For Quick Alerts
ALLOW NOTIFICATIONS  
For Daily Alerts

1ರುಪಾಯಿಗೆ ಇಡ್ಲಿ, 1ರುಪಾಯಿಗೆ ದೋಸೆ

By Mahesh
|
Idli and dosa, for just one rupee apiece
ಬೆಂಗಳೂರಿನ ಕಂದಾಯ ಭವನದ ಎದುರಿಗಿರುವ ಕಬ್ಬನ್ ಪೇಟೆ ಬಿರಿಯಾನಿ ಬಜಾರ್ಒಂದು ವರ್ಷವನ್ನು ಪೂರೈಸಿದ್ದು, ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ 'ಬೊಂಬಾಟ್ ಬ್ರೇಕ್ ಫಾಸ್ಟ್' ಅನ್ನು ಹಮ್ಮಿಕೊಂಡಿದೆ.

ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ 1 ರುಪಾಯಿಗೆ ಇಡ್ಲಿ ಹಾಗೂ 1 ರುಪಾಯಿಗೆ ದೂಸೆಯನ್ನು ನೀಡಬಯಸಿದೆ. ದಿನಾಂಕ 27/07/2010 ರಿಂದ ಈ ಯೋಜನೆ ಆರಂಭಗೊಂಡು ಸತತ ಆರು ತಿಂಗಳ ಕಾಲ ಇಡ್ಲಿ-ದೋಸೆ ಪ್ರಿಯರಿಗೆ ನೀಡಲಿದ್ದಾರೆ.

ಬೊಂಬಾಟ್ ಬ್ರೇಕ್ ಫಾಸ್ಟ್ ನ1 ರುಪಾಯಿ ಇಡ್ಲಿ, 1 ರುಪಾಯಿ ದೋಸೆ ಯೋಜನೆ ಪ್ರತಿದಿನ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ನೀಡಲಾಗುತ್ತದೆ. ಇಡ್ಲಿ-ದೋಸೆಯ ಗಾತ್ರ, ತೂಕದಲ್ಲಿ ವ್ಯತ್ಯಾಸವಿಲ್ಲ. (50 ಗ್ರಾಂ. ಇಡ್ಲಿ, 80 ಗ್ರಾಂ. ದೋಸೆ). ಇತರೆ ಆಹಾರ ಕೇಂದ್ರಗಳಲ್ಲಿ ದೊರೆಯುವಂತೆ ಗ್ರಾಹಕರಿಗೆ ನೀಡಲಾಗುತ್ತದೆ.

ಅತ್ಯುತ್ತಮ ಗುಣಮಟ್ಟ ಹಾಗೂ ರುಚಿಯನ್ನು ಹೊಂದಿರುತ್ತದೆ. ಇಡ್ಲಿ-ದೋಸೆ ಜೊತೆಗೆ ರುಚಿಕಟ್ಟಾದ ಚಟ್ನಿಯನ್ನು ನೀಡಲಾಗುತ್ತದೆ. ಮಾಂಸಹಾರಿ ಗ್ರೇವಿಗಳನ್ನು ತೆಗೆದುಕೊಳ್ಳುವವರಿಗೆ 5 ಇಡ್ಲಿ ಅಥವಾ 5 ದೋಸೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಬಿರಿಯಾನಿ ಬಜಾರ್ ನ ಮಾಲೀಕರಾದ ಎಂ.ಪುಟ್ಟರಾಜು ತಿಳಿಸಿದರು.

1 ರುಪಾಯಿಗೆ ಇಡ್ಲಿ, 1 ರುಪಾಯಿಗೆ ದೋಸೆ ನೀಡುತ್ತಿರುವುದು ಯಾವುದೇ ಲಾಭದಾಯಕವಲ್ಲ. ಇದು ಪ್ರಥಮ ವಾರ್ಷಿಕೋತ್ಸವದ ಕೊಡುಗೆಯಾಗಿದೆ. ಗ್ರಾಹಕರು ನಮ್ಮನ್ನು ಬೆಳಸಿದ್ದಾರೆ. ಅವರಿಗೆ ನಾವು ಏನಾದರೂ ನೀಡಬೇಕು ಎಂಬ ಧ್ಯೇಯಯನ್ನು ಇಟ್ಟುಕೊಂಡು ಈ ಯೋಜನೆಯನ್ನು ಆರಂಭಿಸಿದೆ.

ಆದರೆ ಗುಣಮಟ್ಟ, ಗಾತ್ರ, ರುಚಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಇದನ್ನು ಒಂದೆರಡು ದಿನಗಳಿಗೆ ಕೊಟ್ಟು ಸುಮ್ಮನಾಗುವುದಿಲ್ಲ. ಸತತವಾಗಿ 6 ತಿಂಗಳ ಕಾಲ ನೀಡುತ್ತೇನೆಂದು ಈ ಮೂಲಕ ಪ್ರಮಾಣಿಕರಿಸಿಸುತ್ತೇವೆ. ಈ ಯೋಜನೆ ಇಡ್ಲಿ-ದೋಸೆ ಪ್ರಿಯರನ್ನು ಮುದಗೊಳಿಸಲಿದೆ.

