For Quick Alerts
ALLOW NOTIFICATIONS  
For Daily Alerts

ಮಾವಿನಕಾಯಿ ಅನ್ನ..

By Staff
|

ನಾಲಿಗೆ ಚಾಪಲ್ಯಕ್ಕೆ ನಿತ್ಯವು ರಸದೌತಣ ಬೇಕಲ್ಲವೇ?ಹಾಗಾದರೆ ಪ್ರಯತ್ನಿಸಿ..

ಬೇಕಾಗುವ ಸಾಮಗ್ರಿ :
2-3 ಮಾವಿನ ಕಾಯಿ
ಶೇಂಘಾ ಬೀಜ
7-8 ಗೋಡಂಬಿ
2-3ಟೀ ಚಮಚ ಕಡಲೆಬೆಳೆ
4-5ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
8-10ಕರಿಬೇವು ಎಲೆ
ಒಂದು ಚುಟುಕಿಯಷ್ಟು ಅರಿಶಿಣ ಪುಡಿ
ಟೀ ಚಮಚದಲ್ಲಿ ಸಾಸಿವೆ
ತುರಿದ ಕೊಬ್ಬರಿ
1/2ಕೆ.ಜಿ ಅಕ್ಕಿ

ಮಾಡುವ ವಿಧಾನ : ಮೊದಲು ಒಂದು ಪಾತ್ರೆಯಲ್ಲಿ ಅನ್ನವನ್ನು ಮಾಡಿಟ್ಟುಕೊಂಡಿರಿ. ಅನಂತರ ಎಲ್ಲಾ ಮಾವಿನಕಾಯಿಗಳ ಸಿಪ್ಪೆಯನ್ನು ತೆಗೆದು ಸಣ್ಣಗೆ ತುರಿದುಕೊಳ್ಳಿ. ತುರಿದುಕೊಂಡ ಮಾವಿನಕಾಯಿಯಲ್ಲಿ 3-4 ಹಸಿಮೆಣಸಿನಕಾಯಿ ಹಾಕಿ ನೀರನ್ನು ಬಳಸದೆ ಮಿಕ್ಸಿ ಮಾಡಿ ಇಡಿ.

ಇನ್ನೊಂದು ಬಾಣಲೆಯನ್ನು ಸ್ಟೋವ್‌ ಮೇಲೆ ಇಟ್ಟು ಅದರಲ್ಲಿ 2-3ಚಮಚ ಎಣ್ಣೆಯನ್ನು ಹಾಕಿ, ಕಡಲೆಬೇಳೆ, ಶೇಂಘಾ, ಗೋಡಂಬಿ ಹಾಕಿ ಚನ್ನಾಗಿ ಹುರಿದುಕೊಳ್ಳಿ. ಕೆಂಪುಬಣ್ಣಕ್ಕೆ ಬಂದ ಮೇಲೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು,ಒಂದು ಚುಟುಕಿ ಅರಿಶಿಣ ಪುಡಿ, ಸ್ವಲ್ಪ ಕೆಂಪು ಮೆಣಸಿನಪುಡಿ ಹಾಕಿ ಸ್ವಲ್ಪ ಹುರಿಯಿದು ನಂತರ ಮೊದಲೆ ಮಿಕ್ಸಿ ಮಾಡಿಕೊಂಡ ಮಾವಿನಕಾಯಿ ಮಿಶ್ರಣಕ್ಕೆ ಸೇರಿಸಿ.ಕೊನೆಗೆ ಸ್ಟೋವ್‌ ಮೇಲಿಂದ ಬಾಣಲೆ ಕೆಳಗೆ ಇಳಿಸಿ ಅದರಲ್ಲಿ ಅನ್ನವನ್ನು ಚನ್ನಾಗಿ ಕಲುಕಿ. ರುಚಿ ನೋಡಿ..

Story first published: Monday, December 15, 2008, 17:19 [IST]
X
Desktop Bottom Promotion