Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಂಜಾಬಿ ಮೊಟ್ಟೆ ಮಸಾಲ ರೆಸಿಪಿ
ನೀವು ಮನೆಯಲ್ಲಿ ಒಬ್ಬರೆ ಇದ್ದಾಗ ಅಥವ ಮನೆ ತಲುಪುವುದು ತಡವಾದಾಗ ಅಡುಗೆ ಮಾಡಲು ಕಷ್ಟವೆನಿಸಿದಾಗ ನಿಮ್ಮ ಕೆಲಸ ಸುಲಭ ಮಾಡಿ ನಿಮ್ಮ ಕೈ ಹಿಡಿಯುವುದು ಮೊಟ್ಟೆ. ಇದನ್ನು ಬಳಸಿ ಸುಲಭವಾಗಿ ಅಡುಗೆ ಮಾಡಬಹುದು. ಇದನ್ನು ಆರೊಗ್ಯಕ್ಕೆ ಒಳ್ಳೆಯದು ಮತ್ತು ಮಕ್ಕಳು ಕೂಡ ಇಷ್ಟ ಪಡುತ್ತಾರೆ.
ಈವತ್ತು ಮೊಟ್ಟೆ ಬಳಸಿ ಸುಲಭವಾಗಿ ಮಾಡಬಹುದಾದ ಒಂದು ಹೊಸ ರುಚಿಯನ್ನು ನಿಮಗೆ ಕೊಡುತ್ತಿದ್ದೇವೆ. ಪಂಜಾಬಿ ಮೊಟ್ಟೆ ಮಸಾಲ ಕಡಿಮೆ ಸಮಯದಲ್ಲಿ ಮಾಡಬಹುದಾದ ಅಡುಗೆ. ಮೊಟ್ಟೆಯನ್ನು ಬೇಯಿಸಿ ಮಸಾಲೆ ಪದಾರ್ಥಗಳನ್ನು ಸೇರಿಸಿಬಿಟ್ಟರೆ ಮುಗಿಯಿತು.

ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ- 4 (ಬೇಯಿಸಿ ಸಿಪ್ಪೆ ಬಿಡಿಸಿಕೊಳ್ಳಿ)
2. ಈರುಳ್ಳಿ- 1 (ಹೆಚ್ಚಿಕೊಳ್ಳಿ)
3. ಬೇ ಲೀಫ್- 1
4. ಜೀರಿಗೆ - 1 ಟೀಚಮಚ
5. ಟೊಮೊಟೊ ರಸ- 1 ಟೀಚಮಚ
6. ಅಚ್ಚ ಖಾರದ ಪುಡಿ- 1 ಟೀಚಮಚ
7. ಧನಿಯ ಪುಡಿ- 1 ಟೀಚಮಚ
8. ಅರಿಶಿಣ ಪುಡಿ- 1/2 ಟೀಚಮಚ
9. ಅಮ್ ಚೂರ್ (ಒಣಗಿದ ಮಾವಿನ) ಪುಡಿ- 1 ಟೀಚಮಚ
10. ಕಸೊರಿ ಮೇತಿ- 1 ಟೀಚಮಚ (ಪುಡಿಮಾಡಿಕೊಳ್ಳಿ)
11. ಉಪ್ಪು- ರುಚಿಗೆ ತಕ್ಕಷ್ಟು
12. ಗರಂ ಮಸಾಲ ಪುಡಿ- 1/2 ಟೀಚಮಚ
13. ಎಣ್ಣೆ- 2 ಟೀಚಮಚ
14. ನೀರು- 1 ಕಪ್
ಮಸಾಲೆ ಪೇಸ್ಟ್ ತಯಾರಿಸಿಕೊಳ್ಳಲು
1.ಈರುಳ್ಳಿ- 2
2. ಹಸಿಮೆಣಸಿನ ಕಾಯಿ- 2
3. ಶುಂಠಿ- 1 ಮಧ್ಯಮ ಗಾತ್ರದ ತುಂಡು
4. ಬೆಳ್ಳುಳ್ಳಿ- 5 ಎಸಳು
5. ಲವಂಗ- 2
6. ದಾಲ್ಚಿನ್ನಿ- 1
7. ಸೊಂಪು- 1 ಟೀಚಮಚ
8. ಟೊಮೆಟೊ- 2
ಮಾಡುವ ವಿಧಾನ
1. ಮಸಾಲೆ ಪೇಸ್ಟ್ ಮಾಡಲು ಮೇಲೆ ಹೇಳಿರುವ ಸಾಮಗ್ರಿಗಳನ್ನೆಲ್ಲ ರುಬ್ಬಿಕೊಳ್ಳಿ.
2. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಬೇ ಲೀಫ್, ಈರುಳ್ಳಿ ಹಾಕಿ 3-4 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ.
3. ನಂತರ ಅರಿಶಿಣ ಪುಡಿ, ಅಚ್ಚ ಖಾರದ ಪುಡಿ, ಧನಿಯ ಪುಡಿ, ಒಣ ಮಾವಿನಕಾಯಿ ಪುಡಿ, ಟೊಮೆಟೊ ರಸ ಹಾಕಿ 4-5 ನಿಮಿಷ ಹುರಿಯಿರಿ.
4. ಇದಕ್ಕೆ ಮಸಾಲೆ ಪೇಸ್ಟ್ ಸೇರಿಸಿ 5-6 ನಿಮಿಷ ಬೇಯಿಸಿ.
5. ನಂತರ ಉಪ್ಪು, ಗರಂ ಮಸಾಲ ಬೆರೆಸಿ 2-3 ನಿಮಿಷ ಬೇಯಿಸಿ.
6. ಇದಕ್ಕೆ ನೀರು ಮತ್ತು ಬೇಯಿಸಿದ ಮೊಟ್ಟೆ ಸೇರಿಸಿ ಚೆನ್ನಾಗಿ ಕಲಸಿ.
7. ಈ ಮಿಶ್ರಣವನ್ನು 5-6 ನಿಮಿಷ ಮಂದ ಉರಿಯಲ್ಲಿ ಕುದಿಸಿ.
8.ಕಸೊರಿ ಮೇತಿಯನ್ನು ಪುಡಿಮಾಡಿ ಇದರೊಂದಿಗೆ ಬೆರೆಸಿ.
9. ಚೆನ್ನಾಗಿ ಕಲಸಿ ಒಲೆಯನ್ನು ಆರಿಸಿ.
ಜೀರಾ ರೈಸ್ ಅಥವ ಪರಾಟಗಳೊಂದಿಗೆ ತಿನ್ನಲು ಪಂಜಾಬಿ ಮೊಟ್ಟೆ ಮಸಾಲ ರುಚಿಕರವಾಗಿರುತ್ತದೆ.



Click it and Unblock the Notifications
