For Quick Alerts
ALLOW NOTIFICATIONS  
For Daily Alerts

ಆಹಾ, ಬ್ಲ್ಯಾಕ್ ಫಾರೆಸ್ಟ್ ಕೇಕ್! ಬಾಯಲ್ಲಿ ನೀರೂರುತ್ತಿದೆ!

By Jaya Subramanya
|

ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ, ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಒಂದೆಡೆಯಾದರೆ, ಕ್ರಿಸ್‌ಮಸ್ ಹಬ್ಬ ಆಚರಿಸುವ ತವಕ ಖುಷಿ ಇನ್ನೊಂದೆಡೆ.

ಕ್ರಿಸ್‌ಮಸ್ ಮತ್ತು ಹೊಸವರ್ಷವನ್ನು ಹೇಗೆ ಆಚರಣೆ ಮಾಡಬೇಕು ಎಂಬ ಪಟ್ಟಿ ಕೂಡ ತಯಾರಾಗುತ್ತಿದ್ದು ಅಂತೂ ಜನರು ಒಂದಿನಿತೂ ಮಿಸ್ ಮಾಡಿಕೊಳ್ಳದೆ ಸಂಭ್ರಮವನ್ನು ಆಚರಣೆ ಮಾಡುವ ಉತ್ಸಾಹದಲ್ಲಿದ್ದಾರೆ.

Black Forest Cake Recipe

ಕ್ರಿಸ್‌ಮಸ್ ಎಂದಾಗ ನೆನಪಾಗುವುದೇ ಕೇಕ್ ತಯಾರಿಯಾಗಿದೆ. ವೈನ್, ಮಾಂಸದ ಅಡುಗೆಗಳು ಹಬ್ಬದ ಕಳೆಯನ್ನು ಹೆಚ್ಚಿಸಿದರೂ ಕೇಕ್ ಇಲ್ಲವೆಂದಾದಲ್ಲಿ ಕ್ರಿಸ್‌ಮಸ್ ಸಪ್ಪೆಯಾಗಿಬಿಡುತ್ತದೆ. ಬೇಕರಿಯಲ್ಲಿ ತರೇಹವಾರಿ ಕೇಕ್‌ಗಳು ಈಗಲೇ ದೊರೆಯಲ್ಪಡುತ್ತಿದ್ದು ಹೊಸ ವರ್ಷ ಮತ್ತು ಕ್ರಿಸ್‌ಮಸ್ ಸಮಯದಲ್ಲಿ ಕೇಕ್‌ಗಾಗಿ ನೂಕುನುಗ್ಗಲು ನಡೆಯುತ್ತದೆ. ಕ್ರಿಸ್ಮಸ್ ವಿಶೇಷ: ಸೇಬು-ಜೇನಿನ ಕೇಕ್ ರೆಸಿಪಿ

ಆದರೆ ಈ ಬಾರಿಯ ಕ್ರಿಸ್‌ಮಸ್‌ಗಾಗಿ ನಿಮ್ಮ ಕೈಯ್ಯಾರೆ ಮಾಡಿದ ಕೇಕ್‌ನ ಸವಿಯನ್ನು ನೋಡಿದರೆ ನಿಮ್ಮ ಖುಷಿ ಇಮ್ಮಡಿಯಾಗುವುದು ಖಂಡಿತವಲ್ಲವೇ? ಅದೂ ಕೂಡ ಬ್ಲ್ಯಾಕ್ ಫಾರೆಸ್ಟ್ ಕೇಕ್ ರೆಸಿಪಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.

ಬ್ಲ್ಯಾಕ್ ಫಾರೆಸ್ಟ್ ಕೇಕ್ ಅನ್ನು ಅತಿ ಸರಳವಾಗಿ ಮನೆಯಲ್ಲಿಯೇ ತಯಾರಿಸಬಹುದು ಎಂಬುದಕ್ಕೆ ನಾವು ವಿಶ್ವಾಸವನ್ನು ನೀಡುತ್ತಿದ್ದು, ಇದರ ತಯಾರಿ ವಿಧಾನವನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದೇವೆ. ಬನ್ನಿ ಹಾಗಿದ್ದರೆ ಕೇಕ್ ತಯಾರಿ ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಕ್ರಿಸ್ಮಸ್ ಹಬ್ಬಕ್ಕೆ ಸಾಥ್ ನೀಡುವ ಕ್ಯಾಂಡಿ ಕೇನ್ ರೆಸಿಪಿ

ಪ್ರಮಾಣ - 6 ತುಂಡುಗಳು
*ಸಿದ್ಧತಾ ಸಮಯ - 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 30 ನಿಮಿಷಗಳು

ಸಾಮಾಗ್ರಿಗಳು
ಕೇಕ್‌ಗಾಗಿ
*1. ಚಾಕಲೆಟ್ ಕೇಕ್ - 1
*2. ವೈಪ್ಡ್ ಕ್ರೀಮ್ - 4 ಕಪ್ಸ್ (ಬೀಟನ್ಡ್)
*3.ಕ್ಯಾನ್ಡ್ ಚೆರ್ರಿಗಳು - 16 (ಅರ್ಧಕ್ಕೆ ತುಂಡರಿಸಿದ್ದು)

ಸಕ್ಕರೆ ಸಿರಪ್
*4. ಸಕ್ಕರೆ - 1/2 ಕಪ್
*5. ನೀರು - 3/4 ಕಪ್

ಅಲಂಕಾರಕ್ಕಾಗಿ
*6. ಚಾಕಲೇಟ್ ಕರ್ಲ್ಸ್ - 1 1/4 ಕಪ್
*7. ಕ್ಯಾನ್ಡ್ ಚೆರ್ರಿ - 10 (ಸಂಪೂರ್ಣವಾಗಿ) ಕ್ರಿಸ್ಮಸ್ ಗೆ ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್

