For Quick Alerts
ALLOW NOTIFICATIONS  
For Daily Alerts

ವೀಕೆಂಡ್ ಸ್ಪೆಷಲ್ ಎನಿಸುತ್ತೆ ಈ ಸಮೋಸದಿಂದ..

|
Moong Dal Samosa Recipe
ಎಲ್ಲ ವಯಸ್ಸಿನವರಿಗೂ ಸಮೋಸ ಎಂದರೆ ಅಚ್ಚುಮೆಚ್ಚು. ಈ ವೀಕೆಂಡ್ ಗೆ ನಿಮ್ಮ ಮನೆಮಂದಿಗೆ ಇಷ್ಟವಾಗುವ ಈ ಹೆಸರು ಬೇಳೆ ಸಮೋಸಾ ಹೇಗೆ ಮಾಡುವುದು ಎಂದು ಇಲ್ಲಿ ತಿಳಿದುಕೊಳ್ಳಿ.

ಸಮೋಸ ಮಾಡೋದಕ್ಕೆ ಬೇಕಾಗಿರುವುದು ಏನು?

ಹಿಟ್ಟಿಗೆ: 2 ಕಪ್ ಮೈದಾಹಿಟ್ಟು, ಉಪ್ಪು, 1/2 ಚಮಚ ಅಜ್ವೈನ, 5-6 ಚಮಚ ತುಪ್ಪ, ಎಣ್ಣೆ.
ಮಸಾಲೆಗೆ: 1/2 ಕಪ್ ಹೆಸರು ಬೇಳೆ (ಬೇಯಿಸಿ ಮಸೆದಿರಬೇಕು), 1/2 ಕಪ್ ಬೇಯಿಸಿ ಮಸೆದ ಆಲೂಗಡ್ಡೆ, 3-4 ಹಸಿರು ಮೆಣಸಿನಕಾಯಿ, 1 ಚಮಚ ಶುಂಠಿ ಪೇಸ್ಟ್, 1/2 ಚಮಚ ಕೆಂಪುಮೆಣಸಿನ ಪುಡಿ, ಸ್ವಲ್ಪ ಅರಿಶಿನ, 1/2 ಚಾಟ್ ಮಸಾಲ, ಉಪ್ಪು, 1 ಚಮಚ ಹುಣಸೆ ರಸ, ಕತ್ತರಿಸಿದ ಕೊತ್ತಂಬರಿ ಸೊಪ್ಪು

ಸಮೋಸ ಮಾಡೋದು ಹೇಗೆ?
* ಹಿಟ್ಟು ತಯಾರಿಸಲು ಮೇಲೆ ತಿಳಿಸಿದ ಎಲ್ಲವನ್ನು ಚೆನ್ನಾಗಿ ಬೆರೆಸಿ ಪೂರಿ ಹಿಟ್ಟಿನಂತೆ ಮಾಡಿಕೊಂಡು ಅರ್ಧ ಗಂಟೆ ಬಿಡಬೇಕು.
* ನಂತರ ಮೇಲೆ ತಿಳಿಸಿದ ಮಸಾಲೆ ಪದಾರ್ಥಗಳನ್ನೂ ಬೆರೆಸಿಕೊಳ್ಳಬೇಕು.
* ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಓವಲ್ ಆಕಾರದಲ್ಲಿ ಲಟ್ಟಿಸಿಕೊಳ್ಳಬೇಕು. ಅದನ್ನು ಅರ್ಧ ಕತ್ತರಿಸಿಕೊಂಡು ಅದಕ್ಕೆ ಮಸಾಲೆ ಪದಾರ್ಥ ತುಂಬಿ ತ್ರಿಕೋನಾಕಾರವಾಗಿ ಮಡಚಿ ಎಣ್ಣೆಯಲ್ಲಿ ಕರಿಯಬೇಕು. ಅದು ಕೆಂಪಗಾಗುತ್ತಿದ್ದಂತೆ ಎಣ್ಣೆಯಿಂದ ತೆಗೆಯಬೇಕು.

ಈಗ ವೀಕೆಂಡ್ ಸ್ಪೆಷಲ್ ಹೆಸರು ಬೇಳೆ ಸಮೋಸ ತಿನ್ನೋದಕ್ಕೆ ರೆಡಿಯಾಗಿರುತ್ತೆ.

English summary

Moong Dal Samosa Recipe | Weekend Special Snack | ಹೆಸರು ಬೇಳೆ ಸಮೋಸ ರೆಸಿಪಿ | ವೀಕೆಂಡ್ ಸ್ಪೆಷಲ್ ತಿಂಡಿ

Samosas are all time favorite recipes of adults and kids. So this weekend, try this new samosas recipe, the triangular shaped potao stuffed pastries are also liked by kids. Take a look to know how to go about with the moong dal samosa recipe.
Story first published: Saturday, October 8, 2011, 14:28 [IST]
X
Desktop Bottom Promotion