ಕೋಸು ಪರಾಟ ಮಾಡೋದು ಹೀಗೆ

Posted By:
Subscribe to Boldsky

ಪರಾಟಗಳು ಉತ್ತರ ಭಾರತದ ಆಹಾರ ಕ್ರಮದ ಅವಿಭಾಜ್ಯ ಅಂಗ. ಹಲವು ಮನೆಗಳಲ್ಲಿ ಇದಿಲ್ಲದೆ ದಿನದ ಅಡುಗೆ ಕ್ಯಾರ್ಯಕ್ರಮ ಮುಗಿಯುವುದೇ ಇಲ್ಲ. ಪರೋಟಗಳನ್ನು ಬೆಳಗಿನ ಉಪಹಾರಕ್ಕೂ ಬಳಸುತ್ತಾರೆ ಹಾಗೆ ಊಟಕ್ಕೂ ಬಳಸಬಹುದು. ಪರೋಟಗಳನ್ನು ಕೊತ್ತಂಬರಿ ಚಟ್ನಿ ಅಥವ ಮೊಸರು ಮತ್ತು ಉಪ್ಪಿನ ಕಾಯಿಯ ಜೊತೆ ಸವಿಯುವುದನ್ನು ಇಷ್ಟಪಡುತ್ತಾರೆ. ಇದರ ಜೊತೆಗೆ ಮಸಾಲ ಚಾ ಇದ್ದರೆ ಇನ್ನೂ ಮಜವಾಗಿರುತ್ತೆ.

ಪಲ್ಯ, ಚಟ್ನಿ, ಕರ್ರಿ ಮಾಡಲು ಸಮಯವಿಲ್ಲದಿದ್ದಾಗಲೂ ಹೀಗೆ ಹೂರಣವಿಟ್ಟು ಮಾಡುವ ಪರೋಟಗಳನ್ನು ಸುಲಭವಾಗಿ ಮತ್ತು ಬೇಗ ಬೇಗ ಮಾಡಿ ಬಿಡಬಹುದು. ಹಾಗಾಗಿ ಬೆಳಗಿನ ತಿಂಡಿಗೆ ಇದನ್ನು ಮಾಡಲು ಹೆಚ್ಚು ಕಷ್ಟ ಪಡಬೇಕಿಲ್ಲ. ಎಲೆಕೋಸಿನ ಕಾಲದಲ್ಲಿ ಅದನ್ನೇ ಪರೋಟದೊಳಗಿನ ಹೂರಣಕ್ಕೆ ಬಳಸಬಹುದು.

Stuffed Cabbage Paratha Recipe

ಬೇಕಾಗುವ ಸಾಮಗ್ರಿಗಳು

1. ಎಲೆಕೋಸು- 1 ಕಪ್ (ಕತ್ತರಿಸಿಕೊಳ್ಳಿ)

2. ಗೋಧಿ ಹಿಟ್ಟು- 2 ಕಪ್

3. ಮೈದಾ- ಒಂದು ಹಿಡಿಯಷ್ಟು

4. ಅರಿಶಿಣ ಪುಡಿ- 2 ಟೀಚಮಚ

5. ಅಜವೈನ್/ ದೊಡ್ಡ ಪತ್ರೆಯ ಎಲೆಗಳು - 1 ಟೀಚಮಚ

6. ಅಚ್ಚ ಖಾರದ ಪುಡಿ- 2 ಟೀಚಮಚ

7. ಉಪ್ಪು- ರುಚಿಗೆ ತಕ್ಕಷ್ಟು

8. ಎಣ್ಣೆ- 1 ಕಪ್

9. ನೀರು- 2 ಕಪ್

ಮಾಡುವ ವಿಧಾನ

1. ಒಂದು ಪಾತ್ರೆಗೆ ಗೋಧಿಹಿಟ್ಟು, ಕೋಸನ್ನು ಹಾಕಿಕೊಂಡು ಮಿಶ್ರ ಮಾಡಿ.

2. ಇದಕ್ಕೆ ಮೈದಾ ಹಿಟ್ಟು ಮತ್ತು ನೀರನ್ನು ಹಾಕಿ ಕಲಸಿ. ಕೋಸು ನೀರು ಬಿಟ್ಟುಕೊಳ್ಳುತ್ತದೆಯಾದ್ದರಿಂದ ಹೆಚ್ಚು ನೀರು ಸೇರಿಸದಿರುವುದು ಒಳ್ಳೆಯದು.

3. ನಂತರ ಉಪ್ಪು, ಅಚ್ಚ ಖಾರದ ಪುಡಿ, ಅಜವೈನ್, ಅರಿಶಿಣ ಪುಡಿ ಹಾಕಿ ಚೆನ್ನಾಗಿ ಕಲಸಿ.

4. ಅವಶ್ಯಕತೆಯಿದ್ದರೆ ನೀರು ಹಾಕಿಕೊಂಡು ಮೃದುವಾದ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕಲಸಿದ ನಂತರ 25 ನಿಮಿಷ ನೆನೆಯಲು ಬಿಡಿ.

5. ಹೆಂಚನ್ನು ಒಲೆಯ ಮೇಲೆ ಬಿಸಿಯಾಗಲು ಇಡಿ. ಹಿಟ್ಟನ್ನು ಉಂಡೆಗಳಾಗಿ ಮಾಡಿಕೊಂಡು ರೋಟಿಯ ಆಕಾರದಲ್ಲಿ ಒತ್ತಿಕೊಳ್ಳಿ.

6. ಹೆಂಚು ಕಾದ ನಂತರ ಅದರ ಮೇಲೆ ಹಾಕಿ ರೋಟಿಯ ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಸುಡಿ.

ಈ ರೋಟಿಗಳನ್ನು ಉಪ್ಪಿನ ಕಾಯಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

English summary

Stuffed Cabbage Paratha Recipe

Parathas are one of the most preferred breads in the Indian cuisine. In most of the households, a meal is incomplete without parathas. Oily and crisp hot parathas are always a treat to the taste buds.
Story first published: Monday, December 9, 2013, 6:04 [IST]
Subscribe Newsletter