For Quick Alerts
ALLOW NOTIFICATIONS  
For Daily Alerts

ತಿಂದು ನೋಡಿ ಗರಿಗರಿಯಾದ ಎಳ್ಳನ್ನ...

|
seasame rice
ಯಾವಾಗಲೂ ಪಲಾವ್, ಚಿತ್ರನ್ನ ಈ ಅನ್ನದ ಐಟಮ್ ಗಳನ್ನ ತಿಂದು ಬೋರ್ ಹಿಡಿದಿದ್ರೆ, ಈ ಹೊಸ ತರಹದ ತಿಂಡಿಯನ್ನ ಮಾಡಿನೋಡಿ. ಎಳ್ಳನ್ನ ಬಳಸಿಕೊಂಡು ರುಚಿಕರ ಎಳ್ಳನ್ನವನ್ನು ಹೇಗೆ ತಯಾರಿಸಬಹುದು ಅಂತ ತಿಳಿದುಕೊಳ್ಳಿ. ಕಬ್ಬಿಣಾಂಶ ಹೆಚ್ಚಿರುವ ಈ ಎಳ್ಳನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಸಹಕಾರಿ.

ಎಳ್ಳನ್ನು ಹಾಗೆ ತಿನ್ನೋದಕ್ಕೆ ಸಾಧ್ಯ ಇಲ್ಲ. ಅದಕ್ಕಾಗಿ ಅದನ್ನು ಅನ್ನದಲ್ಲಿ ಬೆರೆಸಿ ಡಿಫರೆಂಟ್ ತಿಂಡಿ ಮಾಡಿದರೆ ಹೇಗೆ? ಅದೂ ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ಎಳ್ಳನ್ನ ನಿಮಗೆ ಇಷ್ಟ ಆಗೋದ್ರಲ್ಲಿ ಸಂದೇಹವೇ ಇಲ್ಲ.

ಎಳ್ಳನ್ನವನ್ನು ಮಾಡೋದು ಹೇಗೆ ಅಂತ ತಿಳಿದು ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾನುಗಳು:
* ಒಂದೂವರೆ ಕಪ್ ಬೇಯಿಸಿದ ಬಾಸುಮತಿ ಅನ್ನ
* 1 ಚಿಕ್ಕ ಕಪ್ ಕರಿ ಎಳ್ಳು
* 6 ಕೆಂಪು ಮೆಣಸಿನಕಾಯಿ
* ಅರ್ಧ ಕಪ್ ಎಣ್ಣೆ
* ಅರ್ಧ ಕಪ್ ತೆಂಗಿನ ತುರಿ
* ಉಪ್ಪು, ಕರಿಬೇವು, ಕಡಲೆಬೀಜ

ಹೀಗೆ ಮಾಡಿ: ಮೊದಲು ಎಳ್ಳನ್ನು ಕೆಂಪು ಮೆಣಸಿನಕಾಯಿ ಮತ್ತು ತೆಂಗಿನ ತುರಿಯೊಂದಿಗೆ ಹುರಿದುಕೊಳ್ಳಿ. (ಎಣ್ಣೆ ಹಾಕದಂತೆ). ಈ ಮಿಶ್ರಣವನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಈ ರುಬ್ಬಿದ ಮಸಾಲೆಯನ್ನು ಅನ್ನಕ್ಕೆ ಬೆರೆಸಬೇಕು. ಕೊನೆಗೆ, ಬಾಣಲೆಯಲ್ಲಿ ಕರಿಬೇವು ಮತ್ತು ಕಡಲೆ ಬೀಜವನ್ನು ಹುರಿದುಕೊಂಡು ಎಲ್ಲವನ್ನೂ ಬೆರೆಸಿ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಈಗ ಎಳ್ಳನ್ನ ತಿನ್ನಲು ರೆಡಿಯಾಗಿದೆ. ಇಷ್ಟು ಸುಲಭವಾಗಿ ಹೆಚ್ಚು ಸಾಮಾನುಗಳನ್ನು ಉಪಯೋಗಿಸದೆ ಮಾಡಬಹುದಾದ ಈ ಡಿಫರೆಂಟ್ ಎಳ್ಳನ್ನವನ್ನ ನೀವೂ ಮಾಡಿ ರುಚಿ ನೋಡಿ...

English summary

Seasame rice recipe | Seasame health benefits | Different rice items | ಎಳ್ಳು ಮತ್ತು ರುಚಿಕರ ಅಡುಗೆ | ಎಳ್ಳು ಮತ್ತು ಆರೋಗ್ಯ | ವಿಧವಿಧವಾದ ಅನ್ನದ ಅಡುಗೆ

If you are bored preparing pulaos and other common rice items for lunch box then let's introduce you to a special rice recipe. Sesame can also be used to make tasty rice item called the sesame rice. Sesame is good for health and helps to cure various health issues like arthritis. Take a look at how to go about with the sesame rice recipe.
Story first published: Wednesday, July 27, 2011, 11:51 [IST]
X
Desktop Bottom Promotion