For Quick Alerts
ALLOW NOTIFICATIONS  
For Daily Alerts

ಮಿರ್ಚಿ ಮಸಾಲ ಬಜ್ಜಿ ಸಖತ್ ಹಾಟ್ ಮಗಾ

By Staff
|

ಶ್ರಾವಣವೆಂದರೆ ಹಬ್ಬಗಳ ಕಾರುಬಾರು. ಹಬ್ಬಗಳಲ್ಲಿ ಸಿಹಿ ತಿಂಡಿ ತಿಂದು ತಿಂದು ಬಾಯಿ ಕೆಟ್ಟಿದ್ದರೆ ಬದಲಾವಣೆಗೆ ಈ ಮೆಣಸಿನಕಾಯಿ ಮಸಾಲಾ ಬಜ್ಜಿಯನ್ನು ಮಾಡಿರಿ. ಹಿತವಾದ ಖಾರ, ಗರಂ ಎನ್ನುವ ಮೆಣಸಿನ ಕಾಯಿ ಮಸಾಲ ಬಜ್ಜಿಯ ಸ್ವಾದ ನಿಜಕ್ಕೂ ನಿಮ್ಮ ಬಾಯಿಗೆ ರುಚಿಯ ಹುಚ್ಚು ಹಿಡಿಸುವುದೊಂತೂ ಗ್ಯಾರಂಟಿ. ಮಸಾಲಾ ಬಜ್ಜಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಮಸಾಲಾ ಬಜ್ಜಿಗೆ ಬೇಕಾಗುವ ಸಾಮಾನುಗಳು:

* 6-7 ದೊಡ್ಡ ಮೆಣಸಿನಕಾಯಿ
* ಒಂದು ಕಪ್ ಕಡಲೆ ಹಿಟ್ಟು
* 1/2 ಕಪ್ ಅಕ್ಕಿ ಹಿಟ್ಟು
* ಉಪ್ಪು, ಒಂದು ಚಮಚ ಕೆಂಪು ಮೆಣಸಿನ ಪುಡಿ, ಸೋಡಾ
* 1 ಚಮಚ ಜೀರಿಗೆ
* 1/2 ಕಪ್ ತುರಿದ ತಾಜಾ ತೆಂಗಿನಕಾಯಿ
* ಕತ್ತರಿಸಿದ ಈರುಳ್ಳಿ
* ತುರಿದ ಕ್ಯಾರೆಟ್
* ಕೊತ್ತಂಬರಿ, ನಿಂಬೆ ರಸ

ಮೆಣಸಿನ ಕಾಯಿ ಮಸಾಲಾ ಬಜ್ಜಿ ಮಾಡುವ ವಿಧಾನ:
ಮೊದಲು ಜೀರಿಗೆ ಮತ್ತು ತುರಿದಿಟ್ಟ ಕಾಯಿಯನ್ನು ಒಣಗಿದಂತೆ ರುಬ್ಬಿಕೊಳ್ಳಬೇಕು. ದೊಡ್ಡ ಮೆಣಸಿನಕಾಯಿಯನ್ನು ಮಧ್ಯ ಕತ್ತರಿಸಿ ಅದರೊಳಗಿನ ಬೀಜವನ್ನು ತೆಗೆದು ಅದಕ್ಕೆ ರುಬ್ಬಿಕೊಂಡ ಪೇಸ್ಟನ್ನು ತುಂಬಬೇಕು. ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಸೋಡಾವನ್ನು ಕಲೆಸಿ ಹಿಟ್ಟಿನಂತೆ ತಯಾರಿಸಿಕೊಳ್ಳಬೇಕು.

ಈಗ ಮೆಣಸಿನಕಾಯಿಯನ್ನು ಈ ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ ಕೆಂಪಗಾಗುವ ತನಕ ಕರಿಯಬೇಕು. ಈಗ ಬಜ್ಜಿಗಳಮೇಲೆ ಈರುಳ್ಳಿ, ಕೊತ್ತಂಬರಿ ಮತ್ತು ಕ್ಯಾರೆಟ್ ತುರಿಯನ್ನು ಹಾಕಿ ಮೇಲೆ ಸ್ವಲ್ಪ ನಿಂಬೆ ರಸ ಹಿಂಡಬೇಕು. ಈಗ ತಿಂದು ನೋಡಿ, ರುಚಿ ನಿಮಗೆ ತುಂಬಾ ಅಚ್ಚುಮೆಚ್ಚು ಅನಿಸಿಬಿಡುತ್ತೆ.

English summary

Chilli snacks | Chilly spicy snack | ಮೆಣಸಿನಕಾಯಿ ಬಜ್ಜಿ | ವಿಭಿನ್ನ ಮೆಣಸಿನಕಾಯಿ ಮಸಾಲ ಬಜ್ಜಿ

Chilly snack is very spicy and delicious recipe which evry one will definitely like. Today, we shall present you a recipe that is very spicy, deep fried and simply lip smacking. Take a look at how to make the hot hot chili snack recipe.
X
Desktop Bottom Promotion