For Quick Alerts
ALLOW NOTIFICATIONS  
For Daily Alerts

ಪರೋಟದಲ್ಲಿ ಭಿನ್ನ ರುಚಿ-ಕಾರ್ನ್ ಪರೋಟ

|

ಪರೋಟವನ್ನು ಕೆಲವರು ಗೋಧಿಯಿಂದ ತಯಾರಿಸಿದರೆ, ಕೆಲವರು ಮೈದಾ ಬಳಸಿ ತಯಾರಿಸುತ್ತಾರೆ. ಆದರೆ ಮೈದಾ ಬಳಸಿ ಮಾಡುವ ಪರೋಟಕ್ಕಿಂತ, ಗೋಧಿಯಿಂದ ಮಾಡುವ ಪರೋಟ ಒಳ್ಳೆಯದು.

ಪರೋಟದಲ್ಲಿ ಇತರ ಮಸಾಲೆ ಪದಾರ್ಥಗಳನ್ನು ತುಂಬಿ ತಯಾರಿಸಿದರಂತೂ ತುಂಬಾ ರುಚಿಯಾಗಿರುತ್ತದೆ. ಈ ರೀತಿ ಮಸಾಲೆ ತುಂಬಿ ಮಾಡುವ ಪರೋಟಗಳಲ್ಲಿ ಆಲೂ ಪರೋಟವಂತೂ ತುಂಬಾ ಫೇಮಸ್. ಆಲೂ ಪರೋಟದಷ್ಟೇ ರುಚಿಕರವಾದ ಮತ್ತೊಂದು ಪರೋಟದ ರೆಸಿಪಿಯನ್ನು ಇಲ್ಲಿ ನೀಡಿದ್ದೇನೆ ನೋಡಿ:

Corn Paratha

ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು 2 ಕಪ್
ರುಚಿಗೆ ತಕ್ಕ ಉಪ್ಪು
ನೀರು 1 ಕಪ್

ಇತರ ಸಾಮಾಗ್ರಿಗಳು
ಜೋಳ 1 ಕಪ್
ಈರುಳ್ಳಿ 1
ಹಸಿ ಮೆಣಸಿನಕಾಯಿ 2
ಬೇಯಿಸಿದ ಆಲೂಗಡ್ಡೆ 1
ನಿಂಬೆ ರಸ 1 ಚಮಚ ಮತ್ತು ಜೀರಿಗೆ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ಗೋಧಿ ಹಿಟ್ಟಿಗೆ ರುಚಿಗೆ ತಕ್ಕ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚಪಾತಿಯ ಹದಕ್ಕೆ ತಟ್ಟಿ, ಅದನ್ನು ಕಾಟನ್ ಬಟ್ಟೆಯಿಂದ ಮುಚ್ಚಿ ಒಂದು ಬದಿಯಲ್ಲಿಡಿ.

* ಈಗ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿದ ಬಳಿಕ, 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಜೋಳವನ್ನು ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ, ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸಿ, ನಂತರ ಜೀರಿಗೆ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ 2-3 ನಿಮಿಷ ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.

* ನಂತರ ಅವುಗಳಿಂದ 8-10 ಉಂಡೆ ಕಟ್ಟಿ.

* ಈಗ ಕಲೆಸಿಟ್ಟ ಗೋಧಿ ಹಿಟ್ಟಿನಿಂದ 8-10 ಉಂಡೆ ಕಟ್ಟಿ.

* ಈಗ ಒಂದು ಉಂಡೆಯನ್ನು ತೆಗೆದುಕೊಂಡು ಚಪಾತಿಗೆ ಲಟ್ಟಿಸಿದಂತೆ ಲಟ್ಟಿಸಿ, ಅದರಲ್ಲಿ ಜೋಳದ ಉಂಡೆ ಇಟ್ಟು, ಮತ್ತೆ ಉಂಡೆ ಕಟ್ಟಿ ಲಟ್ಟಿಸಿ. ಈ ರೀತಿ ಉಳಿದ ಉಂಡೆಗಳನ್ನು ಲಟ್ಟಿಸಿ.

* ನಂತರ ತವಾವನ್ನು ಬಿಸಿ ಮಾಡಿ ಲಟ್ಟಿಸಿದ ಪರೋಟವನ್ನು ತವಾಕ್ಕೆ ಹಾಕಿ ಎರಡೂ ಬದಿ ಸ್ವಲ್ಪ ಕಂದು ಬಣ್ಣ ಬಂದಾಗ ತೆಗೆಯಿರಿ.

ತಯಾರಾದ ಕಾರ್ನ್ ಪರೊಟವನ್ನು ಮೊಸರು ಬಜ್ಜಿಯ ಜೊತೆ ಸವಿಯಿರಿ.

English summary

Stuffed Corn Paratha For Breakfast

Stuffed corn paratha is a tasty and a filling option for breakfast. Boiled sweet corn is a perfect option to start your day on a healthy note since it has a numerous health benefits.
 
X
Desktop Bottom Promotion