For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಹೊಸ ಆಲೂಗಡ್ಡೆ ಪಕೋರಾ ರೆಸಿಪಿ

|

ವಸಂತ ಋತುವಿನ ಆಗಮನದಿಂದ ಮಾರುಕಟ್ಟೆಯಲ್ಲಿ ತರಕಾರಿಗಳು ಮತ್ತು ಹಣ್ಣುಗಳದ್ದೇ ಕಾರುಬಾರು. ಉದಾಹರಣೆಗೆ ಮಾರುಕಟ್ಟೆಯಲ್ಲಿ ತಾಜಾ ಹಾಗೂ ರುಚಿಕರವಾಗಿರುವ ಹೊಸದಾದ ಆಲೂಗಡ್ಡೆ ಧಾರಾಳವಾಗಿ ದೊರೆಯುತ್ತಿದೆ. ಇಂತಹ ಋತುವಿನಲ್ಲಿ ಹೊಸ ಆಲೂಗಡ್ಡೆ ತಾಜಾಭರಿತವಾಗಿದ್ದು, ಆರೋಗ್ಯಕ್ಕೆ ಕೂಡ ಲಾಭದಾಯಕವಾಗಿದೆ.

ಭಾರತೀಯ ಶೈಲಿಯಲ್ಲಿ ಮಾಡಲಾಗುವ ಹಲವು ರೀತಿಯ ಸ್ವಾದಿಷ್ಟಭರಿತವಾಗಿರುವ ಆಲೂಗಡ್ಡೆ ರೆಸಿಪಿಯನ್ನು ನಾವು ನೋಡಬಹುದು. ನೀವು ಹೊಸದಾದ ಆಲೂಗಡ್ಡೆಯಿಂದ ಸೈಡ್‌ ಡಿಶ್ ಅನ್ನು ತಯಾರಿಸಬಹುದು ಅಥವಾ ನಾಲಿಗೆಯ ರುಚಿ ತಣಿಸುವ ಗರಿಗರಿಯಾದ ಸ್ನ್ಯಾಕ್ಸ್ ಅನ್ನು ಕೂಡ ತಯಾರಿಸಬಹುದು.

New Potatoes Pakora Recipe

ಚಳಿಗಾಲದ ಖತುವಿನಲ್ಲಿ ಹೊಸ ಆಲೂಗಡ್ಡೆಯಿಂದ ಮಾಡಲಾಗುವ ಪಕೋರಾಸ್, ಸ್ವಾದಿಷ್ಟ ಹಾಗೂ ರುಚಿಕರದಿಂದ ಕೂಡಿದ್ದು, ಸಂಜೆಯ ಸ್ನ್ಯಾಕ್ಸ್‌ಗೆ ನಿಮ್ಮ ನಾಲಿಗೆಯ ಹಸಿವನ್ನು ತಣಿಸುವಲ್ಲಿ ಎರಡು ಮಾತಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪನ್ನೀರ್ ಸ್ಯಾಂಡ್ ವಿಚ್

ಹೊಸ ಆಲೂಗಡ್ಡೆಯಿಂದ ಮಾಡಲಾಗುವ ಪಕೋರಾಸ್ ಅನ್ನು ಸುಲಭವಾಗಿ ತಯಾರಿಸಬಹುದು. ಹಾಗಾಗಿ ಬೋಲ್ಟ್ ಸ್ಕೈ ನಿಮ್ಮ ಸಂಜೆಯ ಸ್ಮ್ಯಾಕ್ಸ್ ಅನ್ನು ಇನ್ನಷ್ಟು ರುಚಿಕರವಾಗಿ ಮಾಡಲು ನಿಮಗೆ ಸಹಾಯ ಮಾಡಲಿದೆ. ಹಾಗಾದರೆ ಇನ್ನೇಕೆ ತಡ? ಬನ್ನಿ ರುಚಿಕೆವಾಗಿರುವ ಹೊಸ ಆಲೂಗಡ್ಡೆಯಿಂದ ಮಾಡಲಾಗುವ ಪಕೋರಾಸ್ ಅನ್ನು ಪ್ರಯತ್ನಿಸಿ.

