For Quick Alerts
ALLOW NOTIFICATIONS  
For Daily Alerts

ಮೊಳಕೆ ಬರಿಸಿದ ಹೆಸರುಕಾಳಿನ ಸಲಾಡ್

By Manohar.V
|

ದಿನವನ್ನು ಪ್ರಾರಂಭಗೊಳಿಸಲು ಆರೋಗ್ಯವಂತ ಬೆಳಗ್ಗಿನ ತಿಂಡಿ ಅತ್ಯವಶ್ಯಕ. ದಿನಪೂರ್ತಿ ಕ್ರಿಯಾತ್ಮಕವಾಗಿರಲು ಬೆಳಗ್ಗಿನ ತಿಂಡಿ ಆರೋಗ್ಯದಾಯಕವಾಗಿರಬೇಕು ಮತ್ತು ಪೋಷಕಾಂಶಗಳನ್ನು ಒಳಗೊಂಡಿರಬೇಕು. ಆರೋಗ್ಯವಂತ ಉಪಹಾರವು ನಿಮ್ಮ ದೇಹವನ್ನು ಚಟುವಟಿಕೆಯಿಂದಿರಿಸಿ ಕೆಲಸದತ್ತ ನಿಮ್ಮ ಗಮನವನ್ನು ಹರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಶಕ್ತಿಯುತ ಕೊಬ್ಬಿಲ್ಲದ ಮತ್ತು ಪೋಷಕಾಂಶಯುಕ್ತ ಆಹಾರ ನಮ್ಮ ಬೆಳಗ್ಗಿನ ಉಪಹಾರವಾಗಿರಬೇಕು.

ಮೊಳಕೆ ಬರಿಸಿದ ಧಾನ್ಯಗಳು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ತೂಕ ಇಳಿಸಲು ಕೂಡ ಇದರಿಂದ ಸಾಧ್ಯ. ನಿಮ್ಮ ತೂಕವನ್ನು ಕಡಿಮೆ ಮಾಡಿ ಆರೋಗ್ಯವಂತ ದೇಹವನ್ನು ಪಡೆದುಕೊಳ್ಳಲು ಬಯಸುವವರಿಗಾಗಿ ನಾವಿಂದು ಉತ್ತಮವಾದ ಬೆಳಗ್ಗಿನ ಉಪಹಾರವಾದ ಹೆಸರುಕಾಳಿನ ಸಲಾಡ್ ಮಾಡುವ ವಿಧಾನವನ್ನು ನೀಡುತ್ತಿದ್ದೇವೆ.

Tangy Aloo Tamatar: Side Dish Recipe

ಇದೊಂದು ಸರಳವಾದ ಹಾಗೂ ಸುಲಭ ರೀತಿಯ ರೆಸಿಪಿಯಾಗಿದ್ದು ತಯಾರು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಇಲ್ಲಿದೆ ಮೊಳಕೆ ಬರಿಸಿದ ಹೆಸರುಕಾಳಿನ ರೆಸಿಪಿ ವಿಧಾನ.

ಪ್ರಮಾಣ: 2
ಸಿದ್ಧತೆಯ ಸಮಯ: 10 ನಿಮಿಷಗಳು
ಅಡುಗೆ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
ಮೊಳಕೆ ಬರಿಸಿದ ಹೆಸರುಕಾಳು - 1 1/2 ಕಪ್

ಟೊಮೇಟೊ - 1 ಕಪ್ (ತುಂಡರಿಸಿದ್ದು)

ಮುಳ್ಳುಸೌತೆ - 1ಕಪ್ (ತುಂಡರಿಸಿದ್ದು)

ಕರಿಬೇವಿನ ಎಸಳು- 1 ಟೇಸ್ಫೂನ್ (ಕತ್ತರಿಸಿದ್ದು)

ಹಸಿಮೆಣಸು - 1 (ಕತ್ತರಿಸಿದ್ದು)

ಸಲಾಡ್ - ಸ್ವಲ್ಪ ಅಲಂಕಾರಕ್ಕಾಗಿ

ಕಾಳುಮೆಣಸು - 1/2 ಟೇಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಹುರಿದ ಜೀರಿಗೆ - 1 ಟೇಸ್ಪೂನ್

ನಿಂಬೆ ರಸ - 1ಟೇಸ್ಫೂನ್

ಮೊಸರು - 2ಟೇಸ್ಫೂನ್

ಶುಂಠಿ ರಸ - 1ಟೇಸ್ಪೂನ್

ಆಲೀವ್ ಆಯಿಲ್- 1ಟೇಸ್ಪೂನ್

ಮಾಡುವ ರೀತಿ:

1. ಸಲಾಡ್ ಅಲಂಕಾರ ಸಾಮಾಗ್ರಿಗಳನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.

2. ನಂತರ ಮೊಳಕೆ ಬರಿಸಿರುವ ಹೆಸರುಕಾಳನ್ನು ಉಪ್ಪು ಮತ್ತು 1/4 ಕಪ್ ನೀರನ್ನು ಸೇರಿಸಿ ಪ್ಯಾನ್‌ಗೆ ಹಾಕಿಕೊಳ್ಳಿ.

3. ತದನಂತರ ಅದನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

4. ಸಣ್ಣ ಉರಿಯಲ್ಲಿ 10 ನಿಮಿಷಗಳಷ್ಟು ಕಾಲ ಬೇಯಿಸಿಕೊಳ್ಳಿ.

5. ಬೆಂದ ನಂತರ, ಗ್ಯಾಸ್ ಆಫ್ ಮಾಡಿ.

6. ಪ್ಯಾನ್‌ಗೆ ಮುಚ್ಚಳ ಮುಚ್ಚಿ 3 ರಿಂದ ನಾಲ್ಕು ನಿಮಿಷಗಳಷ್ಟು ಕಾಲ ಹಾಗೆಯೇ ಬಿಡಿ.

7. ಮೊಳಕೆ ಕಾಳನ್ನು ಆರಲು ಬಿಡಿ.

8. ಈಗ ಅಲಂಕಾರ ಪದಾರ್ಥಗಳನ್ನು ಮೊಳಕೆ ಕಾಳಿನೊಂದಿಗೆ ಮಿಶ್ರ ಮಾಡಿಕೊಳ್ಳಿ.

9. ಬಡಿಸುವ ಪಾತ್ರೆಯಲ್ಲಿ ಟೊಮೇಟೊ ಮತ್ತು ಮುಳ್ಳುಸೌತೆಯನ್ನು ಸಿದ್ಧಪಡಿಸಿಕೊಳ್ಳಿ.

10. ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನೊಂದಿಗೆ ಅಲಂಕರಿಸಿಕೊಳ್ಳಿ.

ಆರೋಗ್ಯವಂತ ಮೊಳಕೆ ಬರಿಸಿದ ಹೆಸರುಕಾಳು ಸಲಾಡ್ ಸವಿಯಲು ಸಿದ್ಧವಾಗಿದೆ. ಈ ಉಪಹಾರದೊಂದಿಗೆ ಶುಭದಿನ ನಿಮ್ಮದಾಗಲಿ.

English summary

Tangy Aloo Tamatar: Side Dish Recipe

Aloo or potato is one of the staples found in every kitchen. In many households, a meal is incomplete without any aloo dish.
Story first published: Tuesday, January 7, 2014, 17:54 [IST]
X
Desktop Bottom Promotion