For Quick Alerts
ALLOW NOTIFICATIONS  
For Daily Alerts

ಸಲಾಮಿ ಸ್ಟೆಷಲ್ ಬೆಳಗಿನ ಉಪಹಾರಕ್ಕೆ

|

ಇದೊಂದು ವಿಶೇಷ ತರಹದ ತಿಂಡಿ. ಬೆಳಗಿನ ಉಪಹಾರಕ್ಕೆ ಹೇಳಿಮಾಡಿಸಿರುವಂತದ್ದು. ಸಲಾಮಿಯನ್ನು ಸಾಮಾನ್ಯವಾಗಿ ಬ್ರೆಡ್ಡು ಬೆಣ್ಣೆಯೊಂದಿಗೆ ಇಟ್ಟು ತಿನ್ನುತ್ತಾರೆ. ಆದರೆ ನಾವು ಈವತ್ತು ಸ್ವಲ್ಪ ವಿಶೇಷವಾದ ರೀತಿಯಲ್ಲಿ ಇದರ ತಿಂಡಿ ತಯಾರಿಸುವುದನ್ನು ಹೇಳಿಕೊಡುತ್ತೇವೆ.

ನಿಮಗೂ ಈವತ್ತು ಏನಾದ್ರೂ ಬೇರೆ ತರಹದ ತಿಂಡಿ ಮಾಡಿ ರುಚಿ ನೋಡಬೇಕು ಅನ್ನುವ ಮೂಡ್ ಇದ್ದರೆ ಇದನ್ನು ಟ್ರೈಮಾಡಿ ನೋಡಿ.

Salami Special Recipe For Breakfast

ಬೇಕಾಗುವ ಸಾಮಗ್ರಿಗಳು
1. ಸಲಾಮಿ- 6 ಸ್ಲೈಸ್ ಗಳು
2. ಮೊಟ್ಟೆ- 2
3. ಈರುಳ್ಳಿ- 1
4. ಮೆಣಸು- 1 ಟೀಚಮಚ
5. ನೀರು- 2 ಟೀಚಮಚ
6. ಜಿಡ್ಡು- 2 ಟೀಚಮಚ
7. ಎಣ್ಣೆ
8. ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1. ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
2. ಇದಕ್ಕೆ ಸಲಾಮಿ ಸ್ಲೈಸ್ ಗಳನ್ನು ಸೇರಿಸಿ ನಿಧಾನವಾಗಿ ಎಲ್ಲವನ್ನೂ ಕಲಸಿರಿ. ಸಣ್ಣ ಉರಿಯಲ್ಲಿಟ್ಟುಕೊಂಡು ಎಣ್ಣೆಯಲ್ಲಿ ಇವುಗಳನ್ನು ಚೆನ್ನಾಗಿ ಹುರಿಯಿರಿ.
3. ನಂತರ ಮೊಟ್ಟೆಗಳನ್ನು ಒಡೆದು ಇದರೊಳಕ್ಕೆ ಹಾಕಿ ಬೇಯಿಸಿ.
4. ಇದು ಬೆಂದ ನಂತರ ಸ್ವಲ್ಪ ನೀರು ಸೇರಿಸಿ.
5. ನಂತರ ಮೆಣಸು, ಜಿಡ್ಡು ಮತ್ತು ಉಪ್ಪನ್ನು ಇದಕ್ಕೆ ಸೇರಿಸಿ.
6. 5 ನಿಮಿಷಗಳವರೆಗೆ ಬೇಯಲು ಬಿಟ್ಟು ಒಲೆಯನ್ನು ಆರಿಸಿ.

ಸಲಾಮಿ ಸ್ಪೆಷಲ್ ಅನ್ನು ಟೋಸ್ಟೆಡ್ ಬ್ರೆಡ್ ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Salami Special Recipe For Breakfast

This morning, wake up to a different breakfast which will completely blow your mind. Boldsky, brings to you a salami breakfast special which is not only yummy but also crispy and mind-blowing.
Story first published: Wednesday, December 11, 2013, 9:53 [IST]
X
Desktop Bottom Promotion