For Quick Alerts
ALLOW NOTIFICATIONS  
For Daily Alerts

ಡಬ್ಬಲ್ ಡಿಲೈಟ್ ಉಪ್ಪಿಟ್ಟು ರೊಟ್ಟಿ

By Super
|

*ಸುಶೀಲಾ ಎಂ.ಎನ್. ನರಸಿಂಹರಾಜ ಕಾಲೋನಿ, ಬೆಂಗಳೂರು

ಬೇಕಾಗುವ ಪದಾರ್ಥಗಳು :

ಒಂದು ಪಾವು ಯಾವುದಾದರೂ ರವೆಯಿಂದ ಮಾಡಿದ ಸ್ಟ್ಯಾಂಡರ್ಡ್ ಉಪ್ಪಿಟ್ಟು.
ಒಂದು ಪಾವು ಅಕ್ಕಿ ಹಿಟ್ಟು.
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಚೂರು ಉಪ್ಪು, ಬೇಕಾದಷ್ಟು ಎಣ್ಣೆ.

ಉಪ್ಪಿಟ್ಟು ಮಾಡಲು ನಿಮಗೆ ಬಂದೇ ಬರುತ್ತದೆ ಎಂಬ ಆತ್ಮ ವಿಶ್ವಾಸದಿಂದ ಈ ತಿಂಡಿಯನ್ನು ತಯಾರಿಸುವ ಬಗೆಯನ್ನು ಬರೆಯುತ್ತಿದ್ದೇನೆ. ಆ ಪ್ರಕಾರ ನೀವು ಉಪ್ಪಿಟ್ಟು ತಯಾರಿಸಿರಿ. ಅರ್ಧ ಗಂಟೆ ಹೊತ್ತು ಆರಲು ಬಿಡಿ. ತಣ್ಣಗಾಗಲಿ. ಈ ಉಪ್ಪಿಟ್ಟಿಗೆ ಅಷ್ಟೇ ಪ್ರಮಾಣದಷ್ಟು ಅಕ್ಕಿ ಹಿಟ್ಟು ಬೆರೆಸಿ, ಸ್ವಲ್ಪ ಉಪ್ಪು, ನೀರು ಹಾಕಿ ರೊಟ್ಟಿ ತಟ್ಟುವ ಹದಕ್ಕೆ ಕಲಸಿ. ಕೊತ್ತಂಬರಿ ಸೊಪ್ಪು ಹಾಕುವುದು ಮರೆಯದಿರಿ.

ಮಾಡುವ ವಿಧಾನ :
ಬಾಂಡಲೆ ಅಥವಾ ನಾನ್ ಸ್ಟಿಕ್ ಪ್ಯಾನ್, ಅಥವಾ ತವದಲ್ಲಿ ರೊಟ್ಟಿ ತಟ್ಟಲು ಶುರುಮಾಡಿ.ನಿಮ್ಮ ಆರೋಗ್ಯದ ಬಗೆಗೆ ಕಳಕಳಿ ಇದೆ, ಆದರೆ ಎಣ್ಣೆ, ಬೆಣ್ಣೆ ಹಾಕದಿದ್ದರೆ ಸ್ವಾರಸ್ಯ ಇರುವುದಿಲ್ಲ ಎನ್ನುವುದು ಉಪ್ಪಿಟ್ಟು ರೊಟ್ಟಿಯನ್ನು ವಾರಕ್ಕೊಮ್ಮೆ ತಪ್ಪದೆ ಮಾಡುವ ನನ್ನ ಅಭಿಮತ. ರೊಟ್ಟಿ ಹದವಾಗಿ ಬೇಯಲಿ. ಬೇಯುವಾಗ ಬಾಣಲೆ ಮೇಲೆ ಮುಚ್ಚಳ ಮುಚ್ಚಿ. ಏಕಕಾಲಕ್ಕೆ ಮೃದು ಮತ್ತು ಗರಿಗರಿ ಎನಿಸುವ ರೊಟ್ಟಿ ತಯಾರು. ಹಸಿ ಮೆಣಸಿನಕಾಯಿ ಹಾಕುವುದಕ್ಕೆ ಚೌಕಾಶಿ ಮಾಡದೆ ಸಿದ್ಧಪಡಿಸಿಟ್ಟುಕೊಂಡ ತೆಂಗಿನ ಕಾಯಿ ಚಟ್ನಿಯು ಉಪ್ಪಿಟ್ಟು ರೊಟ್ಟಿ ತಿಂಡಿ ಸಮಯಕ್ಕೆ ಸೈಡ್ ಡಿಶ್ ಆದರೆ ನಿಮ್ಮ ಒಂದು ಬೆಳಗಿನ ಉಪಾಹಾರ ಕಂಪ್ಲೀಟ್.

ಉಪ್ಪಿಟ್ಟಿಗೆ ಸಣ್ಣ ರವೆಗಿಂತ ಬನ್ಸಿರವೆ ಲೇಸು ಸರ್ವಜ್ಞ!

X
Desktop Bottom Promotion