For Quick Alerts
ALLOW NOTIFICATIONS  
For Daily Alerts

ಈ ಬದನೆಕಾಯಿ ಗೊಜ್ಜು ಖಾರ ಪ್ರಿಯರಿಗೆ ಮಾತ್ರ

|

ಬದನೆಕಾಯಿ ಗೊಜ್ಜನ್ನು ತರಾವರಿ ರುಚಿಯಲ್ಲಿ ತಯಾರಿಸಬಹುದು. ಆಹಾರ ವಿಷಯದಲ್ಲಿ ಒಬ್ಬೊಬ್ಬರ ಬಾಯಿ ರುಚಿ ಒಂದೊಂದು ರೀತಿ ಇರುತ್ತದೆ. ಅಡುಗೆ ಖಾರವಿದ್ದರೆ ಮಾತ್ರ ರುಚಿಯಪ್ಪಾ ಅನ್ನುವ ಖಾರ ಪ್ರಿಯರಿಗಾ ಈ ಬದನೆಕಾಯಿ ಗೊಜ್ಜಿನ ರೆಸಿಪಿ ನೀಡಿದ್ದೇವೆ.

ಇದನ್ನು ಮಾಡುವ ವಿಧಾನ ಸರಳವಾಗಿದ್ದು, ರೆಸಿಪಿಗೆ ಮುಂದೆ ಓದಿ:

ಬೇಕಾಗುವ ಸಾಮಾಗ್ರಿಗಳು
ಬದನೆಕಾಯಿ 4-5 (ಸಾಧಾರಣ ಗಾತ್ರದ್ದು)
ಈರುಳ್ಳಿ 2
ಕಡಲೆ ಬೇಳೆ 1 ಚಮಚ
ಕೊತ್ತಂಬರಿ ಬೀಜ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಒಣ ಮೆಣಸು 5-6
ಸಾಸಿವೆ 1/2 ಚಮಚ
ಸ್ವಲ್ಪ ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ಬದನೆಕಾಯಿ ಶುದ್ಧ ಮಾಡಿ ಅದನ್ನು ಉದ್ದುದ್ದವಾಗಿ ಕತ್ತರಿಸಿ.

* ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಒಣ ಮೆಣಸು, ಕೊತ್ತಂಬರಿ ಬೀಜ, ಕಡಲೆ ಹಾಕಿ ಕೊತ್ತಂಬರಿ ಬೀಜ ಮತ್ತು ಕಡಲೆ ಬೀಜ ಬಣ್ಣ ಸ್ವಲ್ಪ ಬದಲಾಗುವವರೆಗೆ ಹುರಿದು ನಂತರ ಉರಿಯಿಂದ ತೆಗೆದು ಆರಲು ಇಡಿ.

* ತಣ್ಣಗಾದ ಮೇಲೆ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ, ಅರಿಶಿಣ ಸೇರಿಸಿ ರುಬ್ಬಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಿಟುಗುಟ್ಟುವಾಗ ಕರಿಬೇವಿನ ಎಲೆ ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ , ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರಗೆ ಹುರಿಯಿರಿ. ಈಗ ಕತ್ತರಿಸಿದ ಬದನೆಕಾಯಿ ಹಾಕಿ ಮತ್ತೆ 3-4 ನಿಮಿಷ ಹುರಿಯಿರಿ, ರುಚಿಗೆ ತಕ್ಕ ಉಪ್ಪನ್ನು ಸೇರಿಸಿ, ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಬೇಕಿದ್ದರೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ.

* ನಂತರ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ಹೀಗೆ ಬೇಯಿಸುವಾಗ 5 ನಿಮಿಷಕ್ಕೊಮ್ಮೆ ಪಾತ್ರೆಯ ಮುಚ್ಚಳ ತೆಗೆದು ಬದನೆಕಾಯಿಯನ್ನು ಸೌಟ್ ನಿಂದ ಆಡಿಸಲು ಮರೆಯಬೇಡಿ.

* ಬದನೆಕಾಯಿ ಬೆಂದ ನಂತರ ಉರಿಯಿಂದ ಇಳಿಸಿದರೆ ಬದನೆಕಾಯಿ ಗೊಜ್ಜು ರೆಡಿ.

English summary

Spicy Eggplant Recipe

This spicy eggplant recipe is stir-fried with lot of onions and aromatic spices. You do not need a lot of ingredients for this delicious vegetarian recipe. The special flavour to this dish is added by the freshly powdered chana dal or bengal gram dal. This recipe is extremely easy and gets done in minutes.
X
Desktop Bottom Promotion