For Quick Alerts
ALLOW NOTIFICATIONS  
For Daily Alerts

ಸುಲಭದಲ್ಲಿ ಮಾಡಬಹುದು ಈ ಅವಲಕ್ಕಿ ಪಾಯಸ

|

ಅವಲಕ್ಕಿ ಪಾಯಸವನ್ನು ಉಳಿದೆಲ್ಲಾ ಪಾಯಸಕ್ಕಿಂತ ಸುಲಭವಾಗಿ ತಯಾರಿಸಬಹುದು. ಈ ಭಾರಿಯ ಹಬ್ಬಕ್ಕೆ ನಿಮಗೆ ಅಡುಗೆ ಸರಿಯಾಗಿ ಬರದಿದ್ದರೂ ಏನಾದರೂ ಅಡುಗೆ ಮಾಡಬೇಕು, ನಾನು ಮಾಡಿದ ಅಡುಗೆ ಮನೆಮಂದಿಗೆಲ್ಲಾ ಇಷ್ಟವಾಗಬೇಕೆಂದು ಬಯಸುವುದಾದರೆ ಈ ಅವಲಕ್ಕಿ ಪಾಯಸ ಟ್ರೈ ಮಾಡಬಹುದು.

ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Aval Payasa Recip

ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕಪ್ ಅವಲಕ್ಕಿ(ಕೆಂಪು ಬಣ್ಣದ ಅವಲಕ್ಕಿ)
* ಒಂದು ಚಮಚ ತುಪ್ಪ
* 3 ಕಪ್ ಹಾಲು
* ಅರ್ಧ ಕಪ್ ಸಕ್ಕರೆ
* ಅರ್ಧ ಚಮಚ ಏಲಕ್ಕಿ

ತಯಾರಿಸುವ ವಿಧಾನ:

* ಬಾಣಲೆಯಲ್ಲಿ ಒಂದು ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಅವಲಕ್ಕಿ ಸ್ವಲ್ಪ ಹೊತ್ತು ಹುರಿಯಿರಿ.

* ನಂತರ ಅದನ್ನು ಒಂದು ಪಾತ್ರೆಗೆ ಹಾಕಿ.

* ನಂತರ 3 ಕಪ್ ಹಾಲನ್ನು ಪಾತ್ರೆಯಲ್ಲಿ ಹಾಕಿ ಕಾಯಿಸಬೇಕು. ನಂತರ ಗ್ಯಾಸ್ ಉರಿಯನ್ನು ಕಡಿಮೆ ಮಾಡಿ, ಅದರಲ್ಲಿ ಅವಲಕ್ಕಿಯನ್ನು ಮೆಲ್ಲನೆ ಉದುರಿಸಿ, ನಂತರ ಸೌಟ್ ನಿಂದ ಆಡಿಸಿ. ನಂತರ ಸಕ್ಕರೆ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಬೇಕು. ಪ್ರತಿ 5 ನಿಮಿಷಕ್ಕೆ ಸೌಟ್ ನಿಂದ ತಿರುಗಿಸುತ್ತಾ ಇರಬೇಕು.

* ಈ ರೀತಿ 15-20 ನಿಮಿಷ ಮಾಡಿದರೆ ರುಚಿಕರವಾದ ಅವಲಕ್ಕಿ ಪಾಯಸ ರೆಡಿ.

ದೀಪಾವಳಿ ಹಬ್ಬದಂದು ಭೂರಿ ಭೋಜನಕ್ಕೆ 10 ರೆಸಿಪಿಗೆ ಕ್ಲಿಕ್ ಮಾಡಿ.

English summary

Aval Payasa Recipe | Variety Of Payasa Recipe | ಅವಲಕ್ಕಿ ಪಾಯಸ ರೆಸಿಪಿ | ಅನೇಕ ಬಗೆಯ ಪಾಯಸದ ರೆಸಿಪಿ

Aval payasa very easy to prepare. If you don't much about but you want to cook something special then you can cook this payasa.
X
Desktop Bottom Promotion