ಚು ಸುಲಭವಾಗಿದೆ. ಹಾಗಿದ್ದರೆ ಕೆಳಗಿನ ಕೇಕ್ ತಯಾರಿ ವಿಧಾನಗಳನ್ನು ಅರಿತುಕೊಳ್ಳಿ. 

1. ಬ್ಲೆಂಡರ್‌ನಲ್ಲಿ ಕೆನೆ ಹಾಲಿನ ಕ್ರೀಮ್ ಅನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸಿಹಿ ಬಿಸ್ಕತ್ತುಗಳನ್ನು ಕಿತ್ತಳೆ ರಸದಲ್ಲಿ ಮುಳುಗಿಸಿ ಮತ್ತು ಅದನ್ನು ಚಪ್ಪಟೆ ತಟ್ಟೆಯಲ್ಲಿರಿಸಿ. ಬಿಸ್ಕತ್ತನ್ನು ಹೆಚ್ಚು ಸಮಯ ರಸಲ್ಲಿ ಮುಳುಗಿಸಬೇಡಿ. ಸುಮ್ಮನೆ ಮುಳುಗಿಸಿ ತೆಗೆಯಿರಿ.             ಆಹಾ, ಬ್ಲ್ಯಾಕ್ ಫಾರೆಸ್ಟ್ ಕೇಕ್! ಬಾಯಲ್ಲಿ ನೀರೂರುತ್ತಿದೆ! 

2.ಲೇಯರ್ ಸಿದ್ಧವಾಗಿದೆ: ದಪ್ಪನಾಗಿ ಬೀಟ್ ಮಾಡಿರುವ ಕ್ರೀಮ್‌ನೊಂದಿಗೆ ಲೇಯರ್ ಅನ್ನು ಕವರ್ ಮಾಡಿ. ಕತ್ತರಿಸಿದ ಅನಾನಸ್ ಅನ್ನು ಅದರ ಮೇಲೆ ಹರಡಿ ಪುನಃ ತೆಳುವಾಗಿ ಕ್ರೀಮ್ ಹರಡಿಸಿ.

3. ಈಗ ಬಿಸ್ಕತ್ತಿನೊಂದಿಗೆ ಪುನಃ ಕೇಕ್ ಅನ್ನು ಲೇಯರ್ ಮಾಡಿ. ಇದಕ್ಕಾಗಿ ಪುನಃ ಕಿತ್ತಳೆ ರಸದಲ್ಲಿ ಬಿಸ್ಕತ್ತನ್ನು ಮುಳುಗಿಸಿ ತೆಗೆಯಿರಿ.

4.ಲೇಯರಿಂಗ್ ಸಂಪೂರ್ಣಗೊಂಡ ನಂತರ, ದಪ್ಪನೆಯ ಕ್ರೀಮ್‌ನಿಂದ ಕೇಕ್ ಕವರ್ ಮಾಡಿ. ಪ್ರತಿಯೊಂದು ಭಾಗವನ್ನೂ ಕವರ್ ಮಾಡಿ. ಈಗ ಹುಡಿ ಮಾಡಿದ ಚಿಕ್ಕಿಯನ್ನು ಮೇಲೆ ಹರಡಿ.

5. ಕೇಕ್ ಬದಿಗೆ ಅನಾನಸ್ ತುಂಡನ್ನಿಟ್ಟು ಅಲಂಕರಿಸಿ ಮತ್ತು ಕ್ರಂಚಿ ಅನಾನಸ್ ಕೇಕ್ ಸವಿಯಲು ಸಿದ್ಧವಾಗಿದೆ.

English summary

Crunchy Pineapple Cake For Christmas

You can get different types of yummy cakes at cake shops, but what you make at home is completely different from the market made products. It comes with love, affection, joy and happiness and these are the basic meanings of Christmas. So, it is time to concentrate on the ingredients and procedure of making a crunchy pineapple cake at home.