For Quick Alerts
ALLOW NOTIFICATIONS  
For Daily Alerts

ಶೀತ, ಗಂಟಲು ಕೆರತ ಹೋಗಲಾಡಿಸುತ್ತೆ ಈ ರಸಂ

|

ಈ ವರ್ಷ ಕಳೆದ ವರ್ಷಕ್ಕಿಂತ ತುಸು ಅಧಿಕವೇ ಮಳೆ ಸುರಿಯುತ್ತಿದೆ. ವಾತಾವರಣ ತುಂಬಾ ತಂಪಾಗಿರುವುದರಿಂದ ಶೀತ, ಜ್ವರ, ಗಂಟಲು ಕೆರೆತ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಮಳೆಗಾಲ ಮತ್ತು ಚಳಿಗಾಲದಲ್ಲಿ ಅನ್ನ, ಹುಳಿ, ಪಲ್ಯ ಇವುಗಳ ಜೊತೆ ಒಂದು ರಸಂ ಕೂಡ ಮಾಡಿದರೆ ಒಳ್ಳೆಯದು. ಏಕೆಂದರೆ ಶುಂಠಿ ಅಥವಾ ಕರಿ ಮೆಣಸು ಬಳಸಿ ರಸಂ ತಯಾರಿಸುವುದರಿಂದ ಈ ರಸಂ ತಿಂದರೆ ಶೀತ, ಕೆಮ್ಮಿನಂತಹ ತೊಂದರೆಗಳು ಕಾಡುವುದಿಲ್ಲ, ಬಾಯಿಗೂ ರುಚಿಕರವಾಗಿರುತ್ತದೆ, ಮೈ ಕೂಡ ಬೆಚ್ಚಗಿರುತ್ತದೆ.

ಇಲ್ಲಿ ನಾವು ಕರಿ ಮೆಣಸು ಬಳಸಿ ಮಾಡುವ ಆಂಧ್ರ ಶೈಲಿಯ ರಸಂನ ರೆಸಿಪಿ ನೀಡಿದ್ದೇವೆ ನೋಡಿ:

Andhra Pepper Flavored Rasam

ಬೇಕಾಗುವ ಸಾಮಾಗ್ರಿಗಳು
* ಬೇಯಿಸಿ ಮ್ಯಾಶ್ ಮಾಡಿದ ತೊಗರಿ ಬೇಳೆ(2 ದೊಡ್ಡ ಚಮಚ)
* ದೊಡ್ಡ ಗಾತ್ರದ ಟೊಮೆಟೊ 1
* 1/4 ಚಮಚ ಅರಿಶಿಣ ಪುಡಿ
* ಹುಣಸೆ ಹಣ್ಣು( ನಿಂಬೆ ಹಣ್ಣು ಗಾತ್ರದಷ್ಟು)
* ಅರ್ಧ ಚಮಚ ಬೆಲ್ಲದ ಪುಡಿ (ಬೇಕಿದ್ದರೆ)
* ಸ್ವಲ್ಪ ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
3 ಕಪ್ ನೀರು

ರಸಂ ಪೌಡರ್ ಗೆ ಬೇಕಾಗುವ ಸಾಮಾಗ್ರಿಗಳು
* 1 ಚಮಚ ತೊಗರಿಬೇಳೆ
* 2 ಚಮಚ ಕರಿ ಮೆಣಸು
* ಒಂದೂವರೆ ಚಮಚ ಕೊತ್ತಂಬರಿ ಬೀಜ
* 3/4 ಚಮಚ ಜೀರಿಗೆ

ಇವೆಲ್ಲವನ್ನು ರೋಸ್ಟ್ ಮಾಡಿ ಪುಡಿ ಮಾಡಿ.

ಒಗ್ಗರಣೆಗೆ
ಅರ್ಧ ಚಮಚ ಸಾಸಿವೆ
ಸ್ವಲ್ಪ ಇಂಗು
1 ಒಣ ಮೆಣಸು
ಸ್ವಲ್ಪ ಕೊತ್ತಂಬರಿ ಸೊಪ್ಪು
2 ಚಮಚ ತುಪ್ಪ

ತಯಾರಿಸುವ ವಿಧಾನ:

* ತಳ ಸ್ವಲ್ಪ ದೊಡ್ಡದಿರುವ ಪಾತ್ರೆಗೆ 3 ಕಪ್ ನೀರು ಹಾಕಿ ಅದರಲ್ಲಿ ಕತ್ತರಿಸಿದ ಟೊಮೆಟೊ, ಹುಣಸೆ ಹಣ್ಣಿಸ ರಸ, ಉಪ್ಪು, ಅರಿಶಿಣ ಪುಡಿ, ಸ್ವಲ್ಪ ತಾಜಾ ಕೊತ್ತಂಬರಿ ಸೊಪ್ಪು, ಬೆಲ್ಲ ಹಾಕಿ ಕುದಿಸಿ, ನೀರು ಕುದಿ ಬಂದ ಮೇಲೆ ಮತ್ತೆ 5 ನಿಮಿಷ ಕುದಿಸಿ.

* ಈಗ ರಸಂ ಪುಡಿ ಹಾಕಿ, ಮ್ಯಾಶ್ ಮಾಡಿದ ದಾಲ್ ಹಾಕಿ ಮತ್ತೆ 5 ನಿಮಿಷ ಕುದಿಸಿ.

* ನಂತರ ಒಗ್ಗರಣೆ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಒಣ ಮೆಣಸು ಮತ್ತು ಕರಿ ಬೇವಿನ ಎಲೆ ಮತ್ತು ಇಂಗು ಹಾಕಿ ಅದನ್ನು ಕುದಿಯುತ್ತಿರುವ ರಸಂಗೆ ಹಾಕಿ ಒಮ್ಮೆ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ, ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪೆಪ್ಪರ್ ರಸಂ (ಕರಿ ಮೆಣಸಿನ ರಸಂ) ರೆಡಿ.
ಇದನ್ನು ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ತುಂಬಾ ರುಚಿಯಾಗಿರುತ್ತದೆ.

English summary

Andhra Pepper Flavored Rasam

Rasam is best for rainy season. Comforting, earthy, warm with health supporting properties, pepper flavored rasam works as a perfect antidote for a runny nose.
X
Desktop Bottom Promotion