For Quick Alerts
ALLOW NOTIFICATIONS  
For Daily Alerts

ಚಾಟ್ಸ್ ಸೇವ್ ಮನೆಯಲ್ಲಿಯೆ ಮಾಡಬಹುದು!

|
How To Prepare Chats Sev
ಚಾಟ್ಸ್ ತಿಂಡಿಗಳ ರುಚಿ ಹೆಚ್ಚ ಬೇಕೆಂದರೆ ಅದಕ್ಕೆ ಸ್ವಲ್ಪ ಸೇವ್ ಸೇರಿಸಬೇಕು. ಈ ಸೇವ್ ಅನ್ನು ಸಾಯಾಂಕಾಲದ ತಿಂಡಿಗೆ ಕರಿದ ಕರಿಬೇವಿನ ಎಲೆಯನ್ನು ಮಿಶ್ರ ಮಾಡಿ ತಿನ್ನಬಹುದು. ಈ ಸೇವ್ ಮನೆಯಲ್ಲಿಯೆ ತಯಾರಿಸಬಹುದಾಗಿದ್ದು, ಇದನ್ನು ತಯಾರಿಸಲು ಹೆಚ್ಚಿನ ಶ್ರಮದ ಅಗತ್ಯವಿಲ್ಲ. ಮನೆಯಲ್ಲಿಯೆ ಸೇವ್ ತಯಾರಿಸ ಬಯಸುವವರಿಗಾಗಿ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

* ಕಡಲೆಹಿಟ್ಟು - 4 ಕಪ್ ನಷ್ಟು
* ಕರಿಮೆಣಸು - 1 ಚಮಚ
* ಜೀರಿಗೆ - 1 / 2 ಚಮಚ
* ಅಜ್ವೈನ - 1 / 2 ಚಮಚ
* ಹಸಿಮೆಣಸು - 3
* ಶುಂಠಿ - 1 ಇಂಚು
ಇಂಗು - ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ನೀರು - ಸ್ವಲ್ಪ
ಕರಿಯಲು ಎಣ್ಣೆ

ತಯಾರಿಸುವ ವಿಧಾನ:

1. ಮಸಾಲೆ ಸಾಮಗ್ರಿಗಳೆಲ್ಲವನ್ನೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಸ್ವಲ್ಪ ನೀರು ಹಾಕಬೇಕು.

2. ಅರ್ಧ ಸೌಟಿನಷ್ಟು ಎಣ್ಣೆಯನ್ನು ಚೆನ್ನಾಗಿ ಬಿಸಿಮಾಡಿಕೊಂಡು, ಕಡಲೆಹಿಟ್ಟಿನ ಮೇಲೆ ಸುರಿದು, ಸೌಟಿನಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಕಡಲೆಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ನಂತರ ಮಸಾಲೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದರಲ್ಲಿ ನಾವು ಕಡಲೆಹಿಟ್ಟನ್ನು ಬಳಸುವುದರಿಂದ ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಜಿಗುಟಾಗಿರುತ್ತದೆ.

3. ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಕಲೆಸಿದ ಹಿಟ್ಟನ್ನು ಎಣ್ಣೆ ಸವರಿದ ಸೇವ್ ಮಣೆಯೊಳಗೆ ತುಂಬಿಕೊಂಡು, ಕಾದ ಎಣ್ಣೆಯಲ್ಲಿ ಹಿಟ್ಟನ್ನು ಪ್ರೆಸ್ ಮಾಡಿ ಸುತ್ತಲೂ ಬರುವಂತೆ ಹಾಕಬೇಕು.

4. ತೆಳ್ಳಗಿರುವುದರಿಂದ 2 - 3 ನಿಮಿಷಗಳಲ್ಲಿ ಸೇವ್ ಬೆಂದುಬಿಡುತ್ತದೆ. ಎರಡೂ ಮೇಲ್ಮೈಗಳನ್ನು ಬೇಯಿಸಿ ಹೊರತೆಗೆದು ಅದನ್ನು ಪೇಪರ್ ಮೇಲೆ ಹರಡಿ ತಣ್ಣಗಾಗಲು ಬಿಡಬೇಕು. ಹಿಟ್ಟು ಮುಗಿಯುವವರೆಗೂ ಈ ರೀತಿ ಮಾಡಬೇಕು.

ತಣ್ಣಗಾದ ನಂತರ ಕರಿದ ಸೇವ್ ಅನ್ನು ಒಮ್ಮೆ ಕೈಯಿಂದ ಚಿಕ್ಕ ಚೂರುಗಳಾಗಿ ಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ಇದನ್ನು ಟೀ ಜೊತೆ ತಿನ್ನಬಹುದು ಅಥವಾ ಚಾಟ್ ತಿಂಡಿಗಳ ತಯಾರಿಕೆಯಲ್ಲಿ ಬಳಸಬಹುದು.

English summary

How To Prepare Chats Sev | Variety Of Chats Recipe | ಚಾಟ್ಸ್ ಗೆ ಬಳಿಸುವ ಸೇವ್ ತಯಾರಿಸುವುದು ಹೇಗೆ? | ಅನೇಕ ಬಗೆಯ ಚಾಟ್ಸ್ ರೆಸಿಪಿ

While preparing chats sev is one of the ingredients will add to increase the taste of chats. sev can eat for tea also. Here there is a recipe of sev. So you can easily prepare sev at home.
Story first published: Friday, April 20, 2012, 13:17 [IST]
X
Desktop Bottom Promotion