ತಯಾರಿಸಲು ಬೇಕಾಗುವ ಸಮಯ - 10 ನಿಮಿಷಗಳು
ಅಡುಗೆ ಮಾಡಲು ಬೇಕಾಗುವ ಸಮಯ: 25 ನಿಮಿಷಗಳು

ಬೇಕಾಗುವ ಪದಾರ್ಥಗಳು:

ಹೊಸ ಆಲೂಗಡ್ಡೆ- 4-5

ಕಡಲೆ ಹಿಟ್ಟು - 1 ಕಪ್

ಓಮದ ಬೀಜಗಳು/ಅಜ್‌ವೈನ್- 1 ಟೀ ಸ್ಪೂನ್

ಮೆಣಸಿನಪುಡಿ- 1 ಟೀ ಸ್ಪೂನ್

ಕಪ್ಪು ಎಳ್ಳು ಬೀಜಗಳು - 1 ಟೀ ಸ್ಪೂನ್

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ - 1 ಕಪ್ (ಫ್ರೈ ಮಾಡಲು)

ನೀರು - 1/2 ಕಪ್

ಬೋಲ್ಟ್ ಸ್ಕೈ ಸ್ಪೆಶಲ್ ಸಾಮಾಗ್ರಿ!

ಮೆಂತ್ಯ ಸೊಪ್ಪು 1 ಟೇಸ್ಪೂನ್ (ಕತ್ತರಿಸಿದ್ದು)

ಮಾಡುವ ವಿಧಾನ:

ಹೊಸ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಉದ್ದಕ್ಕೆ ಕತ್ತರಿಸಿಕೊಳ್ಳಿ ತದನಂತರ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.

ಓಮದ ಬೀಜಗಳು, ಮೆಣಸಿನಪುಡಿ, ಕಪ್ಪು ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಮತ್ತು ಮೆಂತ್ಯವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಕೂಡಲೇ ಒಂದು ಆಲೂಗಡ್ಡೆ ತುಂಡನ್ನು ತೆಗೆದುಕೊಂಡು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿರಿ.

ಕೂಡಲೇ ಅದನ್ನು ಎಣ್ಣೆಯಿರುವ ಪ್ಯಾನ್‌ಗೆ ಹಾಕಿ. ಸಣ್ಣ ಉರಿಯಲ್ಲಿ ಪಕೋರಾ ಚಿನ್ನ ಮಿಶ್ರಿತ ಕಂದು ಬಣ್ಣಕ್ಕೆ ಬರುವಂತೆ ಗರಿಗರಿಯಾಗಿ ಹುರಿಯಿರಿ.

ಉಳಿದ ಆಲೂಗಡ್ಡೆ ತುಂಡುಗಳಿಗೂ ಇದೇ ವಿಧಾನವನ್ನು ಅನುಸರಿಸಿ.

ಮೆಂತ್ಯ ಮಿಶ್ರಿತ ಹೊಸ ಆಲೂಗಡ್ಡೆ ಪಕೋರಾ ಸಿದ್ಧವಾಗಿದೆ. ಸಂಜೆಯ ಬಿಸಿ ಬಿಸಿ ಚಹಾದೊಂದಿಗೆ ಈ ಗರಿಗರಿಯಾದ ಮೆಂತ್ಯದ ಪರಿಮಳವಿರುವ ಪಕೋರಾ ತಿನ್ನಲು ಆಹ್ಲಾದಮಯವಾಗಿರುತ್ತದೆ. ಟೊಮೇಟೊ ಸಾಸ್ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ಪಕೋರಾ ಸವಿಯಿರಿ.

English summary

New Potatoes Pakora Recipe

Arrival of spring welcomes new seasonal vegetables and fruits. For example, new potatoes are very much in the season and the market is flooded with the fresh and tasty new potatoes.
Story first published: Saturday, January 18, 2014, 15:30 [IST]
X
Desktop Bottom Promotion