For Quick Alerts
ALLOW NOTIFICATIONS  
For Daily Alerts

ಸಿಲಿಕಾನ್ ಸಿಟಿಯಲ್ಲಿ ಜೀ ಕನ್ನಡದ ರುಚಿ ಅಭಿರುಚಿ

By Prasad
|
Ruchi Abhiruchi in Bengaluru
ನಾಡಿನ ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಿಳೆಯರ ಮೆಚ್ಚಿನ ಅಡಿಗೆ ಕಾರ್ಯಕ್ರಮ ರುಚಿ ಅಭಿರುಚಿ ತನ್ನದೇ ಆದ ವೈಶಿಷ್ಟ್ಯತೆ ಹಾಗೂ ವಿಭಿನ್ನತೆಯಿಂದಾಗಿ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ವಿವಿಧ ಕ್ಷೇತ್ರಗಳ ಮಹಿಳೆಯರನ್ನು ವೇದಿಕೆಗೆ ಕರೆತಂದು ಅವರೊಳಗಿನ ಪಾಕ ಪ್ರವೀಣತೆಯನ್ನು ಅನಾವರಣಗೊಳಿಸಲು ಅನುವು ಮಾಡಿಕೊಟ್ಟ ಜೀ ಕನ್ನಡದ ರುಚಿ ಅಭಿರುಚಿ ಕಾರ್ಯಕ್ರಮ ಈಗ ರಾಜ್ಯದ ಎಲ್ಲಾ ಜಿಲ್ಲೆಗಳ ಮಹಿಳೆಯರಿಗೂ ಅವಕಾಶ ನೀಡುತ್ತಿದೆ.

ಪ್ರತಿ ಜಿಲ್ಲೆಯ ವಿಶೇಷ ಅಡುಗೆಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತಮ ಹಾಗೂ ವಿಶೇಷ ಪ್ರಕಾರದ ತಿಂಡಿ ತಿನಿಸುಗಳ ತಯಾರಿಕೆಯ ಬಗ್ಗೆ ರಾಜ್ಯದ ಜನತೆಗೆ ಪರಿಚಿಯಿಸುವುದೇ ರುಚಿ ಅಭಿರುಚಿ-ಡಿಸ್ಟ್ರಿಕ್ಟ್ ಚಾಲೆಂಜ್ ಸರಣಿಯ ಉದ್ದೇಶ. 29 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ ಪ್ರತಿ ಜಿಲ್ಲೆಯಲ್ಲಿಯೂ 5 ಜನರನ್ನು ಆಯ್ಕೆ ಮಾಡಿ ಅವರ ನಡುವೆ ಸ್ಪರ್ಧೆ ಏರ್ಪಡಿಸಿ ಒಬ್ಬರನ್ನು ಆ ಜಿಲ್ಲೆಯ ವಿಜೇತರೆಂದು ಘೋಷಿಸಲಾಗುವುದು. ಈ ಬಾರಿ ಸಿಲಿಕಾನ್ ಸಿಟಿ ಎಂದೇ ಖ್ಯಾತಿಗಳಿಸಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ಪರ್ಧೆ ನಡೆಯಲಿದೆ.

ಬೆಂಗಳೂರು ನಗರ ಜಿಲ್ಲೆಯ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ ಏಪ್ರಿಲ್ 6 ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಆಯ್ಕೆ ಪ್ರಕ್ರಿಯೆ ಏರ್ಪಡಿಸಲಾಗಿದೆ. ಆಡಿಷನ್ ನಡೆಯುವ ವಿಳಾಸ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಬಸವೇಶ್ವರ ಕಾಲೇಜಿನ ಪಕ್ಕ, ಕೆಇಬಿ ಸಮುದಾಯ ಭವನದ ಎದುರು, ರಾಜಾಜಿನಗರ 2ನೇ ಬ್ಲಾಕ್, ಬೆಂಗಳೂರು-560 010.

ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು 18ರಿಂದ 40 ವರ್ಷ ವಯೋಮಾನದೊಳಗಿದ್ದು ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ ಯಾವುದಾದರೂ ವಿಶೇಷ ತಿನಿಸೊಂದನ್ನು ಐದು ನಿಮಿಷದ ಅವಧಿಯಲ್ಲಿ ತಯಾರಿಸುವ ಸಾಮರ್ಥ್ಯ ಹೊಂದಿರಬೇಕು ಹಾಗೂ ತಿನಿಸು ತಯಾರಿಕೆಗೆ ಅಗತ್ಯವಿರುವ ಪದಾರ್ಥಗಳನ್ನು ಆಕಾಂಕ್ಷಿಗಳೇ ಖುದ್ದಾಗಿ ತರಬೇಕು.

ಜೀ ಕನ್ನಡ ವಾಹಿನಿ ಅಪರೂಪದ ಅವಕಾಶವೊಂದನ್ನು ನಿಮ್ಮ ಬಳಿಗೆ ತಂದಿದ್ದು ಉತ್ತಮ ತಿಂಡಿ ತಿನಿಸುಗಳನ್ನು ತಯಾರಿಸುವ ಮಹಿಳೆಯರು ಈ ಅವಕಾಶ ಸದುಪಯೋಗ ಮಾಡಿಸಿಕೊಳ್ಳಬಹುದಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9742191586, 9900149970 ಸಂಚಾರಿವಾಣಿಗಳನ್ನು ಅಥವಾ 080-26860292 ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.

ಮಾಧ್ಯಮ ಸಂಪರ್ಕ:
ಮಧುಸೂಧನ್.ವಿ
9900289844

Story first published: Friday, April 2, 2010, 16:38 [IST]
X
Desktop Bottom Promotion