For Quick Alerts
ALLOW NOTIFICATIONS  
For Daily Alerts

ಅಮೆರಿಕದ ಚಾಪ್ ಸ್ಯೂ ನೂಡಲ್ಸ್ ಟೇಸ್ಟ್ ನೋಡಿ

|

ಇಂಡೋ-ಚೈನೀಸ್ ಖಾರದ ತಿನಿಸಾಗಿರುವ ಅಮೆರಿಕನ್ ಚಾಪ್ ಸ್ಯೂ ನೂಡಲ್ಸ್ ತಯಾರಿಸೋದು ತುಂಬಾ ಸುಲಭ. ನೂಡಲ್ಸ್ ನೊಂದಿಗೆ ತರಕಾರಿ ಗ್ರೇವಿ ಮಾಡಿ ತಿನ್ನುವ ಈ ಖಾದ್ಯವಂತೂ ರುಚಿಗೆ ಹೇಳಿ ಮಾಡಿಸಿದ್ದು.

ಅಮೆರಿಕದಲ್ಲಿ ಈ ಚಾಪ್ ಸ್ಯೂ ತಿನಿಸನ್ನು ಮಾಂಸ ಬೆರೆಸಿ ಮಾಡಲಾಗುತ್ತೆ. ಆದರೆ ಇಂಡೋ ಚೈನೀಸ್ ಪ್ರಕಾರ ತರಕಾರಿಯಿಂದ ನೂಡಲ್ಸ್ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಚಾಪ್ ಸ್ಯೂ ನೂಡಲ್ಸ್ ಗೆ ಏನೇನು ಬೇಕು:
* 500 ಗ್ರಾಂ ಬೇಯಿಸಿದ ನೂಡಲ್ಸ್
* ತರಕಾರಿ (ಅಣಬೆ, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಎಲೆಕೋಸು (ಉದ್ದುದ್ದವಾಗಿ ಕತ್ತರಿಸಿರಬೇಕು)
* 3-4 ಎರಡು ಭಾಗ ಕತ್ತರಿಸಿದೆ ಬೇಬಿ ಕಾರ್ನ್
* 5-6 ಬೆಳ್ಳುಳ್ಳಿ ಎಸಳು ಅಥವಾ ಪೇಸ್ಟ್
* 3-4 ಹಸಿರು ಮೆಣಸಿನಕಾಯಿ
* 4-5 ಚಮಚ ಸೋಯಾ ಸಾಸ್
* 1/2 ಚಮಚ ಟೊಮೆಟೊ ಕೆಚಪ್
* 1 ಚಮಚ ಚಿಲ್ಲಿ ಸಾಸ್, 1 ಚಮಚ ಮೆಣಸಿನ ಪುಡಿ
* ಉಪ್ಪು, ಎಣ್ಣೆ, ನೀರು

ಚಾಪ್ ಸ್ಯೂ ನೂಡಲ್ಸ್ ತಯಾರಿಸುವ ವಿಧಾನ:
1. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಬೇಯಿಸಿದ ನೂಡಲ್ಸ್ ಹಾಕಬೇಕು. ನೂಡಲ್ಸ್ ಗರಿಗರಿಯಾಗುವವರೆಗೂ ಹುರಿದು ಒಂದೆಡೆ ಇಟ್ಟುಕೊಳ್ಳಬೇಕು. ನೂಡಲ್ಸ್ ನಲ್ಲಿರುವ ಎಣ್ಣೆ ಹೋಗಲು ಅದನ್ನು ಟಿಶ್ಯೂ ಪೇಪರ್ ಮೇಲೆ ಸೋರಲು ಬಿಡಬಹುದು.

2. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು, ಬೇಬಿ ಕಾರ್ನ್, ಹಸಿರು ಮೆಣಸಿನಕಾಯಿ ಮತ್ತು ಅಣಬೆ ಹಾಕಿ ಹುರಿದು ಮುಚ್ಚುಳ ಮುಚ್ಚಿ 2-3 ನಿಮಿಷ ಬೇಯಿಸಬೇಕು.

3. ನಂತರ ರುಚಿಗೆ ತಕ್ಕಷ್ಟು ಉಪ್ಪು, ಸೋಯಾ ಸಾಸ್, ಟೊಮೆಟೊ ಕೆಚಪ್, ಚಿಲ್ಲಿ ಸಾಸ್ ಹಾಕಿ ಚೆನ್ನಾಗಿ ಬೆರೆಸಿ ಈ ಮಿಶ್ರಣವನ್ನು 2 ನಿಮಿಷ ಬೇಯಿಸಿ ಸ್ವಲ್ಪ ನೀರು ಹಾಕಬೇಕು. 3-4 ನಿಮಿಷ ಬೇಯಿಸಿ ಉರಿಯನ್ನು ಆರಿಸಬೇಕು.

4. ಈಗ ಪ್ಲೇಟ್ ಗೆ ಹುರಿದಿಟ್ಟುಕೊಂಡಿದ್ದ ನೂಡಲ್ಸ್ ಹಾಕಿ ಅದಕ್ಕೆ ಗ್ರೇವಿ ಬೆರೆಸಿಕೊಂಡು ತಿಂದರೆ ಚಾಪ್ ಸ್ಯೂ ನೂಡಲ್ಸ್ ತಿನ್ನಲು ರೆಡಿಯಾಗಿರುತ್ತೆ. ಇದನ್ನು ಬಿಸಿ ಬಿಸಿ ಇದ್ದಾಗಲೇ ತಿನ್ನಬೇಕು. ತಣ್ಣಗಾದ ಮೇಲೆ ತಿನ್ನಲು ರುಚಿಯೆನಿಸುವುದಿಲ್ಲ.

English summary

Vegetarian Chop Suey Recipe | Noodles Recipe | ತರಕಾರಿ ಚಾಪ್ ಸ್ಯೂ ರೆಸಿಪಿ | ನೂಡಲ್ಸ್ ರೆಸಿಪಿ

American chop suey is an Indo-Chinese spicy dish made with crisp fried noodles and vegetables gravy. In American culture, chop suey is a pasta made with boiled or fired macaroni and beef. If you want to make the American chop suey recipe in Indo-Chinese way, read on...
Story first published: Monday, November 28, 2011, 17:09 [IST]
X
Desktop Bottom Promotion