For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಸಾಯಂಕಾಲಗಳಿಗೆ ಈರುಳ್ಳಿ ಪಕೋಡ

By Super
|

[ಅಡುಗೆ ಬಲ್ಲವರೇ, ರುಚಿಭರಿತ ಅಡುಗೆಗಳು ನಿಮಗೆ ಗೊತ್ತಿದ್ದರೇ ವಿಳಾಸಕ್ಕೆ ಕಳುಹಿಸಿ . ನಾವು ಎಲ್ಲರಿಗೂ ತಿಳಿಸುತ್ತೇವೆ.. ಎಲ್ಲರ ನಾಲಿಗೆ ತೃಪ್ತಿ ಪಡಿಸಿದ ಸಾರ್ಥಕತೆ ನಿಮ್ಮದಾಗಲಿ. ಸದ್ಯಕ್ಕೆ ಈಗ ಈರುಳ್ಳಿ ಪಕೋಡ ಸವಿಯಿರಿ : ಸಂಪಾದಕ]

  • ನಿರುಪಮ ಕರಂದ್ಲಾಜೆ, ಕಳಸ

ಬೇಕಾಗುವ ಪದಾರ್ಥಗಳು :

*ಎರಡು ಲೋಟ ಕಡ್ಲೆ ಹಿಟ್ಟು.
*ಅರ್ಧ ಲೋಟ ಅಕ್ಕಿ ಹಿಟ್ಟು.
*ಮೂರುಚಮಚ ಒಣಮೆಣಸಿನ ಪುಡಿ.
*ಇನ್ನೂ ಕಾರ ಬೇಕು ಎನ್ನುವವರು
ನಾಲಕ್ಕು ಹಸಿ ಮೆಣಸಿನ ಕಾಯಿ ಸೇರಿಸಬಹುದು
*ಐದೋ ಆರೋ ಈರುಳ್ಳಿ.
*ಒಂದು ಚಮಚ ದನಿಯ ಪುಡಿ.
*ಒಂದು ಚಮಚ ಜೀರಿಗೆ ಪುಡಿ
*ಕರಿಯುವುದಕ್ಕೆ ಎರಡು ಲೋಟದಷ್ಟು ಎಣ್ಣೆ
*ಯಥಾಪ್ರಕಾರ ರುಚಿಗೆ ತಕ್ಕಷ್ಟು ಉಪ್ಪು.
*ಕರಿಬೇವಿನ ಎಸಳುಗಳು ಧಾರಾಳವಾಗಿ

ತಯಾರಿಸುವ ವಿಧಾನ :

ಮೆಣಸಿನಪುಡಿ, ಉಪ್ಪು, ಜೀರಿಗೆ ಪುಡಿ, ದನಿಯ ಪುಡಿ,ಕಡ್ಳೆ ಹಿಟ್ಟು ಅಕ್ಕಿಹಿಟ್ಟನ್ನು ಬೆರೆಸಿ ಅದಕ್ಕೆ ನೀರು ಹಾಕಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಬೇಕು. ಚಿಪ್ಸ್ ಗೆ ಹೆಚ್ಚಿಕೊಳ್ಳುವ ರೀತಿ ಈರುಳ್ಳಿಯನ್ನು ರೋಲ್ ರೋಲ್ ಆಗಿ ಹೆಚ್ಚಿಕೊಂಡು ಕಲಸಿದ ಹಿಟ್ಟಿಗೆ ಸೇರಿಸಿಕೊಳ್ಳಬೇಕು.

ಕೈಯಲ್ಲಿ ಸ್ವಲ್ಪ ಸ್ವಲ್ಪನೆ ಹಿಟ್ಟುತೆಗೆದು ಕೊಂಡು ಕಾದ ಎಣ್ಣೆಗೆ ಪುಡಿಪುಡಿಯಾಗಿ ಉದುರಿಸುವುದು. ಬೆಂದಮೇಲೆ ಜಾಲರ ಸೌಟಿನಲ್ಲಿ ನಿಧಾನವಾಗಿ ತಿರುವಿಹಾಕುತ್ತಾ ಕೆಂಪಗಾಗುವವರೆಗೆ, ಗರಿಗರಿಯಾಗುವವರೆಗೆ ಬಾಣಲೆಯಲ್ಲಿ ಹುರಿಯಬೇಕು. ಈರುಳ್ಳಿ ಪಕೋಡ ಆದನಂತರ ಕರಿಬೇವಿನ ಸೊಪ್ಪನ್ನು ಕರಿದು ಪಕೋಡದ ಮೇಲೆ ಡ್ರೆಸ್ಸಿಂಗ್ ಮಾಡುವುದು. ಆಮೇಲೆ ತಿನ್ನುವುದು.

X
Desktop Bottom Promotion