For Quick Alerts
ALLOW NOTIFICATIONS  
For Daily Alerts

ಹಸಿವು ಹೆಚ್ಚಿಸುವ ಬೀಟ್ರೂಟ್ ಸೂಪ್

By * ಸಾವಿತ್ರಿ, ಬೆಂಗಳೂರು
|
Beetroot
ಕೆಂಪು ಕೆಂಪು ಬೀಟ್ರೂಟಿನ ಹುಳಿ, ಪಲ್ಯ ಮಾಡಿ ಅಥವಾ ಬರೀ ಹಸಿಹಸಿಯಾಗಿ ತಿಂದು ರುಚಿ ನೋಡಿರಬಹುದು. ಇದೇ ಬೀಟ್ರೂಟಿನಿಂದ ರುಚಿಕಟ್ಟಾದ ಸೂಪ್ ಕೂಡ ಮಾಡಬಹುದು. ತಯಾರಿಕೆ ಕೂಡ ಸರಳವಾಗಿದೆ.

ಬೇಕಾಗುವ ಪದಾರ್ಥಗಳು

ಮೂರು ಬೀಟ್ರೂಟ್ (ಆರು ಜನರಿಗಾಗುವಷ್ಟು)
ಬೆಣ್ಣೆ ಅರ್ಧ ಬಟ್ಟಲು
ಬಾಸುಮತಿ ಅಕ್ಕಿ ಅರ್ಧ ಹಿಡಿಯಷ್ಟು
ನೀರು ನಾಲ್ಕರಿಂದ ಆರು ಲೋಟ
ಉಪ್ಪು
ಮೆಣಸಿನಪುಡಿ

ತಯಾರಿಸುವ ವಿದಾನ

ಬೀಟ್ರೂಟನ್ನು ಚೆನ್ನಾಗಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಯಿಡಿ. ನೆನೆದ ಬೀಟ್ರೂಟನ್ನು ಹೊರತೆಗೆದು ಅದರ ಹೊರಭಾಗವನ್ನು ಸಂಪೂರ್ಣವಾಗಿ ಸುಲಿದು ಒಂದು ತಟ್ಟೆಯಲ್ಲಿ ತುರಿದಿಟ್ಟುಕೊಳ್ಳಿ.

ತುರಿದ ಬೀಟ್ರೂಟ್, ಬೆಣ್ಣೆ ಮತ್ತು ಬಾಸುಮತಿ ಅಕ್ಕಿಯನ್ನು ಬೆರೆಸಿ ಅಕ್ಕಿ ಮೆದುವಾಗುವವರೆಗೆ ಚೆನ್ನಾಗಿ ಬೇಯಿಸಿ. ಬೆಂದು ಬಂದ ಮಿಶ್ರಣವನ್ನು ಸೋಸಿ ತೆಗೆದು ಅದಕ್ಕೆ ಉಪ್ಪು ಮತ್ತು ಮೆಣಸಿನಪುಡಿಯನ್ನು ಚಿಮುಕಿಸಿ ಬಿಸಿಬಿಸಿಯಾಗಿ ಸೇವಿಸಿರಿ. ಬೇಕಿದ್ದರೆ ಮತ್ತೊಂದಿಷ್ಟು ಬೆಣ್ಣೆಯನ್ನು ಸೂಪಿಗೆ ಹಾಕಿಕೊಳ್ಳಬಹುದು. ಇದು ಆರೋಗ್ಯಕರ ಮಾತ್ರವಲ್ಲ ಹಸಿವನ್ನು ಹೆಚ್ಚಿಸುತ್ತದೆ.

Story first published: Tuesday, April 6, 2010, 18:08 [IST]
X
Desktop Bottom Promotion