For Quick Alerts
ALLOW NOTIFICATIONS  
For Daily Alerts

ನಾಡಹಬ್ಬಕ್ಕೆ ಮನೆಯಲ್ಲೇ ಬಾದಾಮಿ ಕೀರು

By Super
|

ಬೆಳಗ್ಗೆ, ಮಧ್ಯಾನ್ಹ, ಸಾಯಂಕಾಲ ಅಥವಾ ರಾತ್ರಿಹೊತ್ತು ಅತಿ ಸುಲಭವಾಗಿ ತಯಾರಿಸಬಹುದಾದ ಸಿಹಿಪೇಯ.

ಬೇಕಾಗುವ ಸಾಮಾನು :

ಹಾಲು - 1 ಲೀಟರ್‌
ಸಕ್ಕರೆ - ಮುಕ್ಕಾಲು ಕಪ್ಪು
ಬಾದಾಮಿ- 30 ಗ್ರಾಂ
ಏಲಕ್ಕಿ - 8
1 ಗ್ರಾಂ ಕುಂಕುಮ ಕೇಸರಿ

ಮಾಡುವ ವಿಧಾನ :

ಬಾದಾಮಿ ಬೀಜಗಳನ್ನು ಕುದಿಯುವ ನೀರಿನಲ್ಲಿ ನೆನಸಿಡಿ. 10 ನಿಮಿಷ ಮುಚ್ಚಿಡಿ. ಆಮೇಲೆ ನೀರಿನಿಂದ ತೆಗೆದು ಸಿಪ್ಪೆ ಬೇರ್ಪಡಿಸಿ ರುಬ್ಬುವ ಕಲ್ಲಿನಲ್ಲಿ ಹಾಕಿ, ಸ್ವಲ್ಪ ನೀರು ಚಿಮುಕಿಸಿ ರುಬ್ಬಿಕೊಳ್ಳಿ. ಹಾಲನ್ನು ಕುದಿಯಲಿಕ್ಕಿಡಿ. ಕುದಿಯುವ ಹಾಲಿಗೆ ರುಬ್ಬಿದ ಬಾದಾಮಿಯನ್ನು ಹಾಕಿ ಚೆನ್ನಾಗಿ ಮಗುಚುತ್ತಿರಿ. ಹಾಲು ಚೆನ್ನಾಗಿ ಕುದ್ದು , ಪಾಯಸದಂತೆ ಆಗುವಾಗ ಸಕ್ಕರೆ ಹಾಕಿ ಇನ್ನೂ ಸ್ವಲ್ಪ ಕುದಿಸಿ. ಆನಂತರ ಏಲಕ್ಕಿ ಪುಡಿ, ನೆನೆಸಿದ ಕುಂಕುಮ ಕೇಸರಿ ಅರೆದು ಬೆರೆಸಿದರೆ ಬಾದಾಮಿ ಕೀರು ರೆಡಿ.

ಬಿಸಿ ಇದ್ದಾಗಲಾದರೂ ಸರಿ, ತಣ್ಣಗಾದರೂ ಸೈ- ಬಾದಾಮಿ ಕೀರು ತುಂಬಾನೇ ರುಚಿ. ನೀವೇ ಮಾಡಿದರೆ ಚೆನ್ನಾಗಿರತ್ತೆ. ಬೇರೆ ಯಾರಾದರೂ ಮಾಡಿ ಬೆಳ್ಳಿಲೋಟದಲ್ಲಿ ತಂದುಕೊಟ್ಟರೆ ಇನ್ನೂ ಆನಂದವಾಗಿರುತ್ತದೆ.

X
Desktop Bottom Promotion