For Quick Alerts
ALLOW NOTIFICATIONS  
For Daily Alerts

ಪಾಕಶಾಲೆಯಲ್ಲಿ ಸಿಹಿ ಸಿಹಿ ಖರ್ಜೂರದ ಹೊಸ ಪಾಯಸ

By Super
|

ಬೇಕಾಗುವ ಪದಾರ್ಥ : ಒಂದು ಸಣ್ಣ ತೆಂಗಿನಕಾಯಿಯ ಹಾಲು, 300 ಗ್ರಾಂ ಖರ್ಜೂರ, ಬೆಲ್ಲ 100ಗ್ರಾಂನಷ್ಟು. ಏಲಕ್ಕಿ ಪುಡಿ, ಗೋಡಂಬಿ ಚೂರುಗಳು ಮತ್ತು ಅರ್ಧ ಚಮಚ ಉಪ್ಪು.

ಮಾಡುವ ವಿಧಾನ : ತೆಂಗಿನಕಾಯಿ ತುರಿದು ಮಿಕ್ಸಿಗೆ ಹಾಕಿ ಹಾಲು ಮಾಡಿ ಹಿಂಡಿಟ್ಟುಕೊಳ್ಳಿ. ಬೀಜ ತೆಗೆದು ತೊಳೆದ ಖರ್ಜೂರವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಹಾಲು ತಯಾರಿಸಿಟ್ಟುಕೊಳ್ಳಿ. ತೆಂಗಿನಕಾಯಿಯ ಹಾಲನ್ನು ಅರ್ಧದಷ್ಟು ಬೇರೆ ಇಟ್ಟುಕೊಂಡು ಉಳಿದದ್ದನ್ನು ಖರ್ಜೂರದ ಹಾಲಿಗೆ ಬೆರೆಸಿ ಪಾಯಸದ ಹದಕ್ಕೆ ಮಾಡಿಕೊಳ್ಳಿರಿ.

ಈ ಮಿಶ್ರಣವನ್ನು ನಾನ್ ಸ್ಟಿಕ್ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಡಿ. ಹಾಲು ಬೆಚ್ಚಗಾಗುತ್ತ ಬಂದಹಾಗೆ ಬೆಲ್ಲದ ಪುಡಿ, ಉಪ್ಪು, ಏಲಕ್ಕಿ ಪುಡಿ ಎಲ್ಲಾ ಬೆರೆಸಿ. ಚೆನ್ನಾಗಿ ಕುದಿಯಲಿ. ಇಳಿಸುವ ಮುಂಚೆ ತೆಗೆದು ಇಟ್ಟುಕೊಂಡಿದ್ದ ಕಾಯಿ ಹಾಲು ಮತ್ತು ಗೋಡಂಬಿ ಚೂರು ಬೆರೆಸಿ ಪಾತ್ರೆ ಇಳಿಸಿ.

ಈ ಪಾಯಸದ ವಿಶೇಷವೆಂದರೆ ವನಸ್ಪತಿ ಬಳಸಿಲ್ಲ. ಆಬಾಲ ವೃದ್ಧರಿಗೆ ಸಹ್ಯವಾಗುವ ಈ ಪಾಯಸವನ್ನು ಬೇಕೆನಿಸಿದಾಗ ಮಾಡಿ ಸವಿಯಿರಿ.

(ದಟ್ಸ್ ಕನ್ನಡ ಅಡುಗೆ ಶಾಲೆ)

X
Desktop Bottom Promotion