For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ 10 ಪಂಜಾಬಿ ಖಾದ್ಯಗಳು!

|

ಪಂಜಾಬ್ ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಕೃಷಿ, ಉದ್ಯಮ ಹೀಗೆ ಒಂದಿಲ್ಲೊಂದು ರಂಗದಲ್ಲಿ ಪಂಜಾಬ್ ಹೆಸರುವಾಸಿಯಾಗಿದೆ. ಇನ್ನು ಅಡಿಗೆಯ ವಿಷಯಕ್ಕೆ ಬಂದರಂತೂ ಪಂಜಾಬ್ ಖಾದ್ಯಗಳು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ತಂದೂರಿಯ ವಿಸ್ಮಯಕಾರಿ ಸ್ವಾದ ಜಗತ್ತಿಗೆ ಕಾಲಿಟ್ಟದ್ದೇ ಪಂಜಾಬಿಗಳಿಂದ ಎಂಬುದು ಇಲ್ಲಿ ಸ್ತುತ್ಯರ್ಹ.

ರಾಜ್ಮಾ, ಚೋಲೆ ಬಟೂರೆ, ಟಿಕ್ಕಾ, ಸಾಗ್ ಮುಂತಾದ ರುಚಿಕರವಾದ ರೆಸಿಪಿ ಪಟ್ಟಿಯೇ ಪಂಜಾಬಿಗಳಿಂದ ಚಾಲ್ತಿಯಲ್ಲಿದೆ. ಭಾರತಕ್ಕೆ ಈ ರೆಸಿಪಿಗಳ ಆಗಮನವಾದದ್ದೇ ಪಂಜಾಬಿಗಳಿಂದ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾತ್ರಿಗೆ ಮಸಾಲೆ ಬಾಡೂಟ

ಆದ್ದರಿಂದ ಇಂದಿನ ಲೇಖನದಲ್ಲಿ 10 ರುಚಿಕರ ಬಾಯಲ್ಲಿ ನೀರೂರಿಸುವ ಪಂಜಾಬಿ ಖಾದ್ಯಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಸಾಂಪ್ರದಾಯಿಕ ರುಚಿಯಾದ ಸರ್ಸೋಂಕಾ ಸಾಗ್, ಚಿಕನ್ ಬುನಾ, ರಾಜ್ಮಾ ಮಸಾಲಾ, ಫಿಶ್ ಟಿಕ್ಕಾ, ಮುಂತಾದ ಹತ್ತು ಹಲವು ಪಂಜಾಬಿ ಖಾದ್ಯಗಳು ಈ ಸಂಗ್ರಹದಲ್ಲಿ ಒಳಗೊಂಡಿವೆ.

ಈ ರುಚಿಕರ ಪಂಜಾಬಿ ರೆಸಿಪಿಗಳತ್ತ ನೋಟ ಹರಿಸಿ ಮತ್ತು ಇವುಗಳನ್ನು ಟ್ರೈ ಮಾಡಲು ಖಂಡಿತ ಮರೆಯದಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಟನ್ ಗ್ರೇವಿ ಜೊತೆ ಸವಿಯಲು ಮಟನ್ ದೋಸೆ

ಪಂಜಾಬಿ ಚಿಕನ್ ಮಸಾಲಾ:

ಪಂಜಾಬಿ ಚಿಕನ್ ಮಸಾಲಾ:

ಪಂಜಾಬ್‌ನಲ್ಲಿ ಚಿಕನ್ ಪದಾರ್ಥವನ್ನು ತುಸು ಖಾರವಾಗಿ ತಯಾರಿಸುತ್ತಾರೆ. ಚಿಕನ್ ತಯಾರಿಸಲು ಬಳಸುವ ಮಸಾಲೆ ಪಂಜಾಬ್‌ನ ಸಾಂಪ್ರದಾಯಿಕ ರುಚಿಯನ್ನು ಹೊಂದಿದ್ದು ಬಾಯಲ್ಲಿ ನಿರೂರಿಸುತ್ತದೆ.

