For Quick Alerts
ALLOW NOTIFICATIONS  
For Daily Alerts

ಹಿತಮಿತವಾದ ತೂಕಕ್ಕೆ ಪ್ರೊಟೀನ್ ಅಡುಗೆ

|
Recipe For Control Weight
ತೂಕ ಹೆಚ್ಚಾಗುವಲ್ಲಿ ಆಹಾರಕ್ರಮ ಕೂಡ ಒಂದು ಕಾರಣ. ಅಧಿಕ ಪ್ರೊಟೀನ್ ಇರುವ ಅಡುಗೆ ಮಾಡಿ ತಿಂದರೆ ತೂಕ ಹಿತಮಿತವಾಗಿ ಇರುವುದು. ಡಯಟ್ ಮಾಡುವವರು ಪ್ರೊಟೀನ್ ಇರುವ ಆಹಾರಗಳ ಬಗ್ಗೆ ಗಮನವಹಿಸದಿದ್ದರೆ ದೇಹದ ಶಕ್ತಿ ಕುಂದುವುದು. ಆದ್ದರಿಂದ ದೇಹಕ್ಕೆ ಶಕ್ತಿಯುತವಾದ ಮತ್ತು ಬಾಯಿಗೆ ರುಚಿಕರವಾದ ಆಹಾರಕ್ರಮ ನಿಮ್ಮದಾಗಿರಲಿ. ಇವತ್ತು ನಾವು ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸುವ ರುಚಿಕರವಾದ ಖಾದ್ಯದ ಬಗ್ಗೆ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* 1/4 ಕಪ್ ಬೀನ್ಸ್
* 1/4 ಕಪ್ ಬಟಾಣಿ
* 1/4ಕಪ್ ಸೋಯಾ
* 1/4 ಕಪ್ ತೊಗರಿ ಬೇಳೆ
* ಪಾಲಾಕ್ ಸೊಪ್ಪು (ಕತ್ತರಿಸಿದ್ದು)
* ರುಚಿಗೆ ತಕ್ಕ ಉಪ್ಪು
* ನಿಂಬೆ ಹಣ್ಣು
* 1 ಚಮಚ ಎಣ್ಣೆ
* 1 ಚಮಚ ಸಾಸಿವೆ ಎಣ್ಣೆ
* ಕರಿಬೇವಿನ ಎಲೆ

ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು:
* 5-6 ಹಸಿಮೆಣಸು
* 1/2 ಹೋಳು ತುರಿದ ತೆಂಗಿನಕಾಯಿ
* 1 ಚಮಚ ಜೀರಿಗೆ
* 1/2 ಚಮಚ ಶುಂಠಿ ಪೇಸ್ಟ್
* 1/2 ಚಮಚ ಕೊತ್ತಂಬರಿ ಬೀಜ
* 1/4 ಚಮಚ ಮೆಂತೆ ಕಾಳು

ತಯಾರಿಸುವ ವಿಧಾನ:
1. ಎಲ್ಲಾ ಧಾನ್ಯಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಬೇಕು.
2. ಮಸಾಲ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಅರೆಯಬೇಕು.
3. ಈಗ ಮಸಾಲೆಯನ್ನು ಬೇಯಿಸಿದ ತರಕಾರಿ ಜೊತೆ ಮಿಶ್ರ ಮಾಡಿ ಬೇಯಿಸಬೇಕು.
4. ಈಗ ರುಚಿಗೆ ತಕ್ಕ ಉಪ್ಪು ಮತ್ತು 1 ಚಮಚ ನಿಂಬೆರಸ ಸೇರಿಸಬೇಕು.

ರೆಡಿಯಾದ ಸ್ವಲ್ಪ ಗಟ್ಟಿಯಾಗಿರುವ ಸಾರಿಗೆ 1 ಚಮಚ ಎಣ್ಣೆಗೆ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ಹಾಕಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಸಾರು ರೆಡಿ.

English summary

Tasty Recipe For Control Weight | Legume Curry Recipe | ತೂಕವನ್ನು ನಿಯಂತ್ರಣದಲ್ಲಿಡುವ ಅಡುಗೆ | ದ್ವಿದಳ ಧಾನ್ಯಗಳ ಅಡುಗೆ

The side dish for the oil free chapathi or wheat bread will have to be nutritious, and tasty. Today, we are to present a healthy legume curry. The legume recipe contains four different varieties and can also be called a protein rich recipe.
Story first published: Monday, February 27, 2012, 12:58 [IST]
X
Desktop Bottom Promotion