For Quick Alerts
ALLOW NOTIFICATIONS  
For Daily Alerts

ಉಪಹಾರವನ್ನು ಕಳೆಗಟ್ಟಿಸುವ ರುಚಿಯಾದ ಮೊಸರು ವಡೆ

|

ಇಂದಿನ ವ್ಯಸ್ತ ಜೀವನದಲ್ಲಿ ನಾವು ಯಾವಾಗಲೂ ಸುಲಭವಾಗಿರುವುದನ್ನು ಎದುರು ನೋಡುತ್ತೇವೆ. ಮಿಂಚಿನ ವೇಗದಲ್ಲಿ ನಾವು ತಯಾರು ಮಾಡುವಂತಹ ತಿಂಡಿಗಳು ನಮಗೆ ಸಮಯವನ್ನು ಉಳಿಸುವುದರೊಂದಿಗೆ ಇನ್ನಿತರ ಕೆಲಸಗಳನ್ನು ಮಾಡಲು ನಮಗೆ ಸಹಾಯ ಮಾಡುತ್ತದೆ.

ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಿಮ್ಮ ಮನಸ್ಸಿಗೆ ಆನಂದವನ್ನು ಬಾಯಿಗೆ ರುಚಿಯನ್ನು ನೀಡುವ ಮೊಸರು ವಡೆ ತಯಾರಿ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ. ಇದು ದೇಹಕ್ಕೆ ಮೊಸರಿನ ಪ್ರೋಟೀನ್ ಅನ್ನು ನೀಡುವುದರೊಂದಿಗೆ ಇದನ್ನು ತಯಾರಿಸುವಾಗ ಮಿಶ್ರ ಮಾಡುವ ಅಂಶಗಳು ನಮ್ಮ ದೇಹಕ್ಕೆ ಆರೋಗ್ಯಕಾರಿ ಅಂಶವನ್ನು ನೀಡುತ್ತದೆ.

Steamed Dahi Vada Treat For Brothers

ಇದೊಂದು ಸರಳವಾಗಿ ತಯಾರಿಸುವ ತಿಂಡಿಯಾಗಿದ್ದು ನಿಮಗೆ ಹೆಚ್ಚಿನ ಸಮಯವನ್ನು ಇದಕ್ಕೆ ವಿನಿಯೋಗಿಸುವ ಅಗತ್ಯವಿಲ್ಲ. ದೇಹಕ್ಕೆ ಆರೋಗ್ಯವನ್ನು ಮನೆಮಂದಿಗೆ ರುಚಿಯನ್ನು ಸಂತಸವನ್ನು ನೀಡುವ ಈ ಸರಳ ತಯಾರಿಯ ಮೊಸರು ವಡೆ ರೆಸಿಪಿ ನಿಮ್ಮ ಬಾಯಲ್ಲಿ ಖಾದ್ಯದ ರುಚಿಯನ್ನು ಹಾಗೆಯೇ ಇರಿಸುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಇದರ ಸರಳ ತಯಾರಿ ವಿಧಾನದೊಂದಿಗೆ ನಾವು ಬಂದಿದ್ದು ವಾರಾಂತ್ಯದ ರುಚಿಯಾದ ಖಾದ್ಯವು ಮನೆಮಂದಿಯ ಬಾಯಿ ರುಚಿಯನ್ನು ತಣಿಸುವುದರೊಂದಿಗೆ ನಿಮಗೆ ಹೊಗಳಿಕೆಯ ಸುರಿಮಳೆಯನ್ನು ನೀಡುವುದು ಖಂಡಿತ.

ಮಳೆಗಾಲಕ್ಕೆ ಸ್ಪೆಷಲ್-ಬಗೆ ಬಗೆಯ ಚಪಾತಿ

ಪ್ರಮಾಣ: 4
*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಉದ್ದಿನ ಬೇಳೆ - 1/2 ಕಪ್
*ಹೆಸರು ಬೇಳೆ - 1/2 ಕಪ್
*ಶುಂಠಿ - 1 ಇಂಚಿನಷ್ಟು
*ಉಪ್ಪು - ½ ಚಮಚ
*ಹಸಿಮೆಣಸು - 2-3
*ಸೋಡಾ ಪುಡಿ - ½ ಚಮಚ
*ಮೊಸರು - 250 ಗ್ರಾಮ್
*ಉಪ್ಪು - ½ ಚಮಚ
*ಜೀರಿಗೆ - 2 ಚಮಚ
*ಮೆಣಸಿನ ಪುಡಿ - ½ ಚಮಚ
*ಚಾಟ್ ಮಸಾಲಾ ಪುಡಿ - 1 ಚಮಚ
*ಕೊತ್ತಂಬರಿ ಸೊಪ್ಪು - 2 ಚಮಚ

ಮಾಡುವ ವಿಧಾನ

* ಮೊದಲಿಗೆ ನೀವು ಮೊಸರಿಗೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಡೆದುಕೊಳ್ಳಬೇಕು. ನಂತರ ಮೊಸರಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ (ಕೊತ್ತಂಬರಿ ಸೊಪ್ಪು ಹೊರತುಪಡಿಸಿ) ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ವಡೆ ತಯಾರಾಗುವವರೆಗೆ ಫ್ರಿಡ್ಜ್‌ನಲ್ಲಿ ಇದನ್ನಿಡಿ.
* ಎರಡೂ ಬೇಳೆಗಳನ್ನು ತೆಗೆದುಕೊಂಡು (ಉದ್ದಿನ ಬೇಳೆ ಹಾಗೂ ಹೆಸರು ಬೇಳೆ) ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು 4-6 ಗಂಟೆಗಳ ಕಾಲ ನೆನೆಸಿ, ಮತ್ತು ಬೇಳೆಗಳಿಂದ ನೀರನ್ನೆಲ್ಲಾ ಬಸಿದುಕೊಳ್ಳಿ. ನಂತರ ಗ್ರೈಂಡರ್‌ನಲ್ಲಿ ಇದನ್ನು ಹಾಕಿ ನೀರು ಹಾಕದೇ ನುಣ್ಣಗೆ ಕಡೆದುಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ಒಂದೆಡೆ ಇರಿಸಿ.
* ಈಗ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ ಇಡ್ಲಿ ಪಾತ್ರೆಗೆ ಅನ್ನು ಬಿಸಿಯಾಗಲು ಮಂದ ಉರಿಯಲ್ಲಿ ಇರಿಸಿ. ಪಾತ್ರೆಗೆ ನೀರು ಹಾಕಿ ಅದರ ಮೇಲೆ ಇಡ್ಲಿ ತಟ್ಟೆಗಳನ್ನಿಡಿ.
*ಹಿಟ್ಟಿಗೆ ಈಗ ಉಪ್ಪು, ಶುಂಠಿ, ಕತ್ತರಿಸಿದ ಹಸಿಮೆಣಸು ಹಾಕಿ ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ.
ಹಿಟ್ಟು ತೆಳುವಾಗಿದೆ ಎಂದಾದರೆ 2-3 ಚಮಚದಷ್ಟು ರವೆಯನ್ನು ಸೇರಿಸಿ. ಕೊನೆಗೆ ಸೋಡವನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಮೊಸರು ವಡೆ ಮಿಶ್ರಣ ಈಗ ಸಿದ್ಧವಾಗಿದೆ.

English summary

Steamed Dahi Vada Treat For Brothers

This delicious steamed curd vada recipe is not at all time consuming and anyone would love to indulge in it, since it is 'steamed'. What are you waiting for? Here is the steamed curd vada recipe to try on Raksha Bandhan.
X
Desktop Bottom Promotion