Just In
Don't Miss
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- News
ಭೂತಾನ್ಗೆ 1.5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನ ಉಡುಗೊರೆ ನೀಡಿದ ಭಾರತ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ರುಚಿ: ವಿಭಿನ್ನ ಶೈಲಿಯ ಚಟ್ನಿ, ಬೊಂಬಾಟ್ ರುಚಿ!
ಇಂದಿನ ನೀವು ಸೇವಿಸುವ ಆಹಾರ ಯಾವುದೇ ಆಗಿರಲಿ ಜನರು ಅದು ರುಚಿಕರವಾಗಿ ಇರಬೇಕೆಂದು ಬಯಸುತ್ತಾರೆ. ಆದರೆ ಈ ರುಚಿ ಬರುವುದು ನೀವು ಅದಕ್ಕೆ ಸೇರಿಸುವ ಸಾಮಾಗ್ರಿ ಉತ್ತಮವಾಗಿದ್ದರೆ ಮಾತ್ರವೇ ನೀವು ಬಯಸುವ ಸ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಮುಖ್ಯ ಡಿಶ್ ಉತ್ತಮವಾಗಿದ್ದರೆ ಇದರೊಂದಿಗೆ ಬಡಿಸುವ ಇತರ ಡಿಶ್ ಕೂಡ ರುಚಿಕರವಾಗಿರುತ್ತದೆ. ರುಚಿರುಚಿಯಾದ ಶುಂಠಿ-ಕಾಯಿ ಚಟ್ನಿ: ಹತ್ತೇ ನಿಮಿಷದಲ್ಲಿ ರೆಡಿ!
ಹೆಚ್ಚಾಗಿ ಸಾಂಬಾರ್ ಮತ್ತು ಪಲ್ಯದೊಂದಿಗೆ ನಾವು ಅನ್ನ, ಚಪಾತಿ, ದೋಸೆಯನ್ನು ಸೇವಿಸುತ್ತೇವೆ. ಇಲ್ಲಿ ಸೈಡ್ ಡಿಶ್ ನಮಗೆ ಮೇನ್ ಡಿಶ್‌ನೊಂದಿಗೆ ಮುಖ್ಯವಾಗಿರುತ್ತದೆ. ಇಂದಿನ ಲೇಖನದಲ್ಲಿ ದೋಸೆ ಮತ್ತು ಚಪಾತಿಯೊಂದಿಗೆ ನೀವು ಸೇವಿಸಬಹುದಾದ ಬೇರೆ ಬೇರೆ ರೀತಿಯ ಚಟ್ನಿ ರೆಸಿಪಿಗಳ ವಿಧಾನವನ್ನು ನೀಡುತ್ತಿದ್ದೇವೆ. ಫಟಾ ಫಟ್ ತಯಾರಿಸಬಹುದಾದ ಈ ಚಟ್ನಿಯು ನೀವು ಸೇವಿಸುವ ಮುಖ್ಯ ಡಿಶ್‌ಗೆ ಹೇಳಿಮಾಡಿಸಿರುವ ಚಟ್ನಿ ವಿಧಾನಗಳನ್ನು ಇಲ್ಲಿ ನೀಡುತ್ತಿದ್ದೇವೆ....

ಟೊಮೇಟೊ ಚಟ್ನಿ
ಟೊಮೇಟೊ ಮತ್ತು ಹುಳಿಯನ್ನು ಸೇರಿಸಿಕೊಂಡು ಸಿದ್ಧಪಡಿಸಲಾದ ಚಟ್ನಿ ಇದಾಗಿದ್ದು ಅನ್ನ ಮತ್ತು ಚಪಾತಿಗೆ ಇದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ಅನ್ನದೊಂದಿಗೆ ಈ ಚಟ್ನಿ ಅನೂಹ್ಯ ರುಚಿಯನ್ನು ನಿಮಗೆ ನೀಡುತ್ತದೆ. ಈ ಚಟ್ನಿಯನ್ನು ತಯಾರಿಸುವುದು ಹೇಗೆ ಎಂಬುದರ ವಿಧಾನವನ್ನು ಈ ಲಿಂಕ್‌ನಲ್ಲಿ ನೀಡಿದ್ದೇವೆ. ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!

ಹಸಿರು ಚಟ್ನಿ
ಕೊತ್ತಂಬರಿ ಸೊಪ್ಪಿನಿಂದ ಈ ಚಟ್ನಿ ಹಸಿರು ಚಟ್ನಿಯೆಂದೇ ಹೆಚ್ಚು ಚಾಲ್ತಿಯಲ್ಲಿದೆ. ಆರೋಗ್ಯ ಪ್ರಯೋಜನಗಳನ್ನು ಈ ಚಟ್ನಿ ಹೊಂದಿದ್ದು ಅನ್ನ ಮತ್ತು ಚಪಾತಿಗೆ ಮಾತ್ರವಲ್ಲದೆ ಹೆಚ್ಚಿನ ದಕ್ಷಿಣ ಭಾರತೀಯ ತಿಂಡಿಗಳಿಗೂ ಇದು ಸೂಕ್ತವಾದುದಾಗಿದೆ. ಈ ಚಟ್ನಿಯನ್ನು ತಯಾರಿಸುವುದು ಹೇಗೆ ಎಂಬುದರ ವಿಧಾನವನ್ನು ಈ ಲಿಂಕ್‌ನಲ್ಲಿ ನೀಡಿದ್ದೇವೆ. ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

ಕೆಂಪು ಚಟ್ನಿ
ಹೆಚ್ಚಿನ ಖಾದ್ಯಗಳಿಗೆ ಈ ಚಟ್ನಿ ಹೆಚ್ಚು ಸೂಕ್ತವಾದುದಾಗಿದೆ. ಮೊಮೋಸ್ ಮತ್ತು ಇತರ ಉಪಹಾರ ತಿಂಡಿಗಳಾದ ದೋಸೆ, ಇಡ್ಲಿಗೆ ಇದು ಹೇಳಿಮಾಡಿಸಿರುವಂತಹದ್ದಾಗಿದೆ. ಈ ಚಟ್ನಿಯನ್ನು ಮಾಡುವ ವಿಧಾನವನ್ನು ಇಲ್ಲಿ ನೀಡಿದ್ದೇವೆ. ಕೆಂಪು ಮೆಣಸಿನಕಾಯಿ ಕಾರ ಚಟ್ನಿ

ಕಡಲೆ ಬೇಳೆಯ ಚಟ್ನಿ
ದಿನಾಲೂ ದೋಸೆ ಅಥವಾ ಇಡ್ಲಿಗೆ ಒಂದೇ ಬಗೆಯ ಕಾಯಿಚಟ್ನಿಯನ್ನೇ ತಿಂದು ನಿಮ್ಮ ಮನೆಯವರಿಗೆ ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ಅವರಿಗೆ ಸ್ವಾದಿಷ್ಟವಾದ ಕಡಲೆ ಬೇಳೆಯ ಚಟ್ನಿಯನ್ನು ಮುಂದಿನ ಬಾರಿ ಬಡಿಸಿ ನೋಡಿ ಖಂಡಿತವಾಗಿಯೂ ಇಷ್ಟ ಪಡದೇ ಇರಲಾರರು. ಕಡಲೆ ಬೇಳೆಯ ಚಟ್ನಿಯನ್ನು ತಯಾರಿಸಲು ಹಲವಾರು ಮಸಾಲೆವಸ್ತುಗಳ ಅಗತ್ಯವಿದೆ. ಈ ಮಸಾಲೆಗಳಿಂದಲೇ ಚಟ್ನಿಗೆ ವಿಶಿಷ್ಟವಾದ ಸ್ವಾದ ಲಭಿಸುತ್ತದೆ. ಆದರೆ ಇದಕ್ಕೆ ಬಳಸಲಾಗುವ ಹುಣಸೆಹುಳಿಯ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟೇ ಇರುವಂತೆ ನೋಡಿಕೊಳ್ಳುವುದು ಅಗತ್ಯ, ಇಲ್ಲದಿದ್ದರೆ ಚಟ್ನಿ ಹೆಚ್ಚು ಹುಳಿಯಾಗುತ್ತದೆ. ಸರಿ, ಇನ್ನೇಕೆ ತಡ..? ಬಿಸಿಬಿಸಿ ದೋಸೆಗೆ ಸಾಥ್ ನೀಡುವ ಕಡಲೆ ಬೇಳೆಯ ಚಟ್ನಿ