For Quick Alerts
ALLOW NOTIFICATIONS  
For Daily Alerts

ದಿಢೀರ್ ರುಚಿಗೆ ಸಾಥ್ ನೀಡುವ ಮಾವಿನ ಹಣ್ಣಿನ ಚಿತ್ರಾನ್ನ

|

ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ.

ಬೆಳಗಿನ ತಿಂಡಿ ರುಚಿಕಟ್ಟಾಗಿ ಅಚ್ಚುಕಟ್ಟಾಗಿ ಇದ್ದಷ್ಟು ಅದನ್ನು ಸೇವಿಸುವ ಮನಸ್ಸು ತೃಪ್ತಿ ಹೊಂದುತ್ತದೆ, ಮತ್ತು ದೇಹ ಕೂಡ ಆರೋಗ್ಯಯುತ ಆಹಾರ ಪದ್ಧತಿಯಿಂದಾಗಿ ಉಲ್ಲಾಸದಿಂದ ಕೂಡಿರುತ್ತದೆ. ಆದ್ದರಿಂದಲೇ ನಿಮ್ಮ ಮೈ ಮನ ಬಯಸುವ ಆಹಾರ ವಿಧಾನವನ್ನೇ ದೈನಂದಿನ ಜೀವನದಲ್ಲಿ ನೀವು ಅಳವಡಿಸಿಕೊಳ್ಳಬೇಕು.

ನೈಸರ್ಗಿಕವಾಗಿ ಸಿಗುವ ತರಕಾರಿ ಹಣ್ಣುಗಳನ್ನು ಬಳಸಿ ಮಾಡುವ ತಿಂಡಿ ಪೋಷಕಾಂಶಭರಿತವಾಗಿರುತ್ತದೆ. ಈಗ ಹೇಳಿ ಕೇಳಿ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣನ್ನು ಬಳಸಿ ಮಾಡುವ ಚಟ್ನಿ, ಅನ್ನ ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಅತ್ಯುತ್ತಮ. ಇಂದಿನ ಲೇಖನದಲ್ಲಿ ಮಾವಿನ ಹಣ್ಣನ್ನು ಬಳಸಿ ಮಾಡುವ ಮಾವಿನ ಹಣ್ಣಿನ ಚಿತ್ರಾನ್ನದ ರೆಸಿಪಿ ವಿಧಾನವನ್ನು ನೀಡುತ್ತಿದ್ದೇವೆ. ಖಡಿಮೆ ಖರ್ಚಿನಲ್ಲಿ ಸಮಯ ವ್ಯರ್ಥವಾಗದೇ ರುಚಿಕಟ್ಟಾಗಿ ಈ ಸ್ವಾದಿಷ್ಟ ಖಾದ್ಯವನ್ನು ತಯಾರಿಸಬಹುದಾಗಿದೆ.

Mouth watering Mango Rice Recipe

ಪ್ರಮಾಣ: 2 ಜನಕ್ಕೆ ಸಾಕಾಗುವಷ್ಟು
ಬೇಕಾಗುವ ಸಮಯ: 1/2 ಗಂಟೆ

ಬೇಕಾಗುವ ಸಾಮಾಗ್ರಿಗಳು
*ಬೇಯಿಸಿದ ಬೆಳ್ತಿಗೆ ಅನ್ನ
*ಮಾವಿನ ಹಣ್ಣು -ಒಂದು ಕಪ್ ನಷ್ಟು(ಸಣ್ಣದಾಗಿ ಕತ್ತರಿಸಲಾಗಿರುವ)
*ತೆಂಗಿನ ತುರಿ- 2-3 ಟೇಬಲ್ ಚಮಚ
*ಹಸಿಮೆಣಸು- 2-3 ರಷ್ಟು (ಸಣ್ಣದಾಗಿ ಕತ್ತರಿಸಲಾಗಿರುವ)
*ಕರಿಬೇವು- 7-8 ಎಸಳು
*ಕಡಲೆಬೀಜ - ಮೂರು ಚಮಚ
*ಚಮಚ ಉದ್ದಿನ ಬೇಳೆ- ಒಂದು ಟೀ ಚಮಚ
*ಕಡ್ಲೆಬೇಳೆ - 1/2 ಟೀ ಚಮಚ
*ಸಾಸಿವೆ- 1/2 ಟೀ ಚಮಚ
*ಜೀರಿಗೆ- 1/2 ಟೀ ಚಮಚ
*ಕೆಂಪು ಮೆಣಸು - 2
*ಅರಿಶಿನ- 1/2 ಚಮಚ
*ಇಂಗು - ಸ್ವಲ್ಪ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಎರಡು ಟೇಬಲ್ ಚಮಚ
*ಕೊತ್ತೊಂಬರಿ ಸೊಪ್ಪು

ಮಾಡುವ ವಿಧಾನ
*ಮೊದಲು ಒಂದು ಪಾತ್ರೆಯಲ್ಲಿ ಅನ್ನವನ್ನು ಮಾಡಿಟ್ಟುಕೊಂಡಿರಿ. ಅನ್ನ ಸ್ವಲ್ಪ ಉದುರಾಗಿದ್ದರೆ ಚಿತ್ರಾನ್ನ ಕಲಿಸಲು ಸುಲಭವಾಗುತ್ತದೆ.
*ಇನ್ನು ಮಾವಿನಹಣ್ಣನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಿ
*ಅಗತ್ಯವಿದ್ದಷ್ಟು ಎಳ್ಳೆಣ್ಣೆಯನ್ನು ಬಾಣಲೆಗೆ ಹಾಕಿಕೊಂಡು ತುಸುಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿರಿ. ಚಟಪಟ ಅನ್ನುತ್ತಿದ್ದಂತೆ ಉದ್ದಿನ ಬೇಳೆ, ಜೀರಿಗೆ, ಕಡ್ಲೆಬೇಳೆ, ಕೆಂಪು ಮೆಣಸು ಸೇರಿಸಿ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ.
*ನಂತರ ಈ ಮಿಶ್ರಣಕ್ಕೆ ಇಂಗು, ಹಸಿಮೆಣಸು, ಕರಿಬೇವಿನೆಸಳು, ತೆಂಗಿನ ತುರಿ, ತುರಿದ ಮಾವಿನಹಣ್ಣು, ಅರಿಶಿನ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ ಉರಿಯನ್ನು ಸಣ್ಣದಾಗಿಸಿ.
*ಈ ಮಸಾಲಾ ಸಿದ್ಧವಾಯಿತು ಎಂದೊಡನೆ ಈಗಾಗಲೇ ಬೇಯಿಸಿರುವ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ, ಜೊತೆಗೆ ಅದಕ್ಕೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಾವಿನ ಹಣ್ಣಿನ ಚಿತ್ರಾನ್ನ ರೆಡಿ..!

English summary

Mouth watering Mango Rice Recipe

In the summer, mangoes are widely available in fresh produce section. How can you miss the recipe made from raw/green mangoes? So today, we come up with raw mango rice. have a look
X
Desktop Bottom Promotion