For Quick Alerts
ALLOW NOTIFICATIONS  
For Daily Alerts

ಪನೀರ್‌ ಮಟ್ಟರ್‌

By Super
|

ಚಪಾತಿ-ಪೂರಿ, ಕುಲ್ಚಾ-ನಾನ್‌ಗಳ ಜೊತೆ ತಿನ್ನಲು ರುಚಿಭರಿತ ಸಂಗಾತಿ! ಜೊತೆಗೆ ಸ್ವಲ್ಪ ಹೆಚ್ಚಿದ ಈರುಳ್ಳಿ ಮತ್ತು ಚೂರೇಚೂರು ನಿಂಬೆ ಹಣ್ಣು. ಇಂದೇ ಟ್ರೆೃಮಾಡಿ...

ಪನೀರ್‌ : 200ಗ್ರಾಂ
ಬಟಾಣಿ : 200 ಗ್ರಾಂ
ಈರುಳ್ಳಿ : 2
ಟೊಮೊಟೊ :2
ಶುಂಠಿ : ಒಂದು ಸಣ್ಣ ತುಂಡು
ಹಾಲು : 1/2 ಲೋಟ
ಬೆಳ್ಳುಳ್ಳಿ ಎಸಳು : 6
ಉಪ್ಪು : ರುಚಿಗೆ ತಕ್ಕಷ್ಟು
ಮೆಣಸಿನ ಹುಡಿ : 2 ಚಮಚ
ಸಕ್ಕರೆ : 1 ಚಮಚ
ಬೆಣ್ಣೆ : ಸ್ವಲ್ಪ

ಮಾಡುವ ವಿಧಾನ :

ಕೆಳಗಿನ 10 ಸರಳ ಹಂತಗಳಲ್ಲಿ ಸಿದ್ಧವಾಗುತ್ತದೆ. ಕ್ರಮಗಳನ್ನು ದಯವಿಟ್ಟು ಅನುಸರಿಸಿ.

  1. ಪನೀರನ್ನು ಸಣ್ಣ ಘನಾಕೃತಿಯ ಹೋಳುಗಳಾಗಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಸ್ವಲ್ಪ ಬೆಣ್ಣೆ ಹಾಕಿ, ಬಿಸಿ ಮಾಡಿ, ಅದರಲ್ಲಿ ಪನೀರ್‌ ತುಂಡುಗಳನ್ನು ಹಾಕಿ, ಹೊಂಬಣ್ಣ ಬರುವವರೆಗೆ ಹುರಿಯಿರಿ. ಪನೀರನ್ನು ಹೊರತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.
  2. ಟೊಮೊಟೊ,ಬೆಳ್ಳುಳ್ಳಿ ಎಸಳು, ಶುಂಠಿ ಇವನ್ನು ಒಟ್ಟಿಗೆ ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿ .
  3. ಬಟಾಣಿಯನ್ನು ಕುಕ್ಕರ್‌ನಲ್ಲಿ ಬೇಯಿಸಿ ತೆಗೆದಿಡಿ.
  4. ಬಾಣಲೆಯಲ್ಲಿ ಬೆಣ್ಣೆ ಹಾಕಿ, ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
  5. ಈಗ ಟೊಮೊಟೊ, ಬೆಳ್ಳುಳ್ಳಿ ಎಸಳು, ಶುಂಠಿ ಇವುಗಳ ಮಿಶ್ರಣವನ್ನು ಬಾಣಲೆಗೆ ಸುರಿಯಿರಿ.
  6. ಟೊಮೊಟೊ ಹಸಿವಾಸನೆ ಹೋಗುವ ತನಕ ಮಂದ ಉರಿಯಲ್ಲಿ ಬೇಯಿಸಿ.
  7. ಈ ಮಿಶ್ರಣಕ್ಕೆ ಪನೀರ್‌ ತುಂಡುಗಳು ಹಾಗೂ ಬೇಯಿಸಿದ ಬಟಾಣಿ ಸೇರಿಸಿ.
  8. ಇದಕ್ಕೆ ಸ್ವಲ್ಪ ಹಾಲು, 1 ಚಮಚ ಸಕ್ಕರೆ ಹಾಕಿ.
  9. ಈಗ ಉಪ್ಪು, ಮೆಣಸಿನ ಪುಡಿಯನ್ನು ಹಾಕಿ. ಸ್ವಲ್ಪ ಹೊತ್ತು ಕಲಕುತ್ತಿರಿ. ಈಗ ಪನೀರ್‌ ಮಟರ್‌ ತಯಾರಾಯ್ತು.
  10. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಪಾತಿ ಜತೆ ತಿನ್ನಲು ಬಹಳ ರುಚಿ!!

(ಓದುಗರೇ, ನಿಮ್ಮ ನಳಪಾಕವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾವಚಿತ್ರದೊಂದಿಗೆ, ರುಚಿಭರಿತ ತಿಂಡಿ-ತಿನಿಸುಗಳನ್ನು ಮಾಡುವ -ಸಂ)

X
Desktop Bottom Promotion