ಮಾಡುವ ವಿಧಾನ:
1. ಚಾಕಲೇಟ್ ಕೇಕ್ ಖರೀದಿಸಿ. ಮೊಟ್ಟೆ ರಹಿತ ಕೇಕ್ ಕೂಡ ದೊರೆಯುತ್ತದೆ. ಮೂರು ಪದರಗಳಲ್ಲಿ ಇದನ್ನು ತುಂಡುಮಾಡಿ. ಈಗ, ಸಕ್ಕರೆ ಸಿರಪ್ ಅನ್ನು ತಯಾರಿಸಿಕೊಂಡು ಅದರಲ್ಲಿ ಕೇಕ್‌ನ್ನಿರಿಸಿ. ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರು ಮತ್ತು ಸಕ್ಕರೆಯನ್ನು ಹಾಕಿ. ಸಕ್ಕರೆಯನ್ನು ನಿರಂತರವಾಗಿ ಕರಗಿಸುತ್ತಿರಿ. ನೀರಲ್ಲಿ ಸಂಪೂರ್ಣವಾಗಿ ಇದು ಬೆರೆತುಕೊಳ್ಳಲಿ.

2. ಫ್ಲೇವರ್ ಅನ್ನು ಸೇರಿಸಲು, ಬ್ರಾಂದಿ, ರಮ್ ಅನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಚೆನ್ನಾಗಿ ಕುದಿದ ನಂತರ ಸ್ಟವ್ ಆಫ್ ಮಾಡಿ. ಸಕ್ಕರೆ ದ್ರಾವಣ ತಣ್ಣಗಾಗಲಿ. ಈಗ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ವೈಪ್ಡ್ ಕ್ರೀಮ್ ಅನ್ನು ಬೀಟ್ ಮಾಡಿ. ಇದು ನಯವಾಗಿ ನೊರೆಗೂಡಿದ ರೂಪವನ್ನು ಪಡೆದುಕೊಳ್ಳಲಿ.

3.ಕೇಕ್ ಸ್ಟ್ಯಾಂಡ್ ಅನ್ನು ತೆಗೆದುಕೊಳ್ಳಿ ಮತ್ತು ಒಂದು ತುಂಡು ಕೇಕ್ ಪದರವನ್ನು ಇರಿಸಿ. ಇದರ ಮೇಲೆ ಸಕ್ಕರೆ ಸಿರಪ್ ಅನ್ನು ಹಾಕಿ ಮತ್ತು ವೈಪ್ಡ್ ಕ್ರೀಮ್ ಅನ್ನು ಸವರಿ.

4. ಕೇಕ್ ಪದರಗಳ ಮೇಲೆ ಕ್ರೀಮ್ ಅನ್ನು ದಪ್ಪವಾಗಿ ಸುತ್ತಲೂ ಹರಡಿಸಿ. ಕೇಕ್ ಪದರದ ಮೇಲೆ ಚೆರ್ರಿಗಳನ್ನು ಇರಿಸಿ. ಪೂರ್ಣ ಚೆರ್ರಿಗಳು ಅಥವಾ ಕತ್ತರಿಸಿದ ರೂಪದಲ್ಲಿ ಕೂಡ ಇದನ್ನು ಇರಿಸಬಹುದಾಗಿದೆ.

5. ಈಗ ಎರಡನೆಯ ಪದರವನ್ನು ಇರಿಸಿ ಮೇಲೆ ತಿಳಿಸಿದ ವಿಧಾನವನ್ನು ಅನುಸರಿಸಿ. ಮೂರನೆಯ ಪದರ ಮತ್ತು ಮೇಲಿನ ಪದರಕ್ಕೂ ಇದೇ ವಿಧಾನವನ್ನು ಅನುಸರಿಸಿ. ಸಂಪೂರ್ಣ ಕೇಕ್ ಅನ್ನು ಕ್ರೀಮ್‌ನೊಂದಿಗೆ ಕವರ್ ಮಾಡಿ ಮತ್ತು ಹಾಗೆಯೇ ಬಿಡಿ. ಚಾಕಲೇಟ್ ಬಾರ್‌ನಿಂದ ಚಾಕಲೇಟ್ ಕರ್ಲ್‌ಗಳನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಚೆರ್ರಿಗಳಿಂದ ಕೇಕ್ ಅನ್ನು ಅಲಂಕರಿಸಿ.

6.ಕೇಕ್ ಪಕ್ಕದಲ್ಲಿ ಚಾಕಲೇಟ್ ಕರ್ಲ್ಸ್‌ಗಳನ್ನು ಇರಿಸಲು ಮರೆಯದಿರಿ. ಮನೆಯಲ್ಲಿಯೇ ತಯಾರಿಸಿದ ಬ್ಲ್ಯಾಕ್ ಫಾರೆಸ್ಟ್ ಕೇಕ್ ಸವಿಯಲು ಸಿದ್ಧವಾಗಿದೆ.

7. ಕೇಕ್ ಅನ್ನು ತುಂಡುಗಳನ್ನಾಗಿ ಮಾಡಿ ಮತ್ತು ನಿಮ್ಮ ಅತಿಥಿಗಳಿಗೆ ಉಣಬಡಿಸಿ.

English summary

Mouth-watering Black Forest Cake Recipe

Christmas is near and this is the time of cakes, pastries and cookies. Black forest cake is really yummy to welcome Santa Clause on Christmas. This cake looks so adorable and tastes great too. If you want to make your kids super happy on his/her birthday, you can bake this black forest cake at home. Here are the ingredients and the recipe of homemade black forest cake.
X
Desktop Bottom Promotion