ಈಗಾಗಲೇ ಕಬ್ಬನ್ ಪೇಟೆ ಬಿರಿಯಾನಿ ಬಜಾರ್ ಸಾಕಷ್ಟು ಜನಪ್ರಿಯತೆಗೊಂಡಿದೆ. ಸಾಂಪ್ರದಾಯಿಕ ಶುದ್ಧ, ತಾಜಾ, ಆರೋಗ್ಯಪೂರ್ಣ ಮನೆ ಅಡುಗೆಯನ್ನು ಉಣಬಡಿಸುತ್ತಿದೆ. ನಮ್ಮಲ್ಲಿ ಪ್ರಯೋಗಾಲಯ ಹಾಗೂ ಆಹಾರ ತಜ್ಞರು ಇಲ್ಲದ ಕಾರಣ ಆಹಾರಕ್ಕೆ ಹಾನಿಕಾರಕ ರಾಸಾಯನಿಕ ಆಹಾರ ಸಂರಕ್ಷಕಗಳನ್ನು ಬಳಸುತ್ತಿಲ್ಲ. ದಿಢೀರ್ ರುಚಿ ಮತ್ತು ಪರಿಮಳ ನೀಡುವ ಎಂ.ಎಸ್. ಜಿ. (ಅಜಿ-ನೊ-ಮೊಟೋ)ಬಳಸುವುದಿಲ್ಲ. ಕಣ್ಣಿನ ಆಕರ್ಷಣೆಗಾಗಿ ಕಾರ್ಖಾನೆಗಳಲ್ಲಿ ಬಳಸುವ ರಾಸಾಯನಿಕ ಬಣ್ಣಗಳನ್ನು ಬಳಸುವುದಿಲ್ಲ.

ಒಂದು ವೇಳೆ ಪ್ರಯೋಗಾಲಯ ಮತ್ತು ಆಹಾರ ತಜ್ಞರು ಇಲ್ಲದೆ, ಮಿತಿ-ಪರಿಮಿತಿ ಅನುಸರಿಸದೆ ಬಳಸಿದರೆ ಕಾನೂನಿನಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ. ಕಡಿಮೆ ಬೆಲೆಯ ಹಾನಿಕಾರಕ, ಕಳಪೆ ದರ್ಜೆಯ ನಕಲಿ ಬ್ರ್ಯಾಂಡ್ ಸಾಸ್ ಗಳನ್ನು ಬಳಸುತ್ತಿಲ್ಲ. ಒಮ್ಮೆ ಕರಿದ ಎಣ್ಣೆಯಿಂದ ಮತ್ತೆ ಕರಿಯುವುದಿಲ್ಲ. ಗ್ರಾಹಕರ ಹಿತಾಸಕ್ತಿಯೇ ನಮ್ಮ ಧ್ಯೇಯ.

ಜೊತೆಗೆ ಗ್ರಾಹಕ ಜಾಗೃತಿಯತ್ತ ನಮ್ಮ ಚಿತ್ತ. ಆದ್ದರಿಂದ ನಮ್ಮ ಆಹಾರದಲ್ಲಿ ಶುದ್ಧ ನೈಸರ್ಗಿಕ ಪದಾರ್ಥಗಳನ್ನೇ ಬಳಸುತ್ತೇವೆ. ಆಹಾರ ತಯಾರಿಕೆಗೆ ಮತ್ತು ಕುಡಿಯಲು ಶುದ್ಧ ನೀರನ್ನೇ ಉಪಯೋಗಿಸುತ್ತೇವೆ ಎಂದು ಪುಟ್ಟರಾಜು ನುಡಿಯುತ್ತಾರೆ.

ಕಬ್ಬನ್ ಪೇಟೆ ಬಿರಿಯಾನಿ ಬಜಾರ್ ನಲ್ಲಿ ಸಾಂಪ್ರದಾಯಿಕ ಸೌದೆ ಒಲೆಯಲ್ಲಿ ಅಡುಗೆಯನ್ನು ಮಾಡಲಾಗುತ್ತಿದೆ. ಅಪ್ಪಟ ಗ್ರಾಮೀಣ ಶೈಲಿಯ ಸಾಂಪ್ರದಾಯಿಕ ಅಡುಗೆಯನ್ನು ಉಣಬಡಿಸುತ್ತೇವೆ. ಹಲವಾರು ಖಾದ್ಯಗಳನ್ನು ಪ್ರಾಮಾಣಿಕ ದರದಲ್ಲಿ ಗ್ರಾಹಕರಿಗೆ ಉಣಬಡಿಸುತ್ತಿದೆ.

ಈ ಯಶಸ್ಸಿಗೆ ಸಹಕಾರಿಯಾದವರು ನಮ್ಮ ಗ್ರಾಹಕರು. ಅವರೆ ನಮ್ಮ ರಾಜರು. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಕಬ್ಬನ್ ಪೇಟೆ ಬಿರಿಯಾನಿ ಬಜಾರ್ ಮಾಲೀಕ ಪುಟ್ಟರಾಜು ಪ್ರೀತಿಯಿಂದ ಹೇಳುತ್ತಾರೆ.

English summary

Cubbonpet Biryani Bazaar | Bombaat Breakfast | M.Puttaraju | Rs1Idli, Dosa | Bangalore |Food Culture | 1ರುಪಾಯಿಗೆ ಇಡ್ಲಿ, 1ರುಪಾಯಿಗೆ ದೋಸೆ

Cubbonpet Biryani Bazaar, a restaurant in downtown cubbon pet area, is about to start offering snacks, like Idli and dosa, for just one rupee apiece. The offer comes as the restaurant gears up to celebrate its first anniversary.
X
Desktop Bottom Promotion