<a href=ಪಂಜಾಬಿ ರಾಜ್ಮಾ ಕರಿ: " title="ಪಂಜಾಬಿ ರಾಜ್ಮಾ ಕರಿ: " class="sliderImg image_listical" width="600" height="338" loading="lazy"/>

ಪಂಜಾಬಿ ರಾಜ್ಮಾ ಕರಿ:

ಉತ್ತರ ಭಾರತದ ರಾಜ್ಮಾ ತಯಾರಿಸಲು ಹಲವಾರು ವಿಧಾನಗಳಿವೆ. ಕಿಡ್ನಿ ಬೀನ್ಸ್ ಮತ್ತು ಹೆಚ್ಚಿನ ಮಸಾಲೆಗಳನ್ನು ಬಳಸಿ ರುಚಿಕರ ರಾಜ್ಮಾವನ್ನು ಸಿದ್ಧಪಡಿಸಲಾಗುತ್ತದೆ.

<a href=ಪಂಜಾಬಿ ಅಂಡಾ ಮಸಾಲೆ " title="ಪಂಜಾಬಿ ಅಂಡಾ ಮಸಾಲೆ " class="sliderImg image_listical" width="600" height="338" loading="lazy"/>

ಪಂಜಾಬಿ ಅಂಡಾ ಮಸಾಲೆ

ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಪಂಜಾಬಿ ಅಂಡಾ ಮಸಾಲಾ ನಿಮ್ಮ ಬಾಯಲ್ಲಿ ನೀರೂರಿಸುವುದು ಖಂಡಿತ. ಇದಕ್ಕೆ ಬಾಕಾಗಿರುವುದು ಬೇಯಿಸಿ ಮೊಟ್ಟೆ.

ದಮ್ ಆಲೂ ಅಮೃತ್‌ಸಾರಿ

ದಮ್ ಆಲೂ ಅಮೃತ್‌ಸಾರಿ

ದಮ್ ಆಲೂ ಅಮೃತ್‌ಸಾರಿಯನ್ನು ಬೇಬಿ ಆಲೂಗಡ್ಡೆ ಬಳಸಿ ತಯಾರಿಸಲಾಗುತ್ತದೆ. ಆಲೂಗಡ್ಡೆಗಳನ್ನು ಚೆನ್ನಾಗಿ ಹುರಿದು ಮಸಾಲೆ ಗ್ರೇವಿಯಲ್ಲಿ ಬೇಯಿಸುವುದು ಈ ರೆಸಿಪಿ ತಯಾರಿಯ ವಿಧಾನವಾಗಿದೆ.

ಚಿಕನ್ ಬುನಾ

ಚಿಕನ್ ಬುನಾ

ಸಾಮಾನ್ಯ ಮಸಾಲೆಗಳನ್ನು ಬಳಸಿ ಅತಿ ಸುಲಭವಾಗಿ ಚಿಕನ್ ಬುನಾವನ್ನು ತಯಾರಿಸಬಹುದು. ಈ ಮಸಾಲೆಗಳನ್ನು ನೀವು ಬಳಸುವ ರೀತಿ ಮತ್ತು ಅವುಗಳನ್ನು ಸೇರಿಸುವ ವಿಧಾನ ನಿಮಗೆ ತಿಳಿದಿರಬೇಕು. ಚಿಕನ್ ಬುನಾಕ್ಕೆ ಹುಡಿ ಮಾಡಿದ ಮತ್ತು ಇಡೀ ಮಸಾಲೆಯನ್ನು ಬಳಸಲಾಗುತ್ತದೆ. ಎಲ್ಲಾ ಸಾಮಾಗ್ರಿಗಳು ಸಿದ್ಧವಾಗಿದ್ದರೆ ಅರ್ಧಗಂಟೆಯಲ್ಲಿ ಚಿಕನ್ ಬುನಾವನ್ನು ತಯಾರಿಸಬಹುದು.

<a href=ತಂದೂರಿ ಫಿಶ್ ಟಿಕ್ಕಾ " title="ತಂದೂರಿ ಫಿಶ್ ಟಿಕ್ಕಾ " class="sliderImg image_listical" width="600" height="338" loading="lazy"/>

ತಂದೂರಿ ಫಿಶ್ ಟಿಕ್ಕಾ

ತಂದುರಿ ಫಿಶ್ ಟಿಕ್ಕಾ ಮೂಲತಃ ಪಂಜಾಬಿ ರೆಸಿಪಿಯಾಗಿದ್ದು ತಂದೂರಿ ಮಸಾಲೆಯಲ್ಲಿ ಮುಳುಗಿಸಿದ ಮೀನನ್ನು ಗ್ರಿಲ್ ಮಾಡಿ ಈ ರೆಸಿಪಿಯನ್ನು ಸಿದ್ಧಪಡಿಸುತ್ತಾರೆ. ಮೈಕ್ರೋವೇವ್‌ನಲ್ಲಿ ಮೀನನ್ನು ಗ್ರಿಲ್ ಮಾಡಿ ಇದನ್ನು ತಯಾರಿಸಬಹುದು.

ಸರ್ಸೋಂಕಾ ಕಾ ಸಾಗ್

ಸರ್ಸೋಂಕಾ ಕಾ ಸಾಗ್

ಪಂಜಾಬ್‌ನಲ್ಲಿ ಸಿಗುವ ಸಾಸಿವೆ ಎಲೆಗಳಿಂದ ಸರ್ಸೋಂಕಾ ಸಾಗ್ ಅನ್ನು ಸಿದ್ಧಪಡಿಸುತ್ತಾರೆ. ಪರಿಮಳ ಭರಿತ ಮಸಾಲೆಗಳನ್ನು ಬಳಸಿ ದಪ್ಪನೆ ಕಡೆದು ಈ ಕ್ರೀಮೀ ಕರಿಯನ್ನು ಸಿದ್ಧಪಡಿಸುತ್ತಾರೆ.

<a href=ತಂದೂರಿ ಫಿಶ್ ಮಸಾಲೆ " title="ತಂದೂರಿ ಫಿಶ್ ಮಸಾಲೆ " class="sliderImg image_listical" width="600" height="338" loading="lazy"/>

ತಂದೂರಿ ಫಿಶ್ ಮಸಾಲೆ

ಸಾಂಪ್ರದಾಯಿಕವಾಗಿ, ಮೀನನ್ನು ತಂದೂರಿ ಮಸಾಲೆಯಲ್ಲಿ ಮುಳುಗಿಸಿ ನಂತರ ತಂದೂರ್‌ನಲ್ಲಿ ಬೇಯಿಸಲಾಗುತ್ತದೆ. ಕೆಲವರು ತಮ್ಮ ಮನೆಯಲ್ಲಿ ತಂದೂರ್ ಒಲೆಗಳನ್ನು ಹೊಂದಿರುತ್ತಾರೆ.

ಮಟನ್ ಸಾಗ್‌ವಾಲಾ

ಮಟನ್ ಸಾಗ್‌ವಾಲಾ

ಗಾಢ ಹಸಿರು ವರ್ಣದ ಕರಿ ಮತ್ತು ಮಟನ್ ತುಂಡುಗಳು ಮಟನ್ ಸಾಗ್‌ವಾಲಾದ ವಿಶೇಷತೆಯಾಗಿದೆ. ಸಾಗ್ ಒಂದು ಬಗೆಯ ಸಾಂಬಾರು ಪದಾರ್ಥವಾಗಿದ್ದು ವಿಶೇಷವಾಗಿ ಮಟನ್ ಸಾಗ್‌ವಾಲಾ ರೆಸಿಪಯಲ್ಲಿ ಬಳಸುತ್ತಾರೆ.

<a href=ರಾಜ್ಮಾ ಮಖನಿ " title="ರಾಜ್ಮಾ ಮಖನಿ " class="sliderImg image_listical" width="600" height="338" loading="lazy"/>

ರಾಜ್ಮಾ ಮಖನಿ

ಇತರ ರಾಜ್ಮಾ ರೆಸಿಪಿಗಳಿಗೆ ಹೋಲಿಸಿದಾಗ ರಾಜ್ಮಾ ಮಖನಿ ಒಂದು ವಿಶೇಷ ಪಂಜಾಬಿ ರೆಸಿಪಿಯಾಗಿದೆ. ರಾತ್ರಿ ಪೂರ್ತಿ ನೆನೆಸಿ ಮರುದಿನ ಈ ರಾಜ್ಮಾ ರೆಸಿಪಿಯನ್ನು ಸಿದ್ಧಪಡಿಸುತ್ತಾರೆ. ಕೆಂಪು ಕಿಡ್ನಿ ಬಿನ್ಸ್ ಮತ್ತು ತೊಗರಿಬೇಳೆ ಸಂಯೋಜನೆಯಲ್ಲಿ ಇದನ್ನು ತಯಾರಿಸುತ್ತಾರೆ.

English summary

10 Sumptuous Punjabi Recipes To Try

Punjabi delicacies are popular throughout the country. The Punjabis introduced us to the wonderful world of Tandoor, our very own Indian barbecue. Not only that they introduced us to the amazing taste of Rajma, Choley Bhature, tikkas, saag and so many other lip smacking dishes.&#13;
Story first published: Friday, March 7, 2014, 13:16 [IST]
X
Desktop Bottom Promotion