For Quick Alerts
ALLOW NOTIFICATIONS  
For Daily Alerts

2 ಬಗೆಯ ಶುಂಠಿ ಸೂಪ್- ಚಳಿಗಾಲದ ರೆಸಿಪಿ

|

ಚಳಿಗಾಲದಲ್ಲಿ ಶೀತ, ಕೆಮ್ಮು, ಗಂಟಲು ಕೆರೆತ ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆವಹಿಸಬೇಕು. ಅದರಲ್ಲು ಚಳಿಗಾಲಕ್ಕೂ ಮತ್ತು ಶುಂಠಿಗೂ ಬಹಳ ನಂಟು. ಶೀತ-ಕೆಮ್ಮಿನಂತಹ ಕಾಯಿಲೆಗಳನ್ನು ಹೊಡೆದು ಓಡಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಇಲ್ಲಿ ನಾವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ 2 ಬಗೆಯ ಶುಂಠಿ ಸೂಪ್ ನ ರೆಸಿಪಿ ನೀಡಲಾಗಿದೆ ನೋಡಿ:

Ginger Soup Recipes To Fight Cold

ಶುಂಠಿ ಸೂಪ್ 1:
ಬೇಕಾಗುವ ಸಾಮಾಗ್ರಿಗಳು:
ಪುಡಿ ಮಾಡಿದ ಶುಂಠಿ 5 ಚಮಚ
ನೀರು 2 ಕಪ್
ಜೇನು ಒಂದೂವರೆ ಚಮಚ ಅಥವಾ 2 ಚಮಚ
ನಿಂಬೆ ರಸ 2 ಚಮಚ

ತಯಾರಿಸುವ ವಿಧಾನ:

* ನೀರನ್ನು ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಶುಂಠಿಯನ್ನು ಹಾಕಿ ಸಾಧಾರಣ ಉರಿಯಲ್ಲಿ 4-5 ನಿಮಿಷ ಕುದಿಸಬೇಕು. ಹೀಗೆ ಕುದಿಸುವಾಗ ಸೌಟ್ ನಿಂದ ಆಗಾಗ ತಿರುಗಿಸುತ್ತಾ ಇರಬೇಕು.

* ನಂತರ ಜೇನು ಮತ್ತು ನಿಂಬೆ ರಸ ಹಾಕಿ ಉರಿಯಿಂದ ತೆಗೆದು ಸ್ವಲ್ಪ ಉರಿಯಿಂದ ತೆಗೆದು ಬಿಸಿಬಿಸಿಯಾಗಿ ಕುಡಿದರೆ ರುಚಿಯಾಗಿರುತ್ತದೆ ಮಾತ್ರವಲ್ಲ ಶೀತ, ಕೆಮ್ಮು ಇದ್ದರೆ ಮೈಲಿ ದೂರ ಓಡಿ ಹೋಗಿ ಬಿಡುತ್ತದೆ.

ಶುಂಠಿ ಸೂಪ್ 2:

ಬೇಕಾಗುವ ಸಾಮಾಗ್ರಿಗಳು:

ಕ್ಯಾರೆಟ್ 3
2 ಇಂಚಿನಷ್ಟು ದೊಡ್ಡದಿರುವ ಶುಂಠಿ
ಈರುಳ್ಳಿ 2
ತರಕಾರಿಗಳು 1 ಕಪ್
ಕಿತ್ತಳೆ ರಸ 3/4 ಕಪ್
ರುಚಿಗೆ ತಕ್ಕ ಉಪ್ಪು
ಕರಿಮೆಣಸಿನ ಪುಡಿ 1 ಚಮಚ
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

1. ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ನಂತರ ಈರುಳ್ಳಿ ಮತ್ತು ಶುಂಠಿ ಹಾಕಿ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

2. ಈಗ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ತರಕಾರಿ ಹಾಕಿ ತರಕಾರಿ ಬೇಯುವಷ್ಟು ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ, ನೀರಿನಂಶ ಕಡಿಮೆಯಾಗಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಬೇಕು. ಈಗ ಕಿತ್ತಳೆ ರಸವನ್ನು ಸೇರಿಸಿ 2-3 ನಿಮಿಷ ಕುದಿಸಬೇಕು. ಈಗ ಪಾತ್ರೆಯನ್ನು ಉರಿಯಿಂದ ತೆಗೆದು ತಣ್ಣಗಾಗಲು ಇಡಬೇಕು. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಪಾತ್ರೆಯಲ್ಲಿ ಹಾಕಿ ಪುನಃ ಉರಿ ಮೇಲೆ ಇಟ್ಟು ಕುದಿಸಬೇಕು. ಹೀಗೆ ಕುದಿಸುವಾಗ ಕರಿಮೆಣಸಿನ ಪುಡಿ ಸೇರಿಸಿ.

ಇದನ್ನು ಬಿಸಿ ಬಿಸಿಯಾಗಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ ಹಾಗೂ ಗಂಟಲು ಕೆರೆತ, ಕೆಮ್ಮು ಈ ರೀತಿಯ ತೊಂದರೆಗಳು ಶಮನವಾಗುವುದು.

English summary

Ginger Soup Recipes To Fight Cold | Variety Of Soup Recipe | ಶುಂಠಿ ಸೂಪ್ ರೆಸಿಪಿ | ಅನೇಕ ಬಗೆಯ ಸೂಪ್ ರೆಸಿಪಿ

Ginger has many medicinal properties that boost up body immunity to fight cold and cough. It is said that if you have ginger with honey then you can prevent cold and cough problems.When we are talking about hot soups and tea, here are the two easy to make ginger soup recipes.
X
Desktop Bottom Promotion