For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಹೃದಯಕ್ಕಾಗಿ ಓಟ್ಸ್ ಲೇಪಿತ ಸೇಬು

By Prasad
|
Oats
ಇಂದು ವಿಶ್ವ ಹೃದಯ ದಿನ. ನಮಗಾಗಿ ನಾವು ರಾತ್ರಿ ವಿಶ್ರಾಂತಿ ತೆಗೆದುಕೊಂಡರೂ ಎಡೆಬಿಡದೆ ದುಡಿಯುವ ಮುಷ್ಟಿಗಾತ್ರದ ಅವಯವದ ಬಗ್ಗೆ, ಕನಿಷ್ಠ ಇಂದಾದರೂ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ? ಹೃದಯದ ಸ್ವಾಸ್ಥ್ಯಕ್ಕಾಗಿ ಎಷ್ಟು ಕಾಳಜಿ ತೆಗೆದುಕೊಂಡರೂ, ಎಷ್ಟು ಖರ್ಚು ಮಾಡಿದರೂ ಕಡಿಮೆಯೇ. ಪ್ರಶಾಂತ ಮನಸ್ಸು, ಟೆನ್ಷನ್ ಇಲ್ಲದ ಜೀವನಕ್ರಮ, ತಪ್ಪದ ವ್ಯಾಯಾಮದ ಜೊತೆಗೆ ಆರೋಗ್ಯಕರ ತಿನಿಸು ಕೂಡ ದಿನಚರಿಯ ಭಾಗವಾಗಬೇಕು.

ಸ್ವಲ್ಪ ತುಟ್ಟಿ ಎಂದೆನಿಸಿದರೂ ರುಚಿಕರವಾದ ಓಟ್ಸ್ ಲೇಪಿತ ಸೇಬು ಹಣ್ಣಿನ ತಿನಿಸು ತಯಾರಿಸಿ ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು :
ಓಟ್ಸ್ 200 ಗ್ರಾಂ | ಸೇಬು ಹಣ್ಣು 2 | ಒಣ ಹಣ್ಣುಗಳು (ಡ್ರೈ ಫ್ರುಟ್ಸ್) | ಜೇನುತುಪ್ಪು ಕಾಲು ಬಟ್ಟಲು | ಕಾಫಿ ಪುಡಿ 1 ಚಮಚ | ದಾಲಚಿನ್ನಿ ಕಾಲು ಚಮಚ

ತಯಾರಿಸುವ ವಿಧಾನ :

* ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯದೆ ಉದ್ದುದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ.

* ಒಂದು ಬೋಗುಣಿಯಲ್ಲಿ ಸ್ವಲ್ಪ ನೀರು, ಜೇನುತುಪ್ಪ, ಕಾಫಿ ಪುಡಿ, ದಾಲಚಿನ್ನಿ ಪುಡಿ ಎಲ್ಲ ಮಿಶ್ರಣ ಮಾಡಿ ಸ್ಟೌ ಮೇಲಿಡಿ. ಕುದಿಯುವ ಹಂತಕ್ಕೆ ಬಂದ ನಂತರ ಸ್ಟೌ ಸಿಮ್ ಮಾಡಿ ಒಂದು ನಿಮಿಷ ಬಿಟ್ಟು ಬೋಗುಣಿಯನ್ನು ಕೆಳಗಿಳಿಸಿ.

* ಅದು ಬಿಸಿಯಿರುವಾಗಲೇ ಹೆಚ್ಚಿಟ್ಟುಕೊಂಡ ಸೇಬು ಹಣ್ಣನ್ನು ಈ ಮಿಶ್ರಣದಲ್ಲಿ ಅದ್ದಿ, ಎರಡೂ ಬದಿಯಲ್ಲಿ ಅಂಟಿಕೊಳ್ಳುವಂತೆ ನೋಡಿಕೊಳ್ಳಿ.

* ನಂತರ ಸೇಬು ಹಣ್ಣಿನ ಎರಡೂ ಬದಿಗೆ ಓಟ್ಸ್ ಮತ್ತು ತುಂಡು ಮಾಡಿಕೊಂಡ ಒಣ ಹಣ್ಣುಗಳನ್ನು ಉದುರಿಸಿ 180 ಡಿಗ್ರಿ ಉಷ್ಣಾಂಶದಲ್ಲಿ ಓವನ್ ನಲ್ಲಿಟ್ಟು ಹತ್ತು ನಿಮಿಷಗಳ ಕಾಲ ಬೇಯಿಸಿ. ಓವನ್ ನಿಂದ ತೆಗೆದು ಈ ರುಚಿಕರವಾದ ಮತ್ತು ಆರೋಗ್ಯಕರವಾದ ತಿನಿಸನ್ನು ತಿನ್ನಿ.

Story first published: Sunday, September 26, 2010, 17:14 [IST]
X
Desktop Bottom Promotion