For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ನಿಂದ ರುಚಿಯಾದ ಖಾರದ ಚಟ್ನಿ!

|
Carrot Chutney Recipe
ಬಾಯಿರುಚಿ ಹೆಚ್ಚಿಸುವ ಕೊಬ್ಬರಿ ಚಟ್ನಿ, ಮಾವಿನಕಾಯಿ ಚಟ್ನಿ, ಬೆಳ್ಳುಳ್ಳಿ, ಟೊಮೆಟೊ ಚಟ್ನಿ ಈ ಬಗೆಯ ಚಟ್ನಿಗಳನ್ನು ಸಾಧಾರಣವಾಗಿ ಎಲ್ಲರ ಮನೆಯಲ್ಲಿ ತಯಾರಿಸುತ್ತೇವೆ. ಆದರೆ ಇವತ್ತು ನಾವು ಖಾರ ಮತ್ತು ರುಚಿಯಾಗಿರುವ ಕ್ಯಾರೆಟ್ ಚಟ್ನಿ ಮಾಡುವುದರ ಕುರಿತು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
* ಕ್ಯಾರೆಟ್ 3-4 ( ಗಾತ್ರ ದೊಡ್ಡದಿದ್ದರೆ 3 ಸಾಕು)
* 1/2 ಚಮಚ ಕೆಂಪು ಮೆಣಸಿನ ಪುಡಿ (ತುಂಬಾ ಖಾರ ಬೇಕೆಂದರೆ ಇನ್ನು ಸ್ವಲ್ಪ ಸೇರಿಸಬಹುದು)
* 1/2 ಚಮಚ ಕರಿಮೆಣಸಿನ ಪುಡಿ
* ಶುಂಠಿ (ಒಂದು ಇಂಚಿನಷ್ಟು ದೊಡ್ಡದಿರುವ ತುಂಡು)
* ಬೆಳ್ಳುಳ್ಳಿ 4-6 ಎಸಳು
* 8 ಬಾದಾಮಿ
* 4 ಚಮಚ ಗಸೆಗಸೆ
* ಏಲಕ್ಕಿ1/4 ಚಮಚ
* 1 ಚಮಚ ವಿನಿಗರ್
* 1 ಕಪ್ ನೀರು
* 1-2 ಚಮಚ ಸಕ್ಕರೆ

ತಯಾರಿಸುವ ವಿಧಾನ:

1. ಚಿಕ್ಕ ತುಂಡಾಗಳಾಗಿ ಕ್ಯಾರೆಟ್ ಗಳನ್ನು ಕತ್ತರಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ, ಮೆಣಸಿನ ಪುಡಿ ಮತ್ತು ಕರಿಮೆಣಸಿನ ಪುಡಿ ಸೇರಿಸಬೇಕು.

2.
ಈ ಮಿಶ್ರಣಕ್ಕೆ ಒಂದು ಕಪ್ ನೀರು ಹಾಕಿ ಕ್ಯಾರೆಟ್ ಬೆಂದು ಆ ಮಿಶ್ರಣದಲ್ಲಿ ನೀರು ಬತ್ತಿ ಗಟ್ಟಿ ಮಿಶ್ರಣವಾಗುವವರೆಗೆ ಬೇಯಿಸಬೇಕು.

3. ಈ ಮಿಶ್ರಣವನ್ನು ಸೌಟ್ ನಿಂದ ಕುಟ್ಟುತ್ತಾ ಪೇಸ್ಟ್ ರೀತಿ ಮಾಡಬೇಕು.

4. ಈಗ ಆ ಮಿಶ್ರಣಕ್ಕೆ ವಿನಿಗರ್, ಸಕ್ಕರೆ, ಉಪ್ಪು, ಗಸೆಗಸೆ, ಬಾದಾಮಿ, ಗೋಡಂಬಿ, ಏಲಕ್ಕಿ ಹಾಕಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ.

5. ತಯಾರಾದ ಈ ಮಿಶ್ರಣವನ್ನು ಶುದ್ಧವಾದ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ 2 ದಿನಗಳವರೆಗೆ ಹಾಗೇ ಇಡಬೇಕು.

ನಂತರ ತೆಗೆದು ನೋಡಿದರೆ ರುಚಿಕರವಾದ ಖಾರ ಕ್ಯಾರೆಟ್ ಚಟ್ನಿ ರೆಡಿ.

English summary

Carrot Chutney Recipe | Variety In Chutney | ಕ್ಯಾರೆಟ್ ಚಟ್ನಿ ರೆಸಿಪಿ | ಚಟ್ನಿಯಲ್ಲಿರುವ ನಾನಾ ಬಗೆಗಳು

Indians are famous for chutney preparation. Usually preparing coconut chutny, tomato chutny very common. To day we can learn different variety of chutny which is made by carrot. take a look.
Story first published: Monday, February 13, 2012, 12:15 [IST]
X
Desktop Bottom Promotion