For Quick Alerts
ALLOW NOTIFICATIONS  
For Daily Alerts

ಬೆಳಗಿನ ಪರಿಪೂರ್ಣ ಸ್ವಾದಮಯ ಉಪಹಾರ ಮೂಲಂಗಿ ಪರೋಟ

|

ಬಾಯಲ್ಲಿ ಸ್ವಾದವನ್ನುಂಟು ಮಾಡುವ ತಿಂಡಿಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಒಮ್ಮೆ ನಾವು ಮಾಡಿದ ಖಾದ್ಯ ನಮಗೆ ಹಿಡಿಸಿತೆಂದರೆ ನಾವು ಅದನ್ನೇ ಹೆಚ್ಚು ಇಷ್ಟಪಡುತ್ತೇವೆ ಮತ್ತು ತಯಾರಿಸುತ್ತೇವೆ. ಈ ಇಷ್ಟಪಡುವ ಆಹಾರ ಬೆಳಗಿನ ಉಪಹಾರವಾಗಿದ್ದರಂತೂ ಅದರ ಘಮಲೇ ಬೇರೆ. ಬಿಸಿಬಿಸಿಯಾಗಿ ರುಚಿಯಾಗಿರುವ ಉಪಹಾರವನ್ನು ತಿನ್ನುವ ಮನಸ್ಸು ಕೂಡ ಆಹ್ಲಾದಮಯವಾಗಿರುತ್ತದೆ ಮತ್ತು ಮಾಡುವ ಕೆಲಸ ಕೂಡ ಚಟುವಟಿಕೆಯಿಂದ ಕೂಡಿರುತ್ತದೆ.

ಹಾಗಿದ್ದರೆ ನಿಮ್ಮ ಬೆಳಗಿನ ಉಪಹಾರವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವ ಮತ್ತು ನಿಮ್ಮ ಮನೆಮಂದಿಯ ಪ್ರೀತಿಯನ್ನು ಮೆಚ್ಚುಗೆನ್ನು ಸುಲಭವಾಗಿ ಗಳಿಸಬಹುದಾದ ರುಚಿಕರ ಮೂಲಂಗಿ ಪರೋಟ ಖಾದ್ಯವನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ಉಣಬಡಿಸುತ್ತಿದ್ದೇವೆ. ಇದು ಬೆಳಗಿನ ತಂಪಾದ ವಾತಾವರಣಕ್ಕೆ ಬೆಚ್ಚಗಿನ ಆಹ್ಲಾದವನ್ನುಂಟು ಮಾಡುವುದರ ಜೊತೆಗೆ ಆರೋಗ್ಯಕಾರಿಯೂ ಆಗಿದೆ. ಮೂಲಂಗಿಯಲ್ಲಿ ತಯಾರಿಸಬಹುದಾದ ಈ ಸರಳ ಪರೋಟ ಸಿದ್ಧಪಡಿಸಲು ಗಂಟೆಗಳನ್ನು ತೆಗೆದುಕೊಳ್ಳುವುದಿಲ್ಲ.

Radish Paratha Recipe For Breakfast

ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ಮೂಲಂಗಿ ಪರೋಟ ಬಾಯಲ್ಲಿ ಸ್ವಾದದ ಅನುಭವವನ್ನು ಹಾಗೆಯೇ ಇರಿಸುತ್ತದೆ ಮತ್ತು ಇನ್ನಷ್ಟು ಪರೋಟಾವನ್ನು ತಿನ್ನುವಂತೆ ಮಾಡುತ್ತದೆ. ಮೂಲಂಗಿಯೊಂದಿಗೆ ಮಿಶ್ರ ಮಾಡುವ ಇತರ ತರಕಾರಿಗಳು ಮಸಾಲೆ ಪದಾರ್ಥಗಳು ಈ ಪರೋಟಾದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸತ್ವಪೂರ್ಣ ತಿಂಡಿಯನ್ನು ನಿಮಗೆ ಒದಗಿಸುತ್ತದೆ.

ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಪರೋಟ ರೆಸಿಪಿಯ ತಯಾರಿ ವಿಧಾನವನ್ನು ಕೆಳಗೆ ನಾವು ನೀಡಿದ್ದು ನಿಮ್ಮ ಕೆಲಸವನ್ನು ಇದು ಹಗುರಗೊಳಿಸುತ್ತದೆ. ಹಾಗಿದ್ದರೆ ಇನ್ನೇಕೆ ತಡ ರುಚಿಯಾದ ಶುಚಿಯಾದ ಪರೋಟ ತಯಾರಿಗೆ ಸಿದ್ಧಗೊಳ್ಳಿ ಮತ್ತು ಸ್ವಾದದ ಪರಿಪೂರ್ಣ ಅನುಭವವನ್ನು ಅನುಭವಿಸಿ.
ಪರೋಟದಲ್ಲಿ ಭಿನ್ನ ರುಚಿ-ಕಾರ್ನ್ ಪರೋಟ

ಪ್ರಮಾಣ: 3
*ಸಿದ್ಧತಾ ಸಮಯ: 15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ಮೂಲಂಗಿ - 2 ಕಪ್ (ತುರಿದದ್ದು)
*ಈರುಳ್ಳಿ - 1
*ಬೆಳ್ಳುಳ್ಳಿ ಪೇಸ್ಟ್ - 3 ಚಮಚ
*ಜೀರಿಗೆ ಪುಡಿ - 1 ಚಮಚ
*ಅಮೆಚೂರ್ - 1 ಚಮಚ
*ಗರಮ್ ಮಸಾಲಾ -1/2 ಚಮಚ
*ಕಾಳುಮೆಣಸು - 1/2 ಚಮಚ
*ಕೊತ್ತಂಬರಿ - 2 - 3 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಗೋಧಿ ಹಿಟ್ಟು- 1 ಕಪ್ ಪೂರ್ಣ
*ಕಪ್ ನೀರು- 1/4(ಬೇಕಾದಷ್ಟು)
ಎಣ್ಣೆ ಅಥವಾ ತುಪ್ಪ - ಸ್ವಲ್ಪ

ಮಾಡುವ ವಿಧಾನ
1. ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
2. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ.
3. ಹಿಟ್ಟನ್ನು ಸಾಕಷ್ಟು ನೀರು ಹಾಕಿ ಕಲಸಿ.
4. ಇನ್ನು 6 ಇಂಚು ಅಗಲದಲ್ಲಿ ಇದನ್ನು ಲಟ್ಟಿಸಿಕೊಳ್ಳಿ.
5. ಮಧ್ಯಕ್ಕೆ ಬೇಯಿಸಿದ ಮೂಲಂಗಿಯನ್ನು ಇಡಿ.
6. ತದನಂತರ ಇದನ್ನು ಅರ್ಧಕ್ಕೆ ಮಡಚಿ.
7. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.
8. ಇನ್ನು ಪಾತ್ರೆಯನ್ನು ಬಿಸಿ ಮಾಡಲು ಇರಿಸಿ.
9. ಪಾತ್ರೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ.
10. ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‌ಗೆ ಹಾಕಿ ಬೇಯಿಸಿ.
11. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ.
12. ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.

English summary

Radish Paratha Recipe For Breakfast

Radish is one of the very few vegetables which only a handful consume. Being a gassy kind of vegetable, the elderly folk tend to keep away from it. To make this radish paratha, try out this yummy breakfast recipe for breakfast:
Story first published: Wednesday, August 20, 2014, 17:25 [IST]
X
Desktop Bottom